Featured

ಇತಿಹಾಸ ಪ್ರಸಿದ್ಧ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅವ್ಯವಹಾರ ; ಕ್ರಿಮಿನಲ್ ಕೇಸು ದಾಖಲಿಸಲು ಉಡುಪಿ ಡೀಸಿ ಆದೇಶ

ಉಡುಪಿ/ಕುಂದಾಪುರ: ಇತಿಹಾಸ ಪ್ರಸಿದ್ಧ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ವ್ಯವಸ್ಥಾನದ ವ್ಯವಸ್ಥಾಪನಾ ಸಮಿತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ದಾಖಲೆಗಳನ್ನು ನಾಶಪಡಿಸಿದ ಘಟನೆ ದೇವಸ್ಥಾನದಲ್ಲಿ ನಡೆದಿದೆ.

ದೇವಸ್ಥಾನಕ್ಕೆ ಬರುವ ಭಕ್ತರಿಗೆ ನೀಡಲಾಗುತ್ತಿದ್ದ ಸೇವಾ ಚೀಟಿಯಲ್ಲಿ ಕ್ರಮಸಂಖ್ಯೆ ಒಂದೇ ಇರುವುದನ್ನು ಗಮನಿಸಿದ ಭಕ್ತರು ದೇವಸ್ಥಾನದ ಆಡಳಿತ ವ್ಯವಸ್ಥಾಪನಾ ಸಮಿತಿಯ ಗಮನಕ್ಕೆ ತಂದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೇವಾ ಚೀಟಿಗಳನ್ನು ಮುದ್ರಣಕ್ಕೆ ಬಳಸುತ್ತಿದ್ದ ಕಂಪ್ಯೂಟರ್ ಆಪರೇಟರ್ ರಾಜೇಶ್ ಕಾಮತ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರು ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಏನಿದು ಅವ್ಯವಹಾರ? ದೇವಿ ದರ್ಶನಕ್ಕೆ ಬರುವ ಭಕ್ತರಿಗೆ ಸೇವೆ ಸಲ್ಲಿಸಲು ಹಣ ಪಡೆದು ನೀಡಲಾಗುವ ಚೀಟಿಯಲ್ಲಿ ದೇವಸ್ಥಾನದ ಸಿಬ್ಬಂದಿ ಅಸಲಿ ರಶೀದಿ ನೀಡದೇ ನಕಲಿ ಚೀಟಿಗಳನ್ನು ನೀಡಿ ವಂಚಿಸಲಾಗುತ್ತಿದೆ ಎನ್ನುವುದು ಬಹಿರಂಗಗೊಂಡಿದೆ. ಕಚೇರಿಯ ಕಂಪ್ಯೂಟರ್ ನಲ್ಲಿ ತೆಗೆಯುವ ಪ್ರತೀ ರಶೀದಿಯಲ್ಲಿಯೂ ಕ್ರಮಸಂಖ್ಯೆ ನಮೂದಾಗುತ್ತಿದ್ದು, ಕೆಲವು ಒಂದೇ ಸಂಖ್ಯೆಯ ರಶೀದಿಗಳನ್ನು ನೀಡುವ ಮೂಲಕ ದೇವಳಕ್ಕೆ ಸಲ್ಲಬೇಕಾದ ಹಣವನ್ನು ಲಪಟಾಯಿಸಲಾಗುತ್ತಿದೆ ಎನ್ನುವುದು ಮೇಲ್ನೋಟದ ತನಿಖೆಯಲ್ಲಿ ಕಂಡುಬಂದಿದೆ.

ಶುಕ್ರವಾರ ಸಂಕ್ರಾಂತಿಯ ವಿಶೇಷ ಪೂಜೆ ನಡೆದಿದ್ದು, ದೇವಿಯ ಸರ್ವಾಲಂಕಾರ ಪೂಜೆಗೆ ತಲಾ 350 ರೂಪಾಯಿಗಳಂತೆ 28 ಭಕ್ತರು ರಶೀದಿ ಪಡೆದಿದ್ದರು. ಇದರಲ್ಲಿ 8 ರಶೀದಿ ಮಾತ್ರ ಬೇರೆ ಕ್ರಮಸಂಖ್ಯೆಗಳನ್ನು ಹೊಂದಿದ್ದು, ಉಳಿದಂತೆ 20 ರಶೀದಿಗಳು ಒಂದೇ ಕ್ರಮಸಂಖ್ಯೆಯಲ್ಲಿ ಮುದ್ರಿತವಾಗಿದ್ದವು. ಇದರಿಂದ ಸಿಬ್ಬಂದಿಗೆ ಅನುಮಾನವುಂಟಾಯಿತು. ಆದರೆ ಈ ಬಗ್ಗೆ ವಿಚಾರಿಸಲು ದಿನಂಪ್ರತಿ ರಶೀದಿ ತೆಗೆಯುತ್ತಿದ್ದ ರಾಜೇಶ್ ಕಾಮತ್ ರಜೆಯಲ್ಲಿದ್ದ ಎನ್ನಲಾಗಿದೆ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಗಮನಕ್ಕೆ ತರಲಾಗಿ ಇಲಾಖೆಗೆ ದೂರು ನೀಡುವಂತೆ ಸೂಚಿಸಿದ್ದು, ಅದರಂತೆ ತನಿಖೆ ನಡೆಸಲಾಗಿದೆ.

ಅವ್ಯವಹಾರದ ಮಾಹಿತಿ ತಿಳಿದು ತನಿಖೆಗೆ ಮುಂದಾದಾಗ, ರಾಜೇಶ್ ಕಾಮತ್ ಕಂಪ್ಯೂಟರ್ ನಲ್ಲಿ ಇರುವ ದಾಖಲೆಗಳು ನಾಶವಾಗಿದ್ದವು. ಕಳೆದ ಎರಡು ವರ್ಷಗಳ ದಾಖಲೆಗಳನ್ನು ಡಿಲೀಟ್ ಮಾಡಿರುವುದಾಗಿ ತಿಳಿದುಬಂದಿದೆ. ಅಲ್ಲಿ ಕೆಲಸ ಮಾಡುತ್ತಿದ್ದ ಆಶೋಕ್ ಎಂಬಾತನು ಪಾಸ್ ವಾರ್ಡ್ ಬಳಸಿ ಇಟ್ಟಿದ್ದ ದಾಖಲೆಗಳನ್ನು ಕೂಡ ನಾಶ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ತನಿಖಾಧಿಕಾರಿ ನಿಂಗಯ್ಯ ನಕಲಿ ರಶೀದಿಗಳನ್ನು ಹಾಗೂ ಕಂಪ್ಯೂಟರ್ ನ್ನು ವಶಕ್ಕೆ ಪಡೆದಿದ್ದು, ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಪ್ರಾನ್ಸಿಸ್ ಅವರಿಗೆ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರಿಗೆ ಸೂಚಿಸಿದ್ದಾರೆ. ದೇವಸ್ಥಾನದ ಅನ್ನ ಸಂತರ್ಪಣೆಯ ವಿಚಾರದಲ್ಲಿಯೂ ಕಳಪೆ ಸಾಮಗ್ರಿಗಳನ್ನು ತರಿಸಿ ಹೆಚ್ಚು ಬಿಲ್ ಪಾವತಿ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಆರೋಪಗಳೂ ಕೇಳಿ ಬರುತ್ತಿದೆ. ಒಟ್ಟಾರೆಯಾಗಿ ಮುಜರಾಯಿ ಇಲಾಖೆಯ ಅಧೀನಕ್ಕೆ ಬರುವ ದೇವಳಗಳಲ್ಲಿ ಬರುವ ಭಕ್ತರ ಕಾಣಿಕೆಗಳ ಲೆಕ್ಕಾಚಾರ ಎಷ್ಟರ ಮಟ್ಟಿಗೆ ಸರಿಯಿದೆ ಎನ್ನುವುದರ ಬಗ್ಗೆ ಇದೀಗ ಸಾಮಾಜಿಕ ವಲಯದಲ್ಲಿ ಅನುಮಾನಕ್ಕೆ ಕಾರಣವಾಗುತ್ತಿದೆ.

Vishwa News 24

Recent Posts

ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ :  ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ – vishwanews24

ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ :  ಪೃಥ್ವಿರಾಜ್…

8 hours ago

ಜನಿವಾರ, ಹಿಜಾಬ್, ಉಡುದಾರ, ರುದ್ರಾಕ್ಷಿ ಹಾಕಿಕೊಳ್ಳಬಹುದು ಹೊರತು ಕೇಸರಿ ಶಾಲಿಗೆ ಅವಕಾಶ ಇಲ್ಲ : ಸಿಎಂ ಸ್ಪಷ್ಟನೆ – vishwanews24

ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಹೊಸದಾಗಿ ಮಾಡುವಂತಿಲ್ಲ : ಸಿಎಂ ಸ್ಪಷ್ಟನೆ ಮೈಸೂರು : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ…

10 hours ago

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ : ತಮಿಳುನಾಡು ಸರ್ಕಾರ ಆದೇಶ – vishwanews24

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ :  ಸಿಎಂ ವಿಜಯ್ ಸರ್ಕಾರ ಆದೇಶ ಚೆನ್ನೈ: ಇನ್ನು ಮುಂದೆ…

11 hours ago

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ – vishwanews24

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ ನಾನು ಮೋದಿಯವರನ್ನು ಹೊಗಳುತ್ತಿಲ್ಲ.…

11 hours ago

ಸಕ್ಕರೆ ರಫ್ತಿಗೆ ಸೆ.30 ರವರೆಗೆ ಸಂಪೂರ್ಣ ನಿಷೇಧ ಹೇರಿದ ಸರ್ಕಾರ – vishwanews24

ಸಕ್ಕರೆ ರಫ್ತಿಗೆ ಸೆ.30 ರವರೆಗೆ ಸಂಪೂರ್ಣ ನಿಷೇಧ ಹೇರಿದ ಸರ್ಕಾರ ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆಯನ್ನು ನಿಯಂತ್ರಿಸಲು ಮತ್ತು…

11 hours ago

ಹಿಜಬ್‌ಗೆ ಅವಕಾಶ :ಪ್ರಣಾಳಿಕೆಯಲ್ಲಿ ಸಮಾನತೆಯ ಮಾತು ಕೊಟ್ಟಿದ್ವಿ , ಯಾವುದೇ ಕಾರಣಕ್ಕೂ ಆದೇಶ ವಾಪಸ್ ಪಡೆಯಲ್ಲ : ಮಧು ಬಂಗಾರಪ್ಪ – vishwanews24

ಹಿಜಬ್ ಬಗ್ಗೆ ಮಾತಾಡುವ ಬಿಜೆಪಿಯವರು  ನೀಟ್ ಬಗ್ಗೆ ಮಾತಾಡಲಿ : ಮಧು ಬಂಗಾರಪ್ಪ ಆಕ್ರೋಶ ಬೆಂಗಳೂರು: ಹಿಜಬ್ ಬಗ್ಗೆ ಮಾತಾಡುವ…

11 hours ago