ಮಂಗಳೂರು : ರಾಜ್ಯ ನೂತನ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅಧಿಕಾರ ಸ್ವೀಕರಿಸಲು ಸಜ್ಜಾಗಿರುವಂತೆಯೇ ಕರ್ನಾಟಕ ಕರಾವಳಿಯ ಜನತೆ ಇದು ನಿಜಕ್ಕೂ ನಮ್ಮ ಸರಕಾರವೇ ಎಂದು ಪ್ರಶ್ನೆ ಕೇಳುವಂತಾಗಿದೆ.
ಕೊಡಗು ಜಿಲ್ಲೆಯಿಂದ ಆರಂಭಿಸಿ ಉತ್ತರ ಕನ್ನಡ ಜಿಲ್ಲೆಯತನಕ, ಆಸುಪಾಸಿನ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಗಡಿ ಪ್ರದೇಶದ ವಿಧಾನಸಭಾ ಕ್ಷೇತ್ರಗಳನ್ನು ಸೇರಿಸಿದರೆ ಹೆಚ್ಚು ಕಡಿಮೆ ಎಲ್ಲ ಕಡೆ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಗಳು ಶಾಸಕರಾಗಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ ಜಾತ್ಯತೀತ ಜನತಾ ದಳ ಸರಕಾರ ರಚನೆ ಮಾಡುತ್ತಿದ್ದು, ನಾವು ಗೆಲ್ಲಿಸಿ ಕಳುಹಿಸಿದ ಶಾಸಕರು ಎನ್ನಲು ಕರಾವಳಿಯ ಮೂರು ಜಿಲ್ಲೆಗಳಲ್ಲಿ ಯಾವೊಬ್ಬ ಜೆಡಿಎಸ್ ಶಾಸಕನಿಲ್ಲ.
ಜೆಡಿಎಸ್ ಹಾಗಿರಲಿ ಕಾಂಗ್ರೆಸ್ ಕೂಡ ಮೂರು ಜಿಲ್ಲೆಗಳಲ್ಲಿ ಕೇವಲ ಮೂರು ಶಾಸಕರನ್ನು ಮಾತ್ರ ಹೊಂದಿದೆ. ಮೂರು ಜಿಲ್ಲೆಗಳ 19 ವಿಧಾನಸಭಾ ಕ್ಷೇತ್ರಗಳಲ್ಲಿ ಕೇವಲ ಇಬ್ಬರು ಸಚಿವರು ಮತ್ತು ಒಬ್ಬ ಶಾಸಕ ಮರು ಆಯ್ಕೆ ಆಗಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಎಂದೇ ಹೇಳಲಾಗುವ ವೀರಪ್ಪ ಮೊಯ್ಲಿ ಮತ್ತು ಆಸ್ಕರ್ ಫರ್ನಾಂಡಿಸ್ ಅವರ ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಖಾತೆಯೇ ತೆರೆದಿಲ್ಲ.
ಮೂರು ಜಿಲ್ಲೆಗಳಲ್ಲಿ ದೇಶಪಾಂಡೆ ಅವರು ಕುಮಾರಸ್ವಾಮಿ ಮಂತ್ರಿಮಂಡಲದಲ್ಲಿ ಸಚಿವರಾಗುವುದು ಬಹುತೇಕ ಖಚಿತವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಖಾದರ್ ಸಚಿವರಾಗುತ್ತಾರೆ ಎಂಬುದು ಇದೀಗ ಪ್ರಶ್ನೆಯಾಗಿದೆ ಉಳಿದಿದೆ.
ಜೆಡಿಎಸ್ ವಿಧಾನಪರಿಷತ್ ಸದಸ್ಯರು ಕರಾವಳಿಯ ಜಿಲ್ಲೆಯಿಂದ ಯಾರೂ ಇಲ್ಲದಿದ್ದರೂ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಮೊಹಿಯುದ್ದೀನ್ ಬಾವ ಅವರ ತಮ್ಮ ಫಾರೂಕ್ ಅವರನ್ನು ಸಚಿವರನ್ನಾಗಿ ಮಾಡಲಾಗುತ್ತದೆ ಎಂಬ ವದಂತಿ ದಟ್ಟವಾಗಿ ಹರಡಿದೆ.
ಫಾರೂಕ್ ಬೆಂಗಳೂರಿನಲ್ಲಿ ಉದ್ಯಮ ನಡೆಸುವ ಹಣದ ಥೈಲಿಯ ಉದ್ಯಮಿಯೇ ಹೊರತು ರಾಜಕಾರಣಿಯೂ ಅಲ್ಲ, ಸಮಾಜ ಸೇವಕನೂ ಅಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗೊಂದು ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಫಾರೂಕ್ ನಿಯುಕ್ತಿಗೊಂಡರೆ ಇವರ ಕಾರ್ಯಶೈಲಿ ಹೇಗಿರಬಹುದು ಎಂಬ ಸ್ವಾರಸ್ಯಕರ ಚರ್ಚೆ ಕರಾವಳಿಯಲ್ಲಿ ಆರಂಭವಾಗಿದೆ.
ಕರಾವಳಿಯ ಜನತೆ ಹೇಳಿಕೇಳಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಾಕ್ಷರತೆ ಹೊಂದಿದವರು ಮತ್ತು ಉನ್ನತ ಶಿಕ್ಷಣ ಹೊಂದಿದವರೂ ಆಗಿದ್ದರೆ. ಆದರೆ, ಅವರು ಆಯ್ಕೆ ಮಾಡಿ ಕಳುಹಿಸುವ ಲೋಕಸಭಾ ಸದಸ್ಯರು, ಶಾಸಕರ ಶಿಕ್ಷಣ ಮಟ್ಟ, ಅಭಿವೃದ್ಧಿಯ ಕುರಿತಾಗಿ ಅವರ ದೂರದರ್ಶಿ ಚಿಂತನೆಗಳು ದಕ್ಷಿಣ ಕನ್ನಡ ಜಿಲ್ಲೆಗೆ ಅವಮಾನಕಾರಿಯಾಗಿದೆ.
ಫಾರೂಕ್ ಜಿಲ್ಲಾ ಉಸ್ತುವಾರಿ ಸಚಿವನಾದರೆ ಹೈಸ್ಕೂಲ್ ಮುಗಿಸದ ಲೋಕಸಭಾ ಸದಸ್ಯನೊಂದಿಗೆ ಈ ಉಸ್ತುವಾರಿ ಯಾವ ಮಹಾನ್ ಕಾರ್ಯ ಮಾಡಬಲ್ಲರು ಎಂಬುದನ್ನು ಕಾದು ನೋಡಬೇಕಾಗಿದೆ
ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…