ನವದೆಹಲಿ: ವಿಮಾನದಲ್ಲಿ ಪ್ರಯಾಣಿಸುವವರು ಇನ್ನು ಮುಂದೆ ಕೇವಲ 1 ಬ್ಯಾಗ್ ಮಾತ್ರ ಕ್ಯಾಬಿನ್ ಒಳಗೆ ಕೊಂಡೊಯ್ಯಬಹುದು. ಜೊತೆಗೆ ಅವರು ಕೊಂಡೊಯ್ಯುವ ಬ್ಯಾಗ್ 7 ಕೆ.ಜಿ. ಮೀರಿರಬಾರದು. ಅಲ್ಲದೆ ಬ್ಯಾಗ್ 115 ಸೆಂ.ಮೀ.ಗಿಂತ ಹೆಚ್ಚಿರಬಾರದು ಎಂದು ನಾಗರಿಕ ವಿಮಾನ ಯಾನ ಭದ್ರತಾ ಬ್ಯೂರೋ (ಬಿಸಿಎಎಸ್) ತಿಳಿಸಿದೆ.
ಇತ್ತೀಚಿನ ದಿನಗಳಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆ ಏರುತ್ತಿರುವ ಹಿನ್ನೆಲೆ ಬಿಸಿಎಎಸ್ ಮತ್ತು ವಿಮಾನ ನಿಲ್ದಾಣದ ಭದ್ರತೆಯ ಜವಾಬ್ದಾರಿ ಹೊಂದಿರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಹೊಸ ಹ್ಯಾಂಡ್ ಬ್ಯಾಗೇಜ್ ನೀತಿಗೆ ಸಂಬಂಧಿಸಿದ ನಿಯಮಗಳನ್ನು ಕಠಿಣಗೊಳಿಸಿದೆ.
ಹೊಸ ಬಿಸಿಎಎಸ್ ಹ್ಯಾಂಡ್ ಬ್ಯಾಗೇಜ್ ನೀತಿಯ ಪ್ರಕಾರ ಪ್ರಯಾಣಿಕರು ಈಗ ವಿಮಾನದೊಳಗೆ ಕೇವಲ ಒಂದು ಬ್ಯಾಗ್ ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿದೆ. ಈ ನಿಯಮ ಎಲ್ಲಾ ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳ ಪ್ರಯಾಣಿಕರಿಗೆ ಅನ್ವಯವಾಗುತ್ತದೆ. ಇನ್ನು ಫಸ್ಟ್ ಅಥವಾ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸುವವರು 10 ಕೆ.ಜಿ. ವರೆಗೆ ಕೊಂಡೊಯ್ಯಬಹುದು. ಈ ಹೊಸ ನಿಯಮ ಈ ವರ್ಷ ಮೇ 2ಕ್ಕಿಂತ ಮೊದಲ ಟಿಕೆಟ್ ಬುಕ್ ಮಾಡಿದವರಿಗೆ ಅನ್ವಯಿಸುವುದಿಲ್ಲ.
ಮೇ 2ಕ್ಕಿಂತ ಮೊದಲು ಬುಕ್ ಮಾಡಿದ ಎಕಾನಮಿ ಪ್ರಯಾಣಿಕರು 8 ಕೆಜಿ, ಪ್ರೀಮಿಯಂ ಎಕಾನಮಿ ಪ್ರಯಾಣಿಕರು 10 ಕೆಜಿ ಮತ್ತು ಬಿಸಿನೆಸ್ ಕ್ಲಾಸ್‌ನ ಪ್ರಯಾಣಿಕರು 12 ಕೆಜಿ ತೂಕದ ಬ್ಯಾಗ್ ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿದೆ.
ನನ್ನ ಜೀವನದ ಕೊನೆ ಘಟ್ಟದವರೆಗೂ ಮೈತ್ರಿ ಮುಂದುವರೆಸಿಕೊಂಡು ಹೋಗುತ್ತೇನೆ : ಹೆಚ್‌ಡಿಡಿ ಬೆಂಗಳೂರು: ಒಂದು ರಾಜ್ಯಸಭೆ ಸ್ಥಾನದಿಂದ ನನ್ನ, ಮೋದಿ …
ಜೂನ್ 15 ರಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ : ಕೇರಳ ಸರ್ಕಾರ ಘೋಷಣೆ ತಿರುವನಂತಪುರಂ: ಕೇರಳ ಸರ್ಕಾರ ಮಹತ್ವದ…
ರೇಣುಕಾಸ್ವಾಮಿ ಕೊಲೆ ಪ್ರಕರಣ : ಐವರು ಆರೋಪಿಗಳ ಜಾಮೀನು ರದ್ದು ಅರ್ಜಿ ವಜಾಗೊಳಿಸಿದ ಹೈಕೋರ್ಟ್ ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ…
ಮನೆ ಕೆಲಸಕ್ಕೆ ಸೇರಿದ್ದ ದಂಪತಿಯಿಂದ ಕಳ್ಳತನ ; 25 ಲಕ್ಷ ಹಣ ಕದ್ದು ನೇಪಾಳಕ್ಕೆ ಎಸ್ಕೇಪ್ ಆಗುತ್ತಿದ್ದ ವೇಳೆ ಅರೆಸ್ಟ್ ಬೆಂಗಳೂರು:…
ಮಂಗಳೂರು: ಜೋಕಟ್ಟೆ ಫ್ಲೈಓವರ್ ಬಳಿ ಅಪರಿಚಿತ ಯುವಕನ ಶವ ಪತ್ತೆ ಮಂಗಳೂರು: ಪಣಂಬೂರಿನ ಜೋಕಟ್ಟೆ ಬಳಿ ಬುಧವಾರ ಯುವಕನೊಬ್ಬನ ಶವ…
ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿ, ಗೋಹತ್ಯೆ, ಗೋಮಾಂಸ ರಫ್ತನ್ನು ನಿಷೇಧಿಸಿ: ಮುಸ್ಲಿಂ ಬಾಂಧವ್ಯ ವೇದಿಕೆ ಉಡುಪಿ: ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ…