ಬೆಳ್ತಂಗಡಿ: ಇನ್ನು ಮುಂದಾದರೂ ಕಣಿವೆ ರಾಜ್ಯಗಳಲ್ಲಿ ಭಾರತೀಯತೆ ಹೆಚ್ಚಲಿ ಮತ್ತು ಹಿಂಸೆ ನಿಲ್ಲಲಿ ಇದುವರೆಗೆ ಬಲಿದಾನವಾದ ಭಾರತೀಯ ಸೈನಿಕರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಹಾರೈಸಿದ್ದಾರಲ್ಲದೆ, ಸರಕಾರದ ನಡೆಯನ್ನು ಸ್ವಾಗತಿಸಿದ್ದಾರೆ.
ಕಾಶ್ಮೀರದ ವಿಚಾರದಲ್ಲಿ ಕೇಂದ್ರ ಸರ್ಕಾರದ ತೀರ್ಮಾನದಿಂದ ಅನಿಶ್ಚಿತತೆಯಿಂದಿರುವ ರಾಜ್ಯಕ್ಕೆ ಸ್ಪಷ್ಟ ನಿಲುವು ಸಿಕ್ಕಿದೆ. ಯಾವುದೇ ಕಾರಣಕ್ಕೂ ಕಾಶ್ಮೀರ ಭಾರತದ ಅಂಗವೆಂದು ಇದ್ದ ಧೋರಣೆಗೆ ಸಂವಿಧಾನತ್ಮಕವಾದ ನಿಲುವು ಮತ್ತು ದೃಢವಾದ ಮುದ್ರೆ ಬಿದ್ದಿದೆ.
ಹೆಗ್ಗಡೆಯವರು ತಮ್ಮ ಹಿಂದಿನ ಕಾಶ್ಮೀರ ಪ್ರವಾಸದ ಸಂದರ್ಭವನ್ನು ನೆನಪಿಸುತ್ತಾ, ನಾವು 2017 ರ ಜುಲೈ ತಿಂಗಳಲ್ಲಿ ಕಾಶ್ಮೀರದ ಶ್ರೀನಗರದಲ್ಲಿ ಒಂದು ವಾರ ಇದ್ದೆವು. ಅಲ್ಲಿನ ಜನಜೀವನದಲ್ಲಿ ಸ್ಥಳೀಯರು ಭಯದಿಂದ ವಾಸಿಸುತ್ತಿದ್ದರು ಮತ್ತು ಸದ್ಯ ನಡೆಯುತ್ತಿದ್ದ ಭಯೋತ್ಪಾದಕತೆಯ ಚಲನವಲನಗಳಿಂದ ಆಗಿರುವ ನಷ್ಟಗಳನ್ನು ಹೇಳಿಕೊಳ್ಳುತ್ತಿದ್ದರು.
ಮುಖ್ಯವಾಗಿ ಕಾಶ್ಮೀರವನ್ನು ಭಾರತದ ಭಾಗವೆಂದು ಹೊರ ರಾಜ್ಯದವರು ಪರಿಗಣಿಸಿದ್ದರು. ಅಲ್ಲಿ ವಾಸಿಸುತ್ತಿದ್ದ ಯುವಕರಿಗೆ ಆ ಭಾವನೆ ಇರಲಿಲ್ಲ, ಆದರೆ, ಅಲ್ಲಿನ ಬಹುತೇಕ ಮಂದಿಗೆ ಇದರಿಂದ ಲಾಭವೇನು ಇರಲಿಲ್ಲ. ದೇಶ-ವಿದೇಶದಿಂದ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆ ಆಗಿತ್ತು. ಅವರು ನಿರುದ್ಯೋಗದಿಂದ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದರು ಎಂದು ಅವರು ವಿವರಿಸಿದ್ದಾರೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…