Featured

ಇನ್ನು ಮುಂದೆ ಮನೆಯಲ್ಲಿಯೇ ಕುಳಿತು ನಿಮ್ಮ ವೋಟರ್‌ ಐಡಿ ತಿದ್ದುಪಡಿ ಮಾಡಲು ಅವಕಾಶ -Vishwanews24

ಉಡುಪಿ: ಇನ್ನು ಮುಂದೆ  ಮನೆಯಲ್ಲಿಯೇ ಕುಳಿತು ಈ ಎಲ್ಲಾ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.

ಮತದಾರರ ಪಟ್ಟಿಯಲ್ಲಿನ ಭಾವಚಿತ್ರ ಬದಲಾವಣೆ,(ಬಣ್ಣದ ಭಾವಚಿತ್ರ ಸೇರ್ಪಡೆ) ತಪ್ಪಾಗಿರುವ ಜನ್ಮ ದಿನಾಂಕ, ವಿಳಾಸ ಬದಲಾವಣೆಗೆ ಭಾರತೀಯ ಚುನಾವಣಾ ಆಯೋಗ ಈಗ ಸಾರ್ವಜನಿಕರಿಗೆ ನೇರ ಅವಕಾಶ ಒದಗಿಸಿದೆ.
ವೋಟರ್‌ ಹೆಲ್ಪ್‌ ಲೈನ್‌ ಆ್ಯಪ್‌ ಡೌನ್ಲೋಡ್‌ ಮಾಡಿಕೊಂಡು ನಾವೇ ಸ್ವತಃ ಬೇಕಾದ ಬದಲಾವಣೆಗಳನ್ನು ಮಾಡಿಕೊಳ್ಳಬಹುದಾಗಿದೆ.

ನಿಮ್ಮ ಮೊಬೈಲ್‌ನ ಪ್ಲೇ ಸ್ಟೋರ್ಸ್‌ನಲ್ಲಿವೋಟರ್‌ ಹೆಲ್ಪ್‌ಲೈನ್‌ ಆ್ಯಪ್‌ ಡೌನ್ಲೋಡ್‌ ಮಾಡಿಕೊಳ್ಳಿ, ಅದರಲ್ಲಿಬರುವ ಸೂಚನೆಗಳನ್ನು ಪಾಲಿಸಿ, ನೆಕ್ಸ್ಟ್ ಒತ್ತಿ, ನಂತರ ಬರುವ ಸ್ಕ್ರೀನ್‌ನಲ್ಲಿ ಇವಿಪಿ ಎಂಬುದನ್ನು ಪ್ರೆಸ್‌ ಮಾಡಿ, ನಿಮ್ಮ ಮೊಬೈಲ್‌ ಸಂಖ್ಯೆ ನೀಡಿ, ನಂತರ ಬರುವ ಒಟಿಪಿ ದಾಖಲಿಸಿದಾಗ, ನಿಮ್ಮ ವೋಟರ್‌ ಐಡಿಯ ಸಂಖ್ಯೆಗೆ ನಿಮ್ಮ ಮೊಬೈಲ್‌ ಸಂಖ್ಯೆಯನ್ನು ಲಿಂಕ್‌ ಮಾಡಲು ಸೂಚನೆ ಬರುತ್ತದೆ, ಇದನ್ನು ಪಾಲಿಸಿದ ನಂತರ ಬರುವ ಸ್ಕ್ರೀನ್‌ನ್ನಲ್ಲಿವಿವರಗಳನ್ನು ನಮೂದಿಸಿ, ಮತದಾರರ ಪಟ್ಟಿಯಲ್ಲಿನ ನಿಮ್ಮ ಹೆಸರನ್ನು ಹುಡುಕಿದಾಗ, ನಿಮ್ಮ ಭಾವಚಿತ್ರ ಸಹಿತ ಮಾಹಿತಿ ಬರಲಿದೆ.

ಈ ಭಾವಚಿತ್ರ ಸಹಿತ ಮಾಹಿತಿಯಲ್ಲಿನಿಮ್ಮ ಭಾವಚಿತ್ರ, ಹೆಸರು, ವಯಸ್ಸು, ಲಿಂಗ, ತಂದೆ, ಪತಿ ಹೆಸರು, ವಿಳಾಸ ಇವುಗಳ ಮುಂದೆ ಪೆನ್ಸಿಲ್‌ ಐಕಾನ್‌ ಇದ್ದು, ನೀವು ಯಾವುದನ್ನು ಬದಲಾವಣೆ ಮಾಡಬೇಕೋ ಅದನ್ನು ಒತ್ತಿದಾಗ, ಆ ಬದಲಾವಣೆಗೆ ಪೂರಕ ದಾಖಲೆಗಳನ್ನು ಅಪ್‌ಲೋಡ್‌ ಮಾಡಲು ಕೋರುತ್ತದೆ, ಸಂಬಂಧಪಟ್ಟ ದಾಖಲೆಗಳನ್ನು ಅಪ್‌ ಲೋಡ್‌ ಮಾಡಿದಲ್ಲಿ, ಮತದಾರರ ಗುರುತು ಚೀಟಿಯಲ್ಲಿನೀವು ಕೋರಿದ ಬದಲಾವಣೆ ಸಾಧ್ಯವಾಗಲಿದೆ. ಭಾರತೀಯ ಚುನಾವಣಾ ಆಯೋಗ, ಮತದಾರರಿಗೆ ನೀಡಿರುವ ಈ ಸದಾವಕಾಶ ಅಕ್ಟೋಬರ್‌ 15ರ ವರೆಗೆ ಮಾತ್ರ ದೊರೆಯಲಿದ್ದು, ಆ ನಂತರ ನೀವು ಬದಲಾವಣೆ ಮಾಡಿರುವ ಹೊಸ ವೋಟರ್‌ ಐಡಿ ಕಾರ್ಡ್‌ ನೀಡುವ ಪ್ರಕ್ರಿಯೆ ಆರಂಭಗೊಳ್ಳಲಿದೆ.

ಮತದಾರರ ಬಹುಕಾಲದ ಬೇಡಿಕೆಯಾದ ತಮ್ಮ ಭಾವಚಿತ್ರ ತಿದ್ದುಪಡಿ ಮತ್ತು ಇತರೆ ತಿದ್ದುಪಡಿಗಳನ್ನು ಮತದಾರರೇ ಮಾಡಿಕೊಳ್ಳಲು ಚುನಾವಣಾ ಆಯೋಗ ಸಿದ್ದಪಡಿಸಿರುವ, ಈ ವೋಟರ್‌ ಹೆಲ್ಪ್‌ ಲೈನ್‌ ಆ್ಯಪ್‌ ಅತ್ಯಂತ ಸರಳವಾಗಿದ್ದು, ಬಳಕೆದಾರರ ಸ್ನೇಹಿಯಾಗಿ ರೂಪಿಸಲಾಗಿದೆ. ಈ ಆಪ್‌ ಬಳಕೆ ಬಗ್ಗೆ ಯಾವುದೇ ಸಮಸ್ಯೆಗಳಿದ್ದಲ್ಲಿ, ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಜಿಲ್ಲಾಮತದಾರರ ಸಹಾಯವಾಣಿ ಕೇಂದ್ರ ಮತ್ತು ಎಲ್ಲಾತಾಲೂಕುಗಳ ತಹಸೀಲ್ದಾರ್‌ ಕಚೇರಿಗಳನ್ನು ಸಂಪರ್ಕಿಸಿ, ಅಲ್ಲೂಸಹ ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ಹಾಗೂ ಆಪ್‌ ಬಳಕೆ ಮತ್ತಿತರ ಮಾಹಿತಿಗಾಗಿ 24*7 ಮತದಾರರ ಉಚಿತ ಸಹಾಯವಾಣಿ ಸಂಖ್ಯೆ 1950 ಸಂಪರ್ಕಿಸಿ ಈ ಸದವಕಾಶವನ್ನು ಜಿಲ್ಲೆಯ ಎಲ್ಲಾಮತದಾರರೂ ಪಡೆದುಕೊಂಡು ತಮ್ಮ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ಉಡುಪಿ ಜಿಲ್ಲಾಚುನಾವಣಾ ಶಾಖೆಯ ಅಧೀಕ್ಷಕ ಸಂಪತ್‌ ಕುಮಾರ್‌ ತಿಳಿಸಿದ್ದಾರೆ.

ಅಲ್ಲದೇ ಕುಟುಂಬದವರ ಹೆಸರು ಬೇರೆ ಬೇರೆ ಭಾಗದಲ್ಲಿ ಬೇರೆ ಬೇರೆ ಮತಗಟ್ಟೆಯಲ್ಲಿದಾಖಲಾಗಿದ್ದು, ಮತದಾನ ಮಾಡಲು ಬೇರೆ ಬೇರೆ ಕಡೆ ತೆರಳುವ ಸಮಸ್ಯೆಯಿದ್ದಲ್ಲಿ ಅದಕ್ಕೂ ಈ ಆ್ಯಪ್‌ನಲ್ಲಿ ಅವಕಾಶವಿದೆ. ಫ್ಯಾಮಿಲಿ ಗ್ರೂಪ್‌ಗಳಿಗೆ ಸಹ ಅವಕಾಶ ನೀಡಿದ್ದು, ಬೇರೆ ಬೇರೆ ಮತಗಟ್ಟೆಗಳಲ್ಲಿರುವ ಒಂದೇ ಕುಟುಂಬದ ಸದಸ್ಯರನ್ನು ಒಂದೇ ಮತಗಟ್ಟೆಯಲ್ಲಿಒಂದೇ ಭಾಗದಲ್ಲಿಸೇರ್ಪಡೆ ಮಾಡಬಹುದಾಗಿದೆ.

Vishwa News 24

Recent Posts

ಕಾರ್ಕಳ ಮಹಾಮಸ್ತಕಾಭಿಷೇಕ 2027 : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 1.59 ಕೋಟಿ ರೂ. ಮಂಜೂರು – vishwanews24

ಕಾರ್ಕಳ ಮಹಾಮಸ್ತಕಾಭಿಷೇಕ 2027 : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 1.59 ಕೋಟಿ ರೂ. ಮಂಜೂರು ಉಡುಪಿ: ಕಾರ್ಕಳದಲ್ಲಿ 2027ರಲ್ಲಿ ನಡೆಯಲಿರುವ…

11 hours ago

ಕಾಪು: ಕ್ಷುಲ್ಲಕ ವಿಚಾರಕ್ಕೆ ಪತಿಯೊಂದಿಗೆ ಜಗಳವಾಡಿ ಅಪ್ರಾಪ್ತ ಮಗಳೊಂದಿಗೆ ಮಹಿಳೆ ನಾಪತ್ತೆ – vishwanews24

ಕಾಪು: ಕ್ಷುಲ್ಲಕ ವಿಚಾರಕ್ಕೆ ಪತಿಯೊಂದಿಗೆ ಜಗಳವಾಡಿ ಅಪ್ರಾಪ್ತ ಮಗಳೊಂದಿಗೆ ಮಹಿಳೆ ನಾಪತ್ತೆ ಕಾಪು: ಕ್ಷುಲ್ಲಕ ಕಾರಣಕ್ಕಾಗಿ ಪತಿಯೊಂದಿಗೆ ಜಗಳವಾಡಿ ಬಳಿಕ…

11 hours ago

ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯುವುದು ನಿಮ್ಮ ದೇಹದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ತಿಳಿದುಕೊಳ್ಳಿ – vishwanews24

ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯುವುದು ಒಳ್ಳೆಯದೋ? ಅಥವಾ ಕೆಟ್ಟದೋ? ಬೆಳಿಗ್ಗೆ ಖಾಲಿ ಹೊಟ್ಟೆಗೆ ಎಳನೀರು ಕುಡಿಯುವುದರಿಂದಾಗುವ ಪ್ರಯೋಜನಗಳೇನು ಗೊತ್ತಾ? ಇದು ನಿಮ್ಮ…

11 hours ago

ಕಾಪು: ತಮಿಳುನಾಡು ದೋಣಿ ಡಿಕ್ಕಿ ; ಸ್ಥಳೀಯ ನಾಡದೋಣಿ ಮುಗುಚಿ ಬಿದ್ದು ಮೀನುಗಾರ ನಾಪತ್ತೆ – vishwanews24

ಕಾಪು: ತಮಿಳುನಾಡು ಮೂಲದ ದೋಣಿ ಡಿಕ್ಕಿ ; ಸ್ಥಳೀಯ ನಾಡದೋಣಿ ಮುಗುಚಿ ಮೀನುಗಾರ ನಾಪತ್ತೆ  ಕಾಪು: ಕಾಪು ಕಡಲ ಕಿನಾರೆಯಲ್ಲಿ…

12 hours ago

ಭೀಕರ ರಸ್ತೆ ಅಪಘಾತ : ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ಸೀಸನ್-3ರ ಸ್ಪರ್ಧಿ ಬಾವತೀಶ್ ಸಾವು – vishwanews24

ಭೀಕರ ರಸ್ತೆ ಅಪಘಾತ : ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ಸೀಸನ್-3ರ ಸ್ಪರ್ಧಿ ಬಾವತೀಶ್ ಸಾವು ಯಲ್ಲಾಪುರ : ಉತ್ತರ ಕನ್ನಡ…

15 hours ago

ಕುಂದಾಪುರ: ರಸ್ತೆ ಅಪಘಾತ ; ಗಾಣಿಗ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ ಗಾಣಿಗ ಸಾವು – vishwanews24

ಕುಂದಾಪುರ: ರಸ್ತೆ ಅಪಘಾತ ; ಗಾಣಿಗ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ ಗಾಣಿಗ ಸಾವು ಕುಂದಾಪುರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ…

15 hours ago