ಬೆಂಗಳೂರು: ವಿಶ್ವದ ನಂಬರ್ ಒನ್ ಮೆಸೆಂಜಿಂಗ್ ಅಪ್ಲಿಕೇಷನ್ ವಾಟ್ಸಪ್ ನಲ್ಲಿ ಫಾರ್ವರ್ಡ್ ಮೆಸೇಜನ್ನು ಇನ್ನು ಮುಂದೆ ಸುಲಭವಾಗಿ ತಿಳಿಯಬಹುದು.
ವಿಶ್ವಾದ್ಯಂತ ವಾಟ್ಸಪ್ ಸಂದೇಶಗಳಿಂದ ಹರಡುವ ಸುದ್ದಿಗಳಿಂದಾಗಿ ಅನಾಹುತ ಸಂಭವಿಸುತ್ತಿರುವುದು ದಿನೇ ದಿನೇ ಹೆಚ್ಚಾಗುತ್ತಿದೆ. ಈ ಸಂದೇಶಗಳನ್ನು ಯಾರು ಕಳುಹಿಸಿದ್ದಾರೆ ಅಥವಾ ಯಾರು ಫಾರ್ವರ್ಡ್ ಮಾಡಿದ್ದಾರೆ ಎನ್ನುವುದನ್ನು ಪತ್ತೆಹಚ್ಚಲು ಕೇವಲ ವಿಶೇಷ ತನಿಖೆಯಿಂದ ಮಾತ್ರವೇ ಸಾಧ್ಯವಾಗುತ್ತಿತ್ತು.
ವಾಟ್ಸಪ್ ನ ಹೊಸ ಫೀಚರ್ ನಿಂದಾಗಿ ಈ ರೀತಿ ತೊಂದರೆ ಪಡುವ ಅಗತ್ಯ ಈಗ ಗ್ರಾಹಕರಿಗೆ ಇರುವುದಿಲ್ಲ. ವಾಟ್ಸಪ್ ತನ್ನ ನೂತನ ಫೀಚರ್ ನಲ್ಲಿ ಮೆಸೇಜ್ ಮೇಲ್ಭಾಗದಲ್ಲೇ ಆ ಮಸೇಜ್ ಫಾರ್ವರ್ಡ್ ಎಂದು ಬರೆದಿರುತ್ತದೆ. ಈ ಮೂಲಕ ಮೆಸೇಜನ್ನು ಸ್ವತಃ ಕ್ರಿಯೇಟ್ ಮಾಡಿ ಕಳುಹಿದ್ದಾರೋ ಅಥವಾ ಬೇರೆಯವರು ಸೆಂಡ್ ಮಾಡಿದ್ದ ಮೆಸೇಜನ್ನು ಫಾರ್ವರ್ಡ್ ಮಾಡಿದ್ದರೋ ಎನ್ನುವದನ್ನು ಪತ್ತೆ ಮಾಡಬಹುದಾಗಿದೆ.
ಒಂದು ತಿಂಗಳ ಹಿಂದೆ ಬೀಟಾ ಆವೃತ್ತಿಯನ್ನು ಬಳಸುತ್ತಿದ್ದ ಬಳಕೆದಾರರಿಗೆ ಈ ವಿಶೇಷತೆಯನ್ನು ನೀಡಿದ್ದ ವಾಟ್ಸಪ್ ಈಗ ತನ್ನ ಎಲ್ಲ ಬಳಕೆದಾರರಿಗೆ ವಿಸ್ತರಿಸಿದೆ. ಹೊಸ ವಿಶೇಷತೆ ಬೇಕಿದ್ದರೆ ಗ್ರಾಹಕರು ವಾಟ್ಸಪ್ ಅಪ್ಲಿಕೇಶನ್ ಅನ್ನು ಅಪ್‍ಡೇಟ್ ಮಾಡಿಕೊಳ್ಳಬೇಕು.
ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ…
ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ - ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! ಬೆಂಗಳೂರು : ವಿದ್ಯಾರ್ಥಿಗಳ…
ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ ಬೆಂಗಳೂರು: ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಕಾಯ್ದೆ ಜಾರಿಗೊಂಡಿರುವ…
ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು ಬೆಂಗಳೂರಿನಿಂದ ಆಗಮಿಸಿದ್ದ ನಾಲ್ವರು ಸ್ನೇಹಿತರು ಚಿಕ್ಕಮಗಳೂರು: ತುಂಗಾ ನದಿಯಲ್ಲಿ…
ಸಂಪಾದನೆ ಮಾಡಿರೋ ಹಣವನ್ನ ಜನರಿಗೆ ಕೊಟ್ರೆ 2028ಕ್ಕೂ ಡಿಕೆ ಶಿ ಸಿಎಂ ಆಗಬಹುದು : ಹೆಚ್.ಡಿ ಕುಮಾರಸ್ವಾಮಿ ಬೆಂಗಳೂರು: ಡಿಕೆ…
ತುಳು ಭಾಷೆಗೆ ಅಧಿಕೃತ ಮಾನ್ಯತೆ: ದಶಕಗಳ ಹೋರಾಟಕ್ಕೆ ಡಿ.ಕೆ. ಶಿವಕುಮಾರ್ ಅವರಿಂದ ಫಲ ಸಿಕ್ಕಿದೆ : ರಮೇಶ್ ಕಾಂಚನ್ ಉಡುಪಿ:…