ನವದೆಹಲಿ: ಮುಂದಿನ ದಿನಗಳಲ್ಲಿ ವಾಟ್ಸ್ಆ್ಯಪ್, ಟೆಲಿಗ್ರಾಂ, ಸ್ನ್ಯಾಪ್ಚಾಟ್ ಸೇರಿದಂತೆ ಪ್ರಮುಖ ಮೆಸೇಜಿಂಗ್ ಅಪ್ಲಿಕೇಶನ್ಗಳನ್ನು ಬಳಸಲು ನಿಮ್ಮ ಫೋನ್ನಲ್ಲಿ ಸಿಮ್ ಕಾರ್ಡ್ ಕಡ್ಡಾಯವಾಗಲಿದೆ. ಇದಕ್ಕಾಗಿ ದೂರಸಂಪರ್ಕ ಇಲಾಖೆ ಟೆಲಿಕಾಂ ಕಂಪನಿಗಳಿಗೂ ಹಾಗೂ ಹಲವು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೂ ಹೊಸ ನಿರ್ದೇಶನಗಳನ್ನು ಜಾರಿಗೊಳಿಸಿದೆ.
ಇಲ್ಲಿಯವರೆಗೂ, ಯಾವುದೇ ಫೋನ್ನಲ್ಲಿರುವ ಸಿಮ್ಗೆ OTP ಬಂದರೆ, ಬೇರೆ ಡಿವೈಸ್ನಲ್ಲೂ ಅಪ್ಲಿಕೇಶನ್ಗಳನ್ನು ಬಳಸುವ ಅವಕಾಶ ಇತ್ತು. ಆದರೆ ಹೊಸ ನಿಯಮ ಜಾರಿಗೆ ಬಂದ ನಂತರ, ಸಿಮ್ ಕಾರ್ಡ್ ಫೋನ್ನಲ್ಲಿ ಇರದೇ ಇದ್ದರೆ ಆಪ್ಗಳಿಗೆ ಪ್ರವೇಶ ಲಭ್ಯವಿರುವುದಿಲ್ಲ.
ಸೈಬರ್ ಅಪರಾಧ ತಡೆಯಲು ಕಡ್ಡಾಯ ನಿಯಮ: ವಾಟ್ಸ್ಆ್ಯಪ್, ಟೆಲಿಗ್ರಾಂ, ಸಿಗ್ನಲ್, ಅರಟ್ಟೈ, ಸ್ನ್ಯಾಪ್ಚಾಟ್, ಶೇರ್ಚಾಟ್, ಜಿಯೋಚಾಟ್ ಮತ್ತು ಜೋಶ್ ಅಪ್ಲಿಕೇಶನ್ಗಳಿಗೆ ಕೇಂದ್ರವು ನೀಡಿರುವ ನಿರ್ದೇಶನದಲ್ಲಿ “ಸಿಮ್ ಬೈಂಡಿಂಗ್ ” ಕಡ್ಡಾಯವಾಗಿ ಜಾರಿ ಮಾಡಬೇಕೆಂದು ಹೇಳಲಾಗಿದೆ.
ತಮ್ಮ ಮೊಬೈಲ್ ಸಂಖ್ಯೆಯಿಂದ ಸೈನ್ಇನ್ ಮಾಡುವ ಕೆಲವು ಆ್ಯಪ್ಗಳು ಸಿಮ್ ತೆಗೆದರೂ ಕೂಡಾ ಕೆಲಸ ಮಾಡುತ್ತಿವೆ. ಸೈಬರ್ ವಂಚಕರು ಇದನ್ನು ದುರುಪಯೋಗಪಡಿಸಿಕೊಂಡು, ಬೇರೆ ಸಾಧನಗಳಿಂದ ನಕಲಿ ಖಾತೆಗಳು ರಚಿಸುವುದು, ವಂಚನೆ ಮಾಡುವುದು ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಬ್ಯಾಂಕುಗಳು ಹಾಗೂ ಯುಪಿಐ ಆ್ಯಪ್ಗಳಲ್ಲಿ ಈಗಾಗಲೇ ಸಿಮ್ ಬೈಂಡಿಂಗ್ ವ್ಯವಸ್ಥೆ ಜಾರಿಯಲ್ಲಿದೆ. ಸಿಮ್ ಕಾರ್ಡ್ ತೆಗೆದರೆ ಆ್ಯಪ್ಗಳು ಕಾರ್ಯನಿರ್ವಹಿಸುವುದಿಲ್ಲ. ಈಗ ಅದೇ ನಿಯಮವನ್ನು ಮೆಸೇಜಿಂಗ್ ಆ್ಯಪ್ಗಳಿಗೂ ವಿಸ್ತರಿಸಲಾಗಿದೆ.
ಹೊಸ ನಿಯಮ ಏನು?:
-ಫೋನ್ನಲ್ಲಿ ಸಿಮ್ ಇರದೇ ಇದ್ದರೆ ಅಪ್ಲಿಕೇಶನ್ ತೆರೆದು ಬಳಸಲು ಸಾಧ್ಯವಿಲ್ಲ.
-OTP ಮೂಲಕ ಮೊತ್ತ ಮೊದಲ ವೆರಿಫಿಕೇಷನ್ ಮಾಡಿದರೂ, ನಂತರ ಸಿಮ್ ತೆಗೆದುಬಿಟ್ಟರೆ ಆ್ಯಪ್ ನಿರ್ವಹಣೆ ನಿಲ್ಲಲಿದೆ.
-ವಂಚನೆ, ನಕಲಿ ಖಾತೆಗಳು, ಸೈಬರ್ ಕ್ರೈಮ್ಗಳನ್ನು ತಡೆಗಟ್ಟುವ ಉದ್ದೇಶದಿಂದ ಈ ನಿಯಮ ಜಾರಿಯಾಗಲಿದೆ.
ಪೊಲೀಸರ ಪ್ರಕಾರ ಹಲವು ವಂಚಕರು ದೂರದಿಂದಲೇ ಸಾಮಾಜಿಕ ಮಾಧ್ಯಮದ ಮೂಲಕ ಹಣ ವರ್ಗಾವಣೆ, ಫ್ರಾಡ್ ಲಿಂಕ್ಗಳು, ನಕಲಿ ಖಾತೆಗಳಿಂದ ಜನರನ್ನು ವಂಚಿಸುತ್ತಿದ್ದರು. ಸಿಮ್ ಬೈಂಡಿಂಗ್ ಜಾರಿಯಾದರೆ, ಅಪರಾಧಿಗಳ ಪತ್ತೆ ಸುಲಭವಾಗುತ್ತದೆ ಹಾಗೂ ದುರುಪಯೋಗ ಕಡಿಮೆಯಾಗಲಿದೆ ಎಂದು ಸರ್ಕಾರ ನಂಬಿದೆ. ಹೊಸ ನಿಯಮಗಳ ಜಾರಿ ವೇಳಾಪಟ್ಟಿ ಶೀಘ್ರದಲ್ಲೇ ಹೊರ ಬೀಳಲಿದೆ ಎಂದು ಸಚಿವಾಲಯದಿಂದ ಮಾಹಿತಿ ಲಭ್ಯವಾಗಿದೆ.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…