Featured

ಇನ್ಮುಂದೆ 10,000 ರೂ.ಗಿಂತ ಹೆಚ್ಚಿನ ಯುಪಿಐ ಪಾವತಿಗೆ 1 ಗಂಟೆ ವಿಳಂಬ ..! ಆರ್​ಬಿಐ ಹೊಸ ಕ್ರಮಕ್ಕೆ ಯೋಜನೆ -vishwanews24

ಯುಪಿಐ ಹೊಸ ರೂಲ್ಸ್ : 10000 ಹಣ ವರ್ಗಾವಣೆಗೆ 1 ಗಂಟೆ ಕಾಯಬೇಕು

ನವದೆಹಲಿ: ಇನ್ಮುಂದೆ ಯುಪಿಐ  ಮೂಲಕ 10,000 ರೂ.ಗಿಂತ ಹೆಚ್ಚಿನ ಹಣವನ್ನು ಪಾವತಿಸುವಾಗ ಹಣ ತಕ್ಷಣ ಕಡಿತವಾಗುವುದಿಲ್ಲ. ಬದಲಿಗೆ ಒಂದು ಗಂಟೆ ಬಳಿಕ ಕಡಿತವಾಗುವಂತೆ ಮಾಡಲು ಆರ್‌ಬಿಐ (RBI) ಮುಂದಾಗಿದೆ.

ಡಿಜಿಟಲ್ ಪಾವತಿ ಅಕ್ರಮಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತದ ಯುಪಿಐ ಪೇಮೆಂಟ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಇದೀಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಂದಾಗಿದೆ. 10,000 ರೂ.ಗಿಂತ ಹೆಚ್ಚಿನ ಹಣವನ್ನು ಪಾವತಿಸುವಾಗ ತಕ್ಷಣ ದುಡ್ಡು ಕಡಿತವಾಗುವುದಿಲ್ಲ. ಬದಲಿಗೆ ಆ ಹಣವನ್ನು ಬ್ಯಾಂಕ್ ಒಂದು ಗಂಟೆಗಳ ಕಾಲ ಹಿಡಿದಿಟ್ಟುಕೊಳ್ಳುತ್ತದೆ.

ಇದನ್ನೂ ಓದಿ :

ಆರ್‌ಬಿಐ ನಿಯಮದ ಪ್ರಕಾರ, 10 ಸಾವಿರ ರೂ.ಗಿಂತ ಹೆಚ್ಚಿನ ಹಣವನ್ನು ಯಾರ ಖಾತೆಗೆ ವರ್ಗಾಯಿಸಿರುತ್ತೀರೋ ಆ ಹಣ ತಕ್ಷಣ ಪಾವತಿ ಆಗುವುದಿಲ್ಲ ಅಥವಾ ಕಳಿಸಿದವರ ಖಾತೆ ಸೇರುವುದಿಲ್ಲ. ನೀವು ಕಳಿಸಿದ ಹಣವನ್ನು ಬ್ಯಾಂಕ್ ಒಂದು ಗಂಟೆ ಕಾಲ ಹಿಡಿದಿಟ್ಟುಕೊಳ್ಳುತ್ತದೆ. ಬಳಿಕ ಯಾರ ಖಾತೆ ಸೇರಬೇಕೋ ಆ ಖಾತೆಗೆ ಜಮೆಯಾಗುತ್ತದೆ.

ಒಂದು ವೇಳೆ ತಪ್ಪಾಗಿ ಅಥವಾ ಗೊತ್ತಿಲ್ಲದೆ ಹಣ ವರ್ಗಾವಣೆಯಾಗಿದ್ದರೆ ಒಂದು ಗಂಟೆಯ ಕಾಲವಕಾಶದ ಒಳಗೆ ಈ ಪಾವತಿಯನ್ನು ರದ್ದು ಮಾಡಲು ಗ್ರಾಹಕರಿಗೆ ಅವಕಾಶ ಸಿಗುತ್ತದೆ.

ಕಳೆದ ವರ್ಷ ಭಾರತದಲ್ಲಿ 22,931 ಕೋಟಿ ರೂ. ಡಿಜಿಟಲ್ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ. ಜೊತೆಗೆ ದೇಶದಲ್ಲಿ 10 ಸಾವಿರ ರೂ.ಗಿಂತ ಹೆಚ್ಚಿನ ಹಣ ವರ್ಗಾವಣೆ ಪ್ರಕರಣಗಳಲ್ಲಿ ಹೆಚ್ಚಿನ ವಂಚನೆ, ತಪ್ಪಾಗಿ ಹಣ ವರ್ಗಾವಣೆ ವರದಿಯಾಗುತ್ತಿರುವ ಹಿನ್ನೆಲೆ ಆರ್‌ಬಿಐ ಈ ಪ್ರಸ್ತಾವನೆ ಬಗ್ಗೆ ಚಿಂತಿಸಿದೆ.

ಇದನ್ನೂ ಓದಿ :

ಇನ್ನೂ ಈ ನಿರ್ಧಾರ ನಿತ್ಯದ ಪಾವತಿಗಳ ಮೇಲೆ ಪರಿಣಾಮ ಬೀರುವುದಿಲ್ಲ. ಅಂದರೆ ಅಂಗಡಿಗಳಲ್ಲಿ ಖರೀದಿಯ ಮೇಲಿನ ಪಾವತಿಗಳು, ಇಎಂಐಗಳು, ಮ್ಯೂಚುವಲ್ ಫಂಡ್ ಎಸ್‌ಐಪಿ, ಎಲ್‌ಐಸಿ ಪ್ರೀಮಿಯಂ ಕಡಿತಗಳು, ಸಬ್‌ಸ್ಕ್ರಿಪ್ಪನ್‌ಗಳ ಮೇಲೆ ಈ ಹೊಸ ನಿಯಮವು ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನಲಾಗಿದೆ. ಇದಕ್ಕಾಗಿ ಬಳಕೆದಾರರು ನಿರ್ದಿಷ್ಟ ವ್ಯಕ್ತಿಗಳ ಪಟ್ಟಿ ಮಾಡುವ ಮೂಲಕ ಆ ವ್ಯಕ್ತಿಗಳಿಗೆ ಯಾವುದೇ ಅಡೆತಡೆ ಇಲ್ಲದೆ ಹಣದ ವರ್ಗಾವಣೆಯಾಗುವಂತೆ ನೋಡಿಕೊಳ್ಳಬಹುದಾಗಿದೆ. ಅನುಮಾನಾಸ್ಪದ ಹಾಗೂ ಹೊಸ ವರ್ಗಾವಣೆಗಳಿಗೆ ಇದು ಅನ್ವಯವಾಗಲಿದೆ ಎಂದು ಹೇಳಲಾಗಿದೆ.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

1 day ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

1 day ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

1 day ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

1 day ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

1 day ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

1 day ago