ಸುರತ್ಕಲ್ : ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವಕನನ್ನು ಹುಡುಕಿಕೊಂಡು ಎಂಬಿಬಿಎಸ್ ವಿಧ್ಯಾರ್ಥಿನಿಯೊಬ್ಬಳು ಮಂಗಳೂರಿಗೆ ಆಗಮಿಸಿದ ಘಟನೆ ನಡೆದಿದೆ. ರಾಜಸ್ಥಾನ ಮೂಲದ ಪ್ರಸ್ತುತ ಚೆನ್ನೈನಲ್ಲಿ ಎಂಬಿಬಿಎಸ್ ದ್ವಿತೀಯ ವರ್ಷ ಓದುತ್ತಿರುವ ವಿದ್ಯಾರ್ಥಿನಿ ರೇಶು ಎಂಬಾಕೆ ಓಡಿ ಬಂದ ವಿಧ್ಯಾರ್ಥಿನಿ.
ಯುವಕನ ಹುಡುಕಿಕೊಂಡು ಚೆನ್ನೈ ನಿಂದ ರೇಶು ಸುರತ್ಕಲ್ ಗೆ ತಲುಪಿದ್ದಾಳೆ, ಇಲ್ಲಿಗೆ ಬರುವಾಗ ಬ್ಯಾಗ್, ಮೊಬೈಲ್ ಕಳವಾಗಿದೆ. ಇದರಿಂದ ಆಕೆಗೆ ದಿಕ್ಕು ತೋಚದಂತೆ ಆಗಿ ಸುರತ್ಕಲ್‌ನ ಕಾಂತೇರಿ ದೈವಸ್ಥಾನದ ಬಳಿ ನಿಂತು ತನ್ನಲ್ಲಿದ್ದ ಚಿನ್ನ ಮಾರಾಟ ಮಾಡಲು ಯೋಚಿಸಿ ಅಂಗಡಿ ಬಗ್ಗೆ ಸ್ಥಳೀಯರಲ್ಲಿ ವಿಚಾರಿಸಿದ್ದಾಳೆ.
ಯುವತಿಯ ಬಗ್ಗೆ ಸಂಶಯ ಮೂಡಿದಾಗ ಸ್ಥಳೀಯ ಆಪದ್ಭಾಂಧವ ಸಮಾಜ ಸೇವಾ ಸಂಸ್ಥೆಯ ಉಮೇಶ್ ದೇವಾಡಿಗ ಇಡ್ಯಾ ಹಾಗೂ ಸ್ಥಳೀಯರಾದ ಕೃಷ್ಣಪ್ಪ,ಕೇಶವ ,ನಾಗೇಶ್ ಕಾನಾ ಅವರು ವಿಚಾರಿಸಿದಾಗ ದಾರಿ ತಪ್ಪಿ ಬಂದಿರುವ ಶಂಕೆ ವ್ಯಕ್ತವಾಗಿ ಸುರತ್ಕಲ್ ಪೊಲೀಸ್ ಠಾಣೆಗೆ ಕರೆತಂದು ಸುರಕ್ಷಿತವಾಗಿ ಪೋಷಕರಿಗೆ ಹಸ್ತಾಂತರಿಸಲು ನೆರವಾದರು.
ಠಾಣೆಯಲ್ಲಿ ವಿಚಾರಣೆ ನಡೆಸಿದಾಗ ಸ್ಥಳೀಯ ಸಂಸ್ಥೆಯ ಎಂಜಿನಿಯರ್ ವಿದ್ಯಾರ್ಥಿಗೆ ಪರಿಚಯವಿಲ್ಲ ಎಂಬುದು ತಿಳಿದು ಬಂತು.ಈ ಹಿಂದೆಯೂ ಇದೇ ರೀತಿ ಮನೆ ಬಿಟ್ಟು ಹೋದ ಬಗ್ಗೆ ಮಾಹಿತಿ ತಿಳಿದು ಬಂದಿದೆ.
BREAKING 🔥ಸುರತ್ಕಲ್ ಟೋಲ್‍ಗೇಟ್ ವಿವಾದ.. ಹೋರಾಟಗಾರರ ಮೇಲೆ FIR ದಾಖಲು – Vishwanews24
ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…