Featured

ಇನ್‍ಸ್ಟಾದಲ್ಲಿ ಪ್ರೊಫೈಲ್ ಫೋಟೋ ಡಿಲೀಟ್‌ : ದರ್ಶನ್ ಅನ್‍ಫಾಲೋ‌ ಮಾಡಿದ ಪತ್ನಿ ವಿಜಯಲಕ್ಷ್ಮಿ! – vishwanews24

ಇನ್‍ಸ್ಟಾದಲ್ಲಿ ಪ್ರೊಫೈಲ್ ಫೋಟೋ ಡಿಲೀಟ್‌ : ದರ್ಶನ್ ಅನ್‍ಫಾಲೋ‌ ಮಾಡಿದ ಪತ್ನಿ ವಿಜಯಲಕ್ಷ್ಮಿ!

ಬೆಂಗಳೂರು: ಕೊಲೆ ಪ್ರಕರಣದಲ್ಲಿ ಬಂಧನದ ಬೆನ್ನಲ್ಲೇ ಇತ್ತ ಪತ್ನಿ ವಿಜಯಲಕ್ಷ್ಮಿಯವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಇನ್‍ಸ್ಟಾದಲ್ಲಿ ಅನ್‍ಫಾಲೋ ಮಾಡಿದ್ದಾರೆ.

ಅನ್‍ಫಾಲೋ ಜೊತೆಗೆ ತಮ್ಮ ಇನ್‍ಸ್ಟಾ ಖಾತೆಯ ಡಿಪಿಯನ್ನು ಕೂಡ ಡಿಲೀಟ್ ಮಾಡಿದ್ದಾರೆ. ಪವಿತ್ರಾ ವಿಚಾರದಲ್ಲಿ ದರ್ಶನ್ ಆಗಾಗ ಎಡವಟ್ಟುಗಳನ್ನು ಮಾಡಿಕೊಳ್ಳುತ್ತಾನೇ ಇರುತ್ತಾರೆ. ಈ ಬಾರಿಯೂ ಪವಿತ್ರಾ ವಿಚಾರವಾಗಿಯೇ ಘನಘೋರ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ವಿಜಯಲಕ್ಷ್ಮಿಯವರಿಗೆ ಸಹಜವಾಗಿಯೇ ಪವಿತ್ರಾ ಗೌಡ ಮೇಲೆ ಕೆಟ್ಟ ಕೋಪ ಬಂದಿರುತ್ತದೆ. ಆದರೂ ತಾಳ್ಮೆ ವಹಿಸಿಕೊಂಡು ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.

ಕಳೆದ ಎರಡ್ಮೂರು ತಿಂಗಳ ಹಿಂದೆ ದರ್ಶನ್ ಪತ್ನಿ ವಿಜಯಲಕ್ಷ್ಮಿಯರು ಇನ್ ಸ್ಟಾದಲ್ಲಿ ಪವಿತ್ರಾ ಗೌಡ  ಪತಿ ಹಾಗೂ ಮಗಳ ಬಗ್ಗೆ ಫೋಟೋಗಳನ್ನು ಶೇರ್ ಮಾಡಿ ಮಾತಿನ ದಾಳಿ ನಡೆಸಿದ್ದರು. ಆ ಬಳಿಕ ದರ್ಶನ್ ಅಭಿಮಾನಿಗಳಲ್ಲೇ ಎರಡು ಬಣವಾಯ್ತು. ದರ್ಶನ್ ವಿಜಯಲಕ್ಷ್ಮಿ ದಂಪತಿ ಇಷ್ಟಪಡುವ ಫ್ಯಾನ್ಸ್, ದರ್ಶನ್ ರ ಎರಡೂ ಸಂಸಾರವನ್ನು ಇಷ್ಟಪಡುವ ಫ್ಯಾನ್ಸ್. ಇನ್ನು ದರ್ಶನ್ ಅಭಿಮಾನಿಯೇ ಆಗಿದ್ದ ರೇಣುಕಾಸ್ವಾಮಿಯವರು ವಿಜಯಲಕ್ಷ್ಮಿ ದರ್ಶನ್ ರನ್ನು ಇಷ್ಟಪಡುತ್ತಿದ್ದರು. ಹೀಗಾಗಿ ಪವಿತ್ರಾ ಗೌಡ ಪೋಸ್ಟ್ ಗೆ ಬೇಸರದಿಂದ ಕಾಮೆಂಟ್ ಮಾಡುತ್ತಿದ್ದರು. ಇದೀಗ ರೇಣುಕಾಸ್ವಾಮಿ ಕೊಲೆ ಬಳಿಕ ಫೋನ್ ಕೂಡ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ.

 

Vishwa News 24

Recent Posts

ಮಹಿಳೆಯರನ್ನು ಸಬಲೀಕರಣ ಮಾಡುವ ಕೆಲಸವನ್ನ ನಮ್ಮ ಸರಕಾರ ಪ್ರಾಮಾಣಿಕವಾಗಿ ಮಾಡುತ್ತಿದೆ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ – vishwanews24

ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಗಳೂರು: ಮಹಿಳೆಯರನ್ನು ಸಬಲೀಕರಣ ಮಾಡುವ ಕೆಲಸವನ್ನು ನಮ್ಮ ಸರಕಾರ ಪ್ರಾಮಾಣಿಕವಾಗಿ…

9 hours ago

ಒಣಗಿದ ದಾಸವಾಳ ನುಂಗಿ ಆರೂವರೆ ತಿಂಗಳ ಮಗು ಉಸಿರುಗಟ್ಟಿ ಸಾವು – vishwanews24

ಒಣಗಿದ ದಾಸವಾಳ ನುಂಗಿ ಆರೂವರೆ ತಿಂಗಳ ಮಗು ಉಸಿರುಗಟ್ಟಿ ಸಾವು ಮೈಸೂರು: ಒಣಗಿದ ದಾಸವಾಳ ಹೂನುಂಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿದ…

9 hours ago

ಏ. 2ರಂದು ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ – vishwanews24

ಏ. 2ರಂದು ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಉಡುಪಿ : ಜಿಲ್ಲಾಡಳಿತ, ಜಿಪಂ, ಕೌಶಲ್ಯಾಭಿವೃದ್ಧಿ, ಉದ್ಯಮ…

9 hours ago

ಅಡುಗೆ ಅನಿಲದ ಅಭಾವ – ತಾತ್ಕಾಲಿಕವಾಗಿ ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ – vishwanews24

ಅಡುಗೆ ಅನಿಲದ ಅಭಾವ - ತಾತ್ಕಾಲಿಕವಾಗಿ ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ ಬೆಂಗಳೂರು : ಗಲ್ಫ್…

10 hours ago

ತೊಕ್ಕೊಟ್ಟು : ಆರಿಫ್ ಕೊಲೆ ಪ್ರಕರಣ ; ಆರು ಆರೋಪಿಗಳು ಭಾಗಿ – ಸಿಸಿಬಿ ಎಸಿಪಿ ತಂಡದಿಂದ ಮುಂದಿನ ತನಿಖೆ : ಪೊಲೀಸ್ ಆಯುಕ್ತ – vishwanews24

ತೊಕ್ಕೊಟ್ಟು : ಆರಿಫ್ ಕೊಲೆ ಪ್ರಕರಣ ; ಆರು ಆರೋಪಿಗಳು ಭಾಗಿ - ಸಿಸಿಬಿ ಎಸಿಪಿ ತಂಡದಿಂದ ಮುಂದಿನ ತನಿಖೆ…

10 hours ago

ಕಾಪು : ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ – vishwanews24

ಕಾಪು : ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ ಕಾಪು: ಉಳಿಯಾರಗೋಳಿ ಗ್ರಾಮದ ನೀಲಾಧರ ಬಂಗೇರ (58) ಇಲಿ ಪಾಷಾಣ…

10 hours ago