Featured

ಇರಾಕ್ ನಲ್ಲಿ ಭಗವಾನ್ ಶ್ರೀರಾಮನನ್ನು ಹೋಲುವ ಕುರುಹು ಪತ್ತೆ -Vishwanews24

ಇರಾನ್, : ಮಧ್ಯಪ್ರಾಚ್ಯದ ಇರಾಕ್ ನಲ್ಲಿ ಭಗವಾನ್ ಶ್ರೀರಾಮನನ್ನು ಹೋಲುವ ಉಬ್ಬು ಚಿತ್ರವೊಂದು ಪತ್ತೆಯಾಗಿದೆ.

ಇರಾನ್ ನ ಹೊರೇನ್ ಶೇಖಾನ್ ಎನ್ನುವ ಪ್ರದೇಶದಲ್ಲಿ ಇರುವ ದರ್ಬಾಂದ್ ಐ ಬೇಲುಲಾ ಬಂಡೆಯಲ್ಲಿ ಈ ಉಬ್ಬುಚಿತ್ರ ಕಂಡು ಬಂದಿದೆ. ಉತ್ತರ ಪ್ರದೇಶದ ಸಂಸ್ಕೃತಿ ಇಲಾಖೆ ಮತ್ತು ಅಯೋಧ್ಯೆಯ ಶೋಧ ಸಂಸ್ಥಾನದ ವಿನಂತಿಸಿ ಆ ಬಳಿಕ ಇರಾಕ್​ನಲ್ಲಿರುವ ಭಾರತದ ರಾಯಭಾರಿ ಪ್ರದೀಪ್ ಸಿಂಗ್ ರಾಜಪುರೋಹಿತ್ ನೇತೃತ್ವದ ನಿಯೋಗ ಉಬ್ಬುಚಿತ್ರ ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿದೆ. ಈ ಉಬ್ಬುಚಿತ್ರವನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿದಾಗ ರಾಮನನ್ನೇ ಹೋಲಿಕೆ ಮಾಡುವ ಕೆತ್ತನೆ ಕಂಡು ಬಂದಿರುವುದಾಗಿ ತಿಳಿಸಿದೆ.

ಈ ಕುರಿತು ಮಾತನಾಡಿರುವ ಪ್ರದೀಪ್ ಸಿಂಗ್, ಕ್ರಿಸ್ತಪೂರ್ವ 4,500 ಹಾಗೂ 1,900 ನಡುವಿನ ಸಮಯದಲ್ಲಿ ಮೆಸಪೊಟೆಮಿಯಾವನ್ನು ಸುಮೇರಿಯನ್ನರು ಆಳ್ವಿಕೆ ನಡೆಸುತ್ತಿದ್ದರು. ಬಹುಶಃ ಅವರು ಭಾರತದಿಂದ ಅಲ್ಲಿಗೆ ಹೋಗಿರಬಹುದು ಎಂದು ಕೆಲ ದಾಖಲೆಗಳು ಹೇಳುತ್ತಿವೆ. ಜೊತೆಗೆ ಅವರ ವಂಶವಾಹಿಗಳು ಸಿಂಧೂ ಕಣಿವೆ ನಾಗರಿಕತೆಯ ಕುರುಹುಗಳು ಜೊತೆಗೆ ಹೋಲಿಕೆಯಾಗುತ್ತವೆ.

ಹೀಗಾಗಿ ಭಾರತದ ಸಂಸ್ಕೃತಿ ಇಲ್ಲಿಯವರೆಗೆ ಹಬ್ಬಿರುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.

ಪತ್ತೆಯಾಗಿರುವ ಆಕೃತಿಗಳು ಶ್ರೀರಾಮಚಂದ್ರ ಹಾಗೂ ಆಂಜನೇಯನಿಗೆ ಹೋಲಿಕೆಯಾಗುತ್ತಿವೆ.ಚಿತ್ರದಲ್ಲಿ ಯಾವುದೇ ಅಲಂಕಾರವಿಲ್ಲದ ರಾಜನೊಬ್ಬ ಬಿಲ್ಲು ಬಾಣಗಳನ್ನು ಹಿಡಿದು ನಿಂತಿದ್ದು, ಸೊಂಟದಲ್ಲಿ ಕತ್ತಿಯೂ ಇದೆ. ರಾಜನ ಎದುರಿಗೆ ಕೈ ಮುಗಿದು ಕುಳಿತಿರುವ ಸೇವಕನ ಚಿತ್ರವಿದ್ದು, ಇದು ಶ್ರೀರಾಮ ಹಾಗೂ ಹನುಮಂತನಾಗಿರಬಹುದು ಎಂದು ಶೋಧ ಸಂಸ್ಥಾನದ ಅಧಿಕಾರಿಗಳು ಊಹಿಸಿದ್ದಾರೆ.

Vishwa News 24

Recent Posts

ಎಸ್‌ಟಿಪಿಯನ್ನು ಮೂಳೂರಿನಿಂದ ಬೆಳಪು ಪ್ರದೇಶಕ್ಕೆ ಸ್ಥಳಾಂತರ ಮಾಡಿದರೆ ಕಾಪು ಪುರಸಭೆಗೆ ಸಂಪೂರ್ಣ ಸ್ವಾಗತ : ದೇವಿಪ್ರಸಾದ್ ಶೆಟ್ಟಿ – vishwanews24

ಬೆಳಪು ಪ್ರದೇಶದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳೊಂದಿಗೆ ಘಟಕ ನಿರ್ಮಿಸಿದರೆ ನಮ್ಮಿಂದ ಯಾವುದೇ ವಿರೋಧ ಇರುವುದಿಲ್ಲ : ದೇವಿಪ್ರಸಾದ್ ಶೆಟ್ಟಿ ಮೂಳೂರು…

2 days ago

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ – vishwanews24

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಬೆಳಗಾವಿ: ಪ್ರಿಯಕರನ ಜೊತೆ…

2 days ago

ಬಿಜೆಪಿ ನಡೆಸಿರುವ ಅಪವಿತ್ರ ಮೈತ್ರಿ ಇತಿಹಾಸವನ್ನು ದೇಶ ಮರೆತಿಲ್ಲ : ಬಿ.ಕೆ.ಹರಿಪ್ರಸಾದ್ – vishwanews24

ದೇಶದ ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷ ಸದಾ ಸಮಾನ ಚಿಂತನೆಯ ಪಕ್ಷಗಳೊಂದಿಗೆ ಕೈಜೋಡಿಸಿದೆ : ಬಿ.ಕೆ.ಹರಿಪ್ರಸಾದ್ ಬೆಂಗಳೂರು: ‘ಬಿಜೆಪಿ…

2 days ago

ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ – vishwanews24

ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ ಪಡುಬಿದ್ರಿ: ಸನಾತನ ಫೌಂಡೇಶನ್‌ನ ಅಧ್ಯಕ್ಷ,…

2 days ago

ವಿವಾಹಿತ ಮಹಿಳೆ  ಜತೆ ಲಿವ್ ಇನ್ ರಿಲೇಶನ್‌ ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ  – vishwanews24

ವಿವಾಹಿತ ಮಹಿಳೆ ಜತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ  ಬೆಂಗಳೂರು: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ನೇಣುಬಿಗಿದ…

2 days ago

ಬಿಜೆಪಿ ನಾಯಕ ಸುವೇಂದು ಅಧಿಕಾರಿ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ – vishwanews24

ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಪರ್ವ.. ಬಿಜೆಪಿ ಮೊದಲ ಸಿಎಂ ಆಗಿ ಪ್ರಮಾಣ ಸ್ವೀಕಾರ.. ಐತಿಹಾಸಿಕ ಕ್ಷಣಕ್ಕೆ ಮೋದಿ,…

2 days ago