Featured

ಇಲ್ಲಿಂದ ಹೊಸ ಬದುಕಿನ ಪ್ರಯಾಣದತ್ತ ಹೆಜ್ಜೆ  :ವಿಚ್ಛೇದನ ಬೆನ್ನಲ್ಲೇ ವಿಜಯ್‌ ಪೋಸ್ಟ್ -vishwanews24

ಇಲ್ಲಿಂದ ಹೊಸ ಬದುಕಿನ ಪ್ರಯಾಣದತ್ತ ಹೆಜ್ಜೆ  :ವಿಚ್ಛೇದನ ಬೆನ್ನಲ್ಲೇ ವಿಜಯ್‌ ಪೋಸ್ಟ್

ಬೆಂಗಳೂರು: ನಟ, ನಿರ್ದೇಶಕ ದುನಿಯಾ ವಿಜಯ್‌  ಮತ್ತು ಪತ್ನಿ ನಾಗರತ್ನ ಅವರ ದಾಂಪತ್ಯ ಜೀವನ ಅಂತ್ಯವಾಗಿದೆ. ಗುರುವಾರ (ಸೆ.03) ಕರ್ನಾಟಕ ಹೈಕೋರ್ಟ್‌ ವಿಚ್ಛೇದನ ನೀಡಿ ಅದೇಶಿಸಿದೆ.

ನ್ಯಾ.ಡಿ.ಕೆ.ಸಿಂಗ್‌ ಮತ್ತು ನ್ಯಾ.ಎಚ್. ಶಾಂತಿಭೂಷಣ್‌ ಅವರಿದ್ದ ವಿಭಾಗೀಯ ಪೀಠವು ಆದೇಶ ನೀಡಿದೆ. ನಾಗರತ್ನ ಮತ್ತು ಮೂವರು ಮಕ್ಕಳ ಜೀವನವನ್ನು ಪರಿಗಣಿಸಿ, ವಿಜಯ್ ಸ್ಥಾನಮಾನ, ಹಣಕಾಸು ಸ್ಥಿತಿ ನೋಡಿ ನಾಗರತ್ನಗೆ ಎರಡು ಕೋಟಿ ರೂ ಜೀವನಾಂಶ ನೀಡುವಂತೆ ಆದೇಶಿಸಿದೆ.

“ಸಮಸ್ತ ಅಭಿಮಾನಿಗಳಲ್ಲಿ ಹಾಗೂ ನನ್ನ ಬದುಕಿನುದ್ದಕ್ಕೂ ಜೊತೆಯಾಗಿ ನಿಂತ ಮಾಧ್ಯಮ ಮಿತ್ರರಲ್ಲಿ ಕಳಕಳಿಯ ಮನವಿ. ನ್ಯಾಯಾಲಯದ ಆದೇಶಕ್ಕೆ ಶಿರಸಾಷ್ಟಾಂಗ ಪ್ರಣಾಮಗಳೊಂದಿಗೆ ಶರಣಾಗಿದ್ದೇನೆ. ಕಾನೂನಿನ ಮೇಲಿನ ನಂಬಿಕೆ ಮತ್ತಷ್ಟು ಹೆಚ್ಚಾಗಿದೆ. ನನ್ನ ಮೇಲಿನ ಮಾನಸಿಕ ಕ್ರೌರ್ಯವನ್ನು ಪರಿಗಣಿಸಿ, ಮಾನ್ಯ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀ ಡಿ.ಕೆ. ಸಿಂಗ್ ಹಾಗೂ ಶ್ರೀ ಶಾಂತಿಭೂಷಣ್ ಅವರ ಆದೇಶಕ್ಕೆ ತಲೆಬಾಗಿದ್ದೇನೆ. ಈ ಆದೇಶಕ್ಕೆ ನನ್ನ ಗೌರವಪೂರ್ವಕ ಧನ್ಯವಾದಗಳು. ಹಾಗೆಯೇ ನನ್ನ ವಕೀಲರಾದ ಹಿರಿಯ ಕೌನ್ಸಿಲ್ ಶ್ರೀವತ್ಸ ಹಾಗೂ ಯುಕ್ತ ಅನಿಲ್ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ʼʼಈ ವಿಚಾರಕ್ಕೆ (ವಿಚ್ಛೇದನ) ಸಂಬಂಧಿಸಿದಂತೆ ನಾನು ಮಾಧ್ಯಮಗಳಲ್ಲಾಗಲಿ ಅಥವಾ ಸಾರ್ವಜನಿಕವಾಗಲಿ ಮಾತನಾಡಲು ಇಚ್ಛಿಸುವುದಿಲ್ಲ. ನನ್ನ ಹೆಣ್ಣುಮಕ್ಕಳು ವಯಸ್ಕರಾಗಿದ್ದು, ಸಮಾಜದಲ್ಲಿ ತಮ್ಮದೇ ಆದ ಸ್ಥಾನಮಾನ ಗಳಿಸಿದ್ದಾರೆ. ಅವರಿಗೆ ಯಾವುದೇ ಮುಜುಗರವಾಗಬಾರದು. ಮಕ್ಕಳ ಭವಿಷ್ಯ ಹಾಗೂ ಹಿತದೃಷ್ಟಿಯಿಂದ, ನನ್ನ ವೈಯಕ್ತಿಕ ಸಾಂಸಾರಿಕ ವಿಚಾರಕ್ಕೆ ನ್ಯಾಯಾಲಯ ನೀಡಿದ ಆದೇಶವನ್ನು ಆತ್ಮಸಾಕ್ಷಿಯಿಂದ ಸ್ವೀಕರಿಸಿದ್ದು, ಇಲ್ಲಿಂದ ಹೊಸ ಬದುಕಿನ ಪ್ರಯಾಣದತ್ತ ಹೆಜ್ಜೆ ಹಾಕುತ್ತಿದ್ದೇನೆ. ನಿಮ್ಮ ಆಶೀರ್ವಾದ ಮತ್ತು ಹಾರೈಕೆ ಹೀಗೆಯೇ ಇರಲಿʼʼ ಎಂದು ಬರೆದುಕೊಂಡಿದ್ದಾರೆ.

Vishwa News 24

Recent Posts

ಉಡುಪಿ : ಪಿ.ಒ.ಪಿ / ರಾಸಾಯನಿಕ ಬಳಸಿ ಗಣೇಶ ವಿಗ್ರಹಗಳ ತಯಾರಿ, ಮಾರಾಟ ನಿಷೇಧ -vishwanews24

ಉಡುಪಿ ಪಿ.ಒ.ಪಿ / ರಾಸಾಯನಿಕ ಬಳಸಿ ಗಣೇಶ ವಿಗ್ರಹಗಳ ತಯಾರಿ, ಮಾರಾಟ ನಿಷೇಧ ಉಡುಪಿ : ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ…

16 minutes ago

ಎಂಟು ಸ್ಪರ್ಧೆ, ಎಂಟೂ ಪ್ರಶಸ್ತಿ; ಅಂತಾರಾಷ್ಟ್ರೀಯ ಕಿರೀಟ ಗೆದ್ದ ಉಡುಪಿಯ ಸಚಿತ ರಾವ್ -vishwanews24

ಎಂಟು ಸ್ಪರ್ಧೆ, ಎಂಟೂ ಪ್ರಶಸ್ತಿ; ಅಂತಾರಾಷ್ಟ್ರೀಯ ಕಿರೀಟ ಗೆದ್ದ ಉಡುಪಿಯ ಸಚಿತ ರಾವ್ ಥೈಲ್ಯಾಂಡ್‌ನಲ್ಲಿ ನಡೆದ ‘ಜೂನಿಯರ್ ಮಾಡೆಲ್ ಇಂಟರ್‌ನ್ಯಾಷನಲ್–2026…

2 hours ago

ದುನಿಯಾ ವಿಜಯ್-ನಾಗರತ್ನ ದಾಂಪತ್ಯ ಅಂತ್ಯ; 2 ಕೋಟಿ ರೂ ಜೀವನಾಂಶಕ್ಕೆ ಆದೇಶ -vishwanews24

ದುನಿಯಾ ವಿಜಯ್-ನಾಗರತ್ನ ದಾಂಪತ್ಯ ಅಂತ್ಯ; 2 ಕೋಟಿ ರೂ ಜೀವನಾಂಶಕ್ಕೆ ಆದೇಶ ಬೆಂಗಳೂರು: ನಟ, ನಿರ್ದೇಶಕ ದುನಿಯಾ ವಿಜಯ್‌  ಮತ್ತು…

3 hours ago

ಉಡುಪಿ : ಅನ್ನಭಾಗ್ಯ ಅಕ್ಕಿ ವಿಚಾರದಲ್ಲಿ ಕೊಲೆ, ಸುಲಿಗೆ ಬೆದರಿಕೆ ಆರೋಪ;  ಮೂವರ ಬಂಧನ -vishwanews24

ಉಡುಪಿ : ಅನ್ನಭಾಗ್ಯ ಅಕ್ಕಿ ವಿಚಾರದಲ್ಲಿ ಕೊಲೆ, ಸುಲಿಗೆ ಬೆದರಿಕೆ ಆರೋಪ;  ಮೂವರ ಬಂಧನ ಉಡುಪಿ: ರಾಜ್ಯ ಸರಕಾರದ ಅನ್ನಭಾಗ್ಯದ…

3 hours ago

ಕೆಪಿಎಸ್‌ಸಿ ವಿಚಾರವಾಗಿ ಬಿಜೆಪಿ ಪಾದಯಾತ್ರೆ ಅವರ ಪಕ್ಷದಲ್ಲಿನ ಆಂತರಿಕ ಬಿಕ್ಕಟ್ಟು ಮುಚ್ಚಿಹಾಕುವ ಯತ್ನ :  ಸಿಎಂ ಡಿ.ಕೆ.ಶಿ -vishwanews24

ಕೆಪಿಎಸ್‌ಸಿ ವಿಚಾರವಾಗಿ ಬಿಜೆಪಿ ಪಾದಯಾತ್ರೆ ಅವರ ಪಕ್ಷದಲ್ಲಿನ ಆಂತರಿಕ ಬಿಕ್ಕಟ್ಟು ಮುಚ್ಚಿಹಾಕುವ ಯತ್ನ :  ಸಿಎಂ ಡಿ.ಕೆ.ಶಿ ಬೆಂಗಳೂರು :…

5 hours ago

ಉಡುಪಿ: ಮಕ್ಕಳ ಸುರಕ್ಷೆ ಬಗ್ಗೆ ಎಚ್ಚರ ಇರಲಿ, ಆತಂಕ ಬೇಡ ;  ಅನುಮಾನಾಸ್ಪದ ವರ್ತನೆ ಕಂಡರೆ ಮಾಹಿತಿ ನೀಡಿ :ಎಸ್ಪಿ ಹರಿರಾಮ್‌ ಶಂಕರ್‌ -vishwanews24

ಉಡುಪಿ: ಮಕ್ಕಳ ಸುರಕ್ಷೆ ಬಗ್ಗೆ ಎಚ್ಚರ ಇರಲಿ, ಆತಂಕ ಬೇಡ ;  ಅನುಮಾನಾಸ್ಪದ ವರ್ತನೆ ಕಂಡರೆ ಮಾಹಿತಿ ನೀಡಿ :ಎಸ್ಪಿ…

7 hours ago