ಉಡುಪಿ

ಇಲ್ಲಿ ಫ‌ಲಿತಾಂಶಕ್ಕಿಂತ ಕುತೂಹಲವೇ ರೋಚಕ…!!

ಉಡುಪಿ: ಈ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಮೋದಿಯವರ ಹೈ ವೋಲ್ಟೇಜ್ ಭಾಷಣ ಯಾವ ರೀತಿಯ ನಿರೀಕ್ಷೆಯನ್ನು ಮೂಡಿಸಿತ್ತೋ ಅದೇ ತೆರನಾದ ಫ‌ಲಿತಾಂಶ ಕುತೂಹಲ ಕಾದು ಕೊಂಡಿದ್ದು ಉಡುಪಿ ವಿಧಾನಸಭಾ ಕ್ಷೇತ್ರ.

ಕೊನೆ ಕ್ಷಣದವರೆಗೂ ಉಭಯ ಆಭ್ಯರ್ಥಿಗಳಲ್ಲೂ (ಕಾಂಗ್ರೆಸ್‌- ಪ್ರಮೋದ್‌ ಮಧ್ವರಾಜ್‌, ಬಿಜೆಪಿ- ರಘುಪತಿ ಭಟ್‌) ಆತಂಕ ಮಡು ಗಟ್ಟಿತ್ತು. ಇಬ್ಬರೂ ಕಾಲೇಜಿನಲ್ಲಿ ಸಹಪಾಠಿ ಗಳೇ. ಆದರೆ ಇಲ್ಲಿ ಪ್ರತಿಸ್ಫರ್ಧಿ ಗಳು. ಈ ಆತಂಕ ಮತ ಎಣಿಕೆಯ ಅಂತ್ಯದವರೆಗೂ ಮುಂದುವರಿಯಿತು. ಎಲ್ಲೂ ಇದೇ ಫ‌ಲಿತಾಂಶ ಎಂದು ಬೆನ್ನು ಹಾಕಿ ಹೋಗಲು ಅವಕಾಶ ಕೊಡಲೇ ಇಲ್ಲ. ವಿಚಿತ್ರವೆಂದರೆ ಕಾಂಗ್ರೆಸ್‌ಗೆ ಜಿಲ್ಲೆ ಯಲ್ಲಿ ಹೆಚ್ಚು ನಂಬಿಕೆ ಇದ್ದಿದ್ದ ಕ್ಷೇತ್ರವಿದಾಗಿತ್ತು. 

ಮೋದಿ ಅಲೆ, ಬಿಜೆಪಿಯ ಸಂಘ ಟನಾ ಶಕ್ತಿಯ ಎದುರೂ ಪ್ರಮೋದ್‌ ಮಧ್ವರಾಜ್‌ ಅವರನ್ನು ಸೋಲಿಸುವುದು ಸುಲಭವಲ್ಲ ಎಂಬ ಮಾತಿತ್ತು. ಜಿಲ್ಲೆಯ ಹಲವ ರಿಗೆ ಕಾಂಗ್ರೆಸ್‌ ಬೇಡ  ವಾಗಿರಬಹುದು, ಪ್ರಮೋದ್‌ ಇರಲಿ ಎಂಬ ಅಭಿಪ್ರಾಯವೇ ಅವರನ್ನು ದೈತ್ಯ ಅಭ್ಯರ್ಥಿಯನ್ನಾಗಿ ರೂಪಿಸಿದ್ದವು. ಆದರೆ ಭಟ್‌ ಅವರು ಬಿಜೆಪಿ ಅಭ್ಯರ್ಥಿ ಆದ ಬಳಿಕ ಕಣ ರಂಗೇರಿತ್ತು. ಜಿದ್ದಾಜಿದ್ದಿನ ಹೋರಾಟಕ್ಕೆ ಅಣಿಯಾಗಿತ್ತು. 

ಮೊದಲ ಸುತ್ತಿನಲ್ಲಿ ಪ್ರಮೋದ್‌ ಮಧ್ವರಾಜ್‌ 4,898 ಹಾಗೂ ರಘುಪತಿ ಭಟ್‌ 5,172 ಮತಗಳನ್ನು ಗಳಿಸಿದರು. ಆಗ ದೊಡ್ಡದೆನಿಸಲಿಲ್ಲ. ಇನ್ನೂ ಮೊದಲನೇ ರೌಂಡ್‌ ಎಂದುಕೊಳ್ಳಲಾಯಿತು. 6ನೇ ಸುತ್ತಿನಲ್ಲಿ ಪ್ರಮೋದ್‌ರಿಗೆ  5,171 ಮತ್ತು ಭಟ್‌ 3,509 ಮತ ಸಿಕ್ಕಿತು. ಇದು ಭಟ್‌ ಅವರನ್ನು ದಿಗಿಲುಗೊಳಿಸಿತು. ಯಾಕೆಂದರೆ, ಇದ್ದಕ್ಕಿದ್ದಂತೆ ಲೀಡ್‌ ಅಂತರ 240ಕ್ಕೆ ಕುಸಿಯಿತು. ಏಳನೇ ಸುತ್ತು ಇನ್ನೂ ಅಪಾಯ. 141ಕ್ಕೆ ಇಳಿಕೆ. ಅದುವರೆಗೆ ಬಿಜೆಪಿ ಪರ ಘೋಷಣೆ ಕೂಗುತ್ತಿದ್ದವರೆಲ್ಲಾ ಮೌನಕ್ಕೆ ಶರಣು ಹೋದರು. ಇನ್ನೇನು ಅತ್ಯಂತ ನಿಕಟ ಸ್ಪರ್ಧೆಯಾಗಿ ಮರು ಎಣಿಕೆಯೂ ನಡೆಯಬಹುದೆಂಬ ಲೆಕ್ಕಾಚಾರವೂ ಆರಂಭವಾಯಿತು.

 10ನೇ ಸುತ್ತಿನ ಮತ ಎಣಿಕೆ ಮುಗಿದಾಗ ಬಿಜೆಪಿಗೆ ಕೊಂಚ ಸಮಾಧಾನ. ಆ ಸುತ್ತಿನಲ್ಲಿ ಪ್ರಮೋದ್‌ ಕೇವಲ 3,549 ಮತಗಳನ್ನು ಪಡೆದರೆ, ಭಟ್‌ರಿಗೆ 6,144. ಮುನ್ನಡೆಯ ಅಂತರ 5,289. ಇದು ಭಟ್‌ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ ಗಳಿಗೆ. ಈ ಸುತ್ತುಗಳು ನಗರ ಭಾಗದ ಮತಗಟ್ಟೆಗಳದ್ದು. ಆಗಲೇ ಬಿಜೆಪಿಯ ಸಂಭ್ರಮಾಚರಣೆ ಶುರು ವಾಯಿತು. ನಿರೀಕ್ಷೆಯಂತೆಯೇ ಅನಂತರದ ಯಾವ ಸುತ್ತುಗಳೂ ಭಟ್‌ ಅವರನ್ನು ಕೈ ಬಿಡಲಿಲ್ಲ. 17ನೇ ಸುತ್ತು, ಅಂಚೆ ಮತಗಳು ಸೇರಿದಂತೆ ಒಟ್ಟು 12,044 ಮತಗಳ ಅಂತರದಿಂದ ರಘುಪತಿ ಭಟ್‌ ಜಯಶಾಲಿಯಾದರು.
2008ರಲ್ಲಿ ರಘುಪತಿ ಭಟ್‌ ಅವರು ಪ್ರಮೋದ್‌ ಮಧ್ವರಾಜ್‌ ವಿರುದ್ಧ 2,479 ಮತಗಳ ಅಂತರದಿಂದ ಜಯ ಸಾಧಿಸಿದ್ದರು. 2013ರಲ್ಲಿ ಸ್ಪರ್ಧಿಸಿರಲಿಲ್ಲ. ಆಗ ಬಿಜೆಪಿ ಅಭ್ಯರ್ಥಿ ಸುಧಾಕರ ಶೆಟ್ಟಿ ಅವರನ್ನು ಪ್ರಮೋದ್‌ 39,524 ಮತಗಳ ಅಂತರದಿಂದ ಸೋಲಿಸಿ ಸಚಿವ ಸ್ಥಾನವನ್ನೂ ಪಡೆದಿದ್ದರು.

 

Vishwa News 24

Recent Posts

ಮಹಿಳೆಯರನ್ನು ಸಬಲೀಕರಣ ಮಾಡುವ ಕೆಲಸವನ್ನ ನಮ್ಮ ಸರಕಾರ ಪ್ರಾಮಾಣಿಕವಾಗಿ ಮಾಡುತ್ತಿದೆ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ – vishwanews24

ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಗಳೂರು: ಮಹಿಳೆಯರನ್ನು ಸಬಲೀಕರಣ ಮಾಡುವ ಕೆಲಸವನ್ನು ನಮ್ಮ ಸರಕಾರ ಪ್ರಾಮಾಣಿಕವಾಗಿ…

13 hours ago

ಒಣಗಿದ ದಾಸವಾಳ ನುಂಗಿ ಆರೂವರೆ ತಿಂಗಳ ಮಗು ಉಸಿರುಗಟ್ಟಿ ಸಾವು – vishwanews24

ಒಣಗಿದ ದಾಸವಾಳ ನುಂಗಿ ಆರೂವರೆ ತಿಂಗಳ ಮಗು ಉಸಿರುಗಟ್ಟಿ ಸಾವು ಮೈಸೂರು: ಒಣಗಿದ ದಾಸವಾಳ ಹೂನುಂಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿದ…

13 hours ago

ಏ. 2ರಂದು ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ – vishwanews24

ಏ. 2ರಂದು ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಉಡುಪಿ : ಜಿಲ್ಲಾಡಳಿತ, ಜಿಪಂ, ಕೌಶಲ್ಯಾಭಿವೃದ್ಧಿ, ಉದ್ಯಮ…

13 hours ago

ಅಡುಗೆ ಅನಿಲದ ಅಭಾವ – ತಾತ್ಕಾಲಿಕವಾಗಿ ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ – vishwanews24

ಅಡುಗೆ ಅನಿಲದ ಅಭಾವ - ತಾತ್ಕಾಲಿಕವಾಗಿ ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ ಬೆಂಗಳೂರು : ಗಲ್ಫ್…

14 hours ago

ತೊಕ್ಕೊಟ್ಟು : ಆರಿಫ್ ಕೊಲೆ ಪ್ರಕರಣ ; ಆರು ಆರೋಪಿಗಳು ಭಾಗಿ – ಸಿಸಿಬಿ ಎಸಿಪಿ ತಂಡದಿಂದ ಮುಂದಿನ ತನಿಖೆ : ಪೊಲೀಸ್ ಆಯುಕ್ತ – vishwanews24

ತೊಕ್ಕೊಟ್ಟು : ಆರಿಫ್ ಕೊಲೆ ಪ್ರಕರಣ ; ಆರು ಆರೋಪಿಗಳು ಭಾಗಿ - ಸಿಸಿಬಿ ಎಸಿಪಿ ತಂಡದಿಂದ ಮುಂದಿನ ತನಿಖೆ…

14 hours ago

ಕಾಪು : ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ – vishwanews24

ಕಾಪು : ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ ಕಾಪು: ಉಳಿಯಾರಗೋಳಿ ಗ್ರಾಮದ ನೀಲಾಧರ ಬಂಗೇರ (58) ಇಲಿ ಪಾಷಾಣ…

14 hours ago