Featured

ಇಸ್ರೋ: ಭೂಮಿ ಪರಿವೀಕ್ಷಣಾ ಇಒಎಸ್‌-08 ಉಪಗ್ರಹ ಯಶಸ್ವಿ ಉಡಾವಣೆ – vishwanews24

ಇಸ್ರೋ: ಭೂಮಿ ಪರಿವೀಕ್ಷಣಾ ಇಒಎಸ್‌-08 ಉಪಗ್ರಹ ಯಶಸ್ವಿ ಉಡಾವಣೆ

ಶ್ರೀಹರಿಕೋಟ: ಭೂಮಿ ಪರಿವೀಕ್ಷಣಾ ಇಒಎಸ್‌-08 ಉಪಗ್ರಹವನ್ನು ಇಸ್ರೋ ಶುಕ್ರವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಉಪಗ್ರಹವು ಉದ್ದೇಶಿತ ಕಕ್ಷೆ ಸೇರಿದೆ.

ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ ಉಡ್ಡಯನ ಕೇಂದ್ರದಿಂದ ಚೆನ್ನೈನಿಂದ ಪೂರ್ವಕ್ಕೆ 135 ಕಿ.ಮೀ ದೂರದಲ್ಲಿ 9:17 ಕ್ಕೆ ಉಪಗ್ರಹ ಉಡಾವಣೆ ಮಾಡಲಾಯಿತು. ಭೂಮಿಯ ವೀಕ್ಷಣಾ ಉಪಗ್ರಹ EOS-08 ಹೊತ್ತಿದ್ದ ಕಿರು ಉಪಗ್ರಹ ಉಡಾವಣಾ ವಾಹನ-D3 ನಭಕ್ಕೆ ಚಿಮ್ಮಿತು.

SSLV-D3-EOS-08 ಮಿಷನ್‌ನ ಉದ್ದೇಶ ಮೈಕ್ರೋಸ್ಯಾಟಲೈಟ್ ವಿನ್ಯಾಸಗೊಳಿಸುವುದು ಮತ್ತು ಅಭಿವೃದ್ಧಿಪಡಿಸುವುದಾಗಿದೆ. ಜೊತೆಗೆ ಭವಿಷ್ಯ ಉಪಗ್ರಹಗಳ ಕಾರ್ಯಾಚರಣೆ ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾಗಿದೆ ಎಂದು ಬೆಂಗಳೂರು ಪ್ರಧಾನ ಕಚೇರಿಯ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

EOS-08 ಉಪಗ್ರಹ ಎಲೆಕ್ಟ್ರೋ ಆಪ್ಟಿಕಲ್ ಇನ್‌ಫ್ರಾರೆಡ್ ಪೇಲೋಡ್ (EOIR), ಗ್ಲೋಬಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಮ್-ರಿಫ್ಲೆಕ್ಟೋಮೆಟ್ರಿ ಪೇಲೋಡ್ (GNSS-R) ಮತ್ತು SiC UV ಡೋಸಿಮೀಟರ್ ಎಂಬ ಮೂರು ಪೇಲೋಡ್‌ಗಳನ್ನು ಹೊಂದಿದೆ.

EOIR ಪೇಲೋಡ್: ಮಿಡ್-ವೇವ್ IR (MIR) ಮತ್ತು ಲಾಂಗ್-ವೇವ್ IR (LWIR) ಬ್ಯಾಂಡ್‌ಗಳಲ್ಲಿ, ಉಪಗ್ರಹ ಆಧಾರಿತ ಕಣ್ಗಾವಲು, ವಿಪತ್ತು ಮೇಲ್ವಿಚಾರಣೆ, ಪರಿಸರ ಮೇಲ್ವಿಚಾರಣೆಗಾಗಿ ದಿನವಿಡೀ ಚಿತ್ರಗಳನ್ನು ಸೆರೆಹಿಡಿಯಲು ವಿನ್ಯಾಸಗೊಳಿಸಲಾಗಿದೆ. ಜ್ವಾಲಾಮುಖಿ ಕಾರ್ಯಾಚರಣೆ ಪತ್ತೆ, ಕೈಗಾರಿಕಾ ಮತ್ತು ವಿದ್ಯುತ್ ಸ್ಥಾವರ ವಿಪತ್ತು ಮೇಲ್ವಿಚಾರಣೆ ಸಹ ಮಾಡಲಿದೆ.

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

2 days ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

3 days ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

3 days ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

3 days ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

3 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

3 days ago