ಇಸ್ಲಾಮಿಕ್ ರಾಷ್ಟ್ರವಾದ ಪಾಕಿಸ್ತಾನದಲ್ಲಿ ಪ್ರಭು ಶ್ರೀರಾಮನ ಕುರಿತಂತೆ ಅಲ್ಲಿರುವ ಹಿಂದುಗಳ ಪವಿತ್ರ ಕಾಟಾಸ್ರಾಜ್ ದೇವಸ್ಥಾನದ ಕುರಿತು ಮಹತ್ವದ ತೀರ್ಪನ್ನು ಪಾಕಿಸ್ತಾನದ ಸುಪ್ರೀಂಕೋರ್ಟ್ ಕೊಟ್ಟಿದೆ.
ಆ ದೇವಸ್ಥಾನಕ್ಕೆ ಸಂಭಂದಪಟ್ಟ ಅಧಿಕಾರಿಗಳನ್ನು ತರಾಟಗೆ ತೆಗೆದುಕೊಂಡಿರುವ ಪಾಕಿಸ್ತಾನದ ಹೈಕೋರ್ಟ್, ಶೀಘ್ರದಲ್ಲಿಯೇ ಕಾಟಾಸ್ರಾಜ್ ದೇವಸ್ಥಾನದಲ್ಲಿ ಪ್ರಭು ಶ್ರೀರಾಮ ಚಂದ್ರನ ಮತ್ತು ರಾಮನ ಭಕ್ತ ಭಜರಂಗಿಯ ವಿಗ್ರಹಗಳನ್ನು ಪ್ರತಿಸ್ಠಾಪಿಸುವಂತೆ ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಶಕೀಬ್ ನಿಸಾರ್ ಅವರು ಆದೇಶವನ್ನು ಹೊರಡಿಸಿದ್ದಾರೆ.
ಪಾಕಿಸ್ತಾನ ಎಂದಾಕ್ಷಣ ಕಣ್ಣೆದುರಿಗೆ ಮೂಡಿಬರುವುದು ಒಂದು ಮುಸ್ಲಿಂ ರಾಷ್ಟ್ರ. ಆದರೆ ಸ್ವಾತಂತ್ರ್ಯಪೂರ್ವದಲ್ಲಿ ಪಾಕಿಸ್ತಾನ ಅಖಂಡ ಭಾರತದ ಒಂದು ಅಂಗವಾಗಿತ್ತು. ಭಾರತದಲ್ಲಿದ್ದ ವಿವಿಧ ಧರ್ಮೀಯರೂ ಅಲ್ಲಿದ್ದರು. ತಾವು ಸ್ಥಿತರಿದ್ದಲ್ಲಿ ಆರಾಧಾನಾಲಯ, ದೇಗುಲಗಳನ್ನೂ ನಿರ್ಮಿಸಿದ್ದರು.
ಭಾರತ ವಿಭಜನೆಗಿಂತ ಮೊದಲು 428 ಹಿಂದೂ ದೇವಾಲಯಗಳು ಆ ಪ್ರದೇಶದಲ್ಲಿ ಇದ್ದವು. ಆದರೆ ಇಂದು ಕೇವಲ 26 ದೇವಾಲಯಗಳು ಮಾತ್ರ ಉಳಿದುಕೊಂಡಿವೆ.
ಪಾಕಿಸ್ತಾನದಲ್ಲಿ ಈಗ ಉಳಿದ ದೇವಾಲಯಗಳ ಪೈಕಿ ಕಾಟಾಸ್ರಾಜ್ ದೇವಾಲಯ ಪ್ರಸಿದ್ಧ ದೆವಾಲಯ. ಜಗತ್ತಿನಲ್ಲಿರೋ ಅತ್ಯಂತ ಪವಿತ್ರ ತೀರ್ಥ ಕ್ಷೇತ್ರದಲ್ಲಿ ಇದು ಎರಡನೇ ಪುಣ್ಯ ತೀರ್ಥ ಕ್ಷೇತ್ರ. ಪಾಕಿಸ್ತಾನದ ನೆಲದಲ್ಲಿ ಬೇರೂರಿರೋ ಹಿಂದೂ ತೀರ್ಥಕ್ಷೆತ್ರದ ಜೀರ್ಣೋದ್ದಾರಕ್ಕೆ, ಸ್ವತಃ ಪಾಕಿಸ್ತಾನಾವೇ ಮುಂದಾಗಿದೆ. ಇದಕ್ಕೆ ಕಾರಣ ಭಾರತದ ಹಿರಿಯ ರಾಜಕೀಯ ಮುತ್ಸದ್ದಿ. ಬಿಜೆಪಿಯ ಭೀಷ್ಮ ಎಲ್.ಕೆ ಅಡ್ವಾಣಿ. ಇದರ ಹಿಂದೆ ಎಲ್.ಕೆ. ಅಡ್ವಾಣಿಯವರ ಪರಿಶ್ರಮವಿದೆ.
ಶತೃ ರಾಷ್ಟ್ರದಲ್ಲಿ ಹಿಂದೂ ದೇವಾಲಯ ತಲೆ ಎತ್ತಿ ನಿಂತದ್ದು ಖುಷಿಯ ವಿಚಾರ. ಹಾಗೂ ವೈರಿ ರಾಷ್ಟ್ರವೇ ದೇವಾಲಯಗಳ ಜೀರ್ಣೋದ್ಧಾರಕ್ಕೆ ನಿಂತಿರೋದು ಸಮಾಧಾನಕರ ಸಂಗತಿ. ಈಗ ಪಾಕಿಸ್ತಾನದ ಸುಪ್ರೀಂಕೋರ್ಟ್ ಕಾಟಾಸರಾಜ್ ದೇವಾಲಯದಲ್ಲಿ ಪ್ರಭು ಶ್ರೀರಾಮನ ಮತ್ತು ರಾಮನ ಭಕ್ತ ಹನುಮಾನನ ವಿಗ್ರಹ ಪ್ರತಿಷ್ಠಾಪನೆಗೆ ಆದೇಶ ಕೊಟ್ಟಿರುವುದು, ಹಿಂದುಗಳು ಹೆಮ್ಮೆ ಪಡಬೇಕಾದ ವಿಷಯ.
ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ ಶಿಳ್ಳೆ ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್ ಭಟ್ ಗರಂ ಮಂಗಳೂರು: ಯಕ್ಷಗಾನ…
ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…
SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…
ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಗೌರವ ಡಾಕ್ಟರೇಟ್ ಮಂಗಳೂರು…
ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…
ಕೇಂದ್ರ ಸರ್ಕಾರ ತೈಲ ಬೆಲೆ ಏರಿಸುವ ಮೂಲಕ ನಮ್ಮನ್ನ ಕೊಲೆ ಮಾಡ್ತಿದೆ : ಡಿಕೆಶಿ ಬೆಂಗಳೂರು : ಕೇಂದ್ರ ಸರ್ಕಾರ…