ದಾವಣಗೆರೆ: ಈಗ ಮೋದಿ ಇದ್ದಾರೆ ಮುಂದೆ ಯೋಗಿ ಬರ್ತಾರೆ. ಮೋದಿಗಿಂತ ದಿಟ್ಟ ನಿರ್ಧಾರ ಕೈಗೊಳ್ತಾರೆ ಎಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಾನು ಸಿಎಂ ಆದ್ರೆ ಜೆಸಿಬಿ ಸಹಿತ ಪ್ರಮಾಣ ವಚನ ಸ್ವೀಕರಿಸುವುದಾಗಿ ಹೇಳಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮರಡಿ ಗ್ರಾಮದ ಧರ್ಮ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಈ ಹಿಂದೆ ಪಕ್ಷದಿಂದ ಉಚ್ಚಾಟನೆ ಆದಾಗ ಅಮಿತ್ ಶಾ ಮರಳಿ ಬಿಜೆಪಿ ಕರೆತಂದಿದ್ದರು. ಯಡಿಯೂರಪ್ಪ ಅಲ್ಲ ನನ್ನ ಹಿರಿತನ ನೋಡಿದ್ರೆ ನಾನೇ ಸಿಎಂ ಆಗಬೇಕು. ಆದ್ರೆ ನನಗೆ ಮಂತ್ರಿ ಸಹ ಮಾಡಲಿಲ್ಲ ಯಡಿಯೂರಪ್ಪ. ಆವಾಗಿಂದನೇ ತುಳಿಯುತ್ತಾ ಬಂದಿದ್ದಾರೆ, ಕೊನೆಗೆ ಮದ್ದೂರಿನಿಂದ ಎದ್ದೇ. ರಾಜ್ಯದಲ್ಲಿ ಪಕ್ಷದಿಂದ ಉಚ್ಚಾಟನೆ ಆದವರೆಲ್ಲಾ ಸಿಎಂ ಆಗಿದ್ದಾರೆ. ನಾನು ಯಾಕೆ ಆಗಬಾರದು ಅಂತ ಪ್ರಶ್ನಿಸಿದರು.
ರಾಜ್ಯದಲ್ಲಿ ಡಿಜೆ ಪರವಾನಿಗೆಯಿಲ್ಲ. ಆದ್ರೆ ನಮ್ಮ ವಿಜಯಪುರದಲ್ಲಿ ಮಾತ್ರ ಡಿಜೆ ಪರವಾನಿಗೆ ಇದೆ. ನಾಳೆ ನಾನು ಸಿಎಂ ಆಗುವಾಗ ಜೆಸಿಬಿ ಸಹಿತ ಪ್ರಮಾಣ ವಚನ ಸ್ವೀಕರಿಸುವೆ. ಗಣೇಶ ಮೆರವಣಿಗೆಯಲ್ಲಿ ಜೆಸಿಬಿಯನ್ನೇ ಮುಂದೆ ಬಿಡುತ್ತೇನೆ. ಈಗ ಮೋದಿ ಇದ್ದಾರೆ ಮುಂದೆ ಯೋಗಿ ಬರಲಿದ್ದಾರೆ. ಮೋದಿಗಿಂತ ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಮುಸ್ಲಿಂ ಓಲೈಕೆ ಮಾಡುತ್ತಾರೆ. ಇದಕ್ಕೆ ಸುಧಾರಿಸಿಕೊಳ್ಳಬೇಕು ಅಂದ್ರೆ 2028ರ ವರೆಗೆ ಸಿಎಂ ಆಗಿ ಉಳಿತೀರಿ. ಇಲ್ಲಾದ್ರೆ ಇಷ್ಟರಲ್ಲಿ ಸರ್ಕಾರ ಪತನವಾಗುತ್ತೆ. ಆದ್ರೆ ಸಿದ್ದರಾಮಯ್ಯ ಅವರು ಡಿಕೆ ಶಿವಕುಮಾರ್‌ಗೆ ಸಿಎಂ ಆಗೋಕೆ ಬಿಡಲ್ಲ. ಹಿಂದೂಗಳು ಜನಸಂಖ್ಯೆ ಹೆಚ್ಚಾಗಬೇಕು. ನಾನು ಸಿಎಂ ಆದ್ರೆ 3ನೇ ಮಕ್ಕಳಾದ್ರೆ ಎಲ್ಲಾ ಉಚಿತ ಸೌಲಭ್ಯ. ಮದ್ವೆಗೆ 5 ಲಕ್ಷ ರೂಪಾಯಿ ಸಹ ಉಚಿತ ಕೊಡುವೆ. ಸಾಬರು 25 ಅಡಿತಾರೆ ನಾವು ಕಟ್ಟಿದ ತೆರಿಗೆಯನ್ನೇ ಅವರೇ ತಿಂದು ತೇಗುತ್ತಾರೆ ಅಂತ ಲೇವಡಿ ಮಾಡಿದರು.
ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ ಶಿಳ್ಳೆ ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್ ಭಟ್ ಗರಂ ಮಂಗಳೂರು: ಯಕ್ಷಗಾನ…
ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…
SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…
ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಗೌರವ ಡಾಕ್ಟರೇಟ್ ಮಂಗಳೂರು…
ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…
ಕೇಂದ್ರ ಸರ್ಕಾರ ತೈಲ ಬೆಲೆ ಏರಿಸುವ ಮೂಲಕ ನಮ್ಮನ್ನ ಕೊಲೆ ಮಾಡ್ತಿದೆ : ಡಿಕೆಶಿ ಬೆಂಗಳೂರು : ಕೇಂದ್ರ ಸರ್ಕಾರ…