Featured

ಈಡಿಗ ಸಮಾಜದ ಮಠಕ್ಕೆ 10 ಎಕರೆ ಜಮೀನು ಮಂಜೂರು: ಸಿಎಂ ಬೊಮ್ಮಾಯಿ – Vishwanews24

ಈಡಿಗ ಸಮಾಜದ ಮಠಕ್ಕೆ 10 ಎಕರೆ ಜಮೀನು ಮಂಜೂರು: ಸಿಎಂ ಬೊಮ್ಮಾಯಿ

ಬೆಂಗಳೂರು : ಈಡಿಗ ಸಮಾಜದ ಮಠಕ್ಕೆ 10 ಎಕರೆ ಜಮೀನನ್ನು ಮಂಜೂರು ಮಾಡಿ ಶೀಘ್ರವಾಗಿ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆಂಗಳೂರಿನ ವೈಯಾಲಿಕಾವಲ್ ನ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಆಯೋಜಿಸಲಾಗಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸಮುದಾಯ ಭವನಕ್ಕೆ ಎರಡು ಕಂತುಗಳಲ್ಲಿ 5 ಕೋಟಿ‌ ರೂ ಒದಗಿಸಿ, 4 ನಾರಾಯಣ ಗುರುಗಳ ವಸತಿ ಶಾಲೆಗೆ 30 ರಿಂದ 40 ಕೋಟಿ ರೂ. ಒದಗಿಸಲಾಗುವುದು. ಸಮಾಜದ ಬಡ ಮಕ್ಕಳಿಗೆ ನೀಡುವ ಕಾರ್ಯ ಇದೇ ವರ್ಷ ಆರಂಭವಾಗುತ್ತದೆ ಎಂದು ಹೇಳಿದರು.

ತೊಂದರೆಗಳಿಂದ ಮುಕ್ತಿ..ನೋಡಿ ಇಂದಿನ ದಿನ ಭವಿಷ್ಯ.. ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

ನಾರಾಯಣ ಗುರುಗಳ ವಿಚಾರಧಾರೆ ಸರ್ವ ಕಾಲಕ್ಕೂ ಅವಶ್ಯಕ. ಅತ್ಯಂತ ಮಾನವೀಯ ತಳಹದಿಯ ಮೇಲೆ ಬದುಕನ್ನು ಯಾವ ರೀತಿ ನಡೆಸಬೇಕು ಎನ್ನುವುದನ್ನು ಮಾರ್ಮಿಕವಾಗಿ ಬದುಕಿ ತೋರಿಸಿದವರು. ಈ ದೇಶ-ವಿಶ್ವದಲ್ಲಿ ‌ನಾವು ಹಲವಾರು ಧರ್ಮ,‌ ಜಾತಿಗಳನ್ನು ನೋಡಿದ್ದೇವೆ.‌ ಎಲ್ಲ ಧರ್ಮ ಜಾತಿಗಳು ಮಾನವೀಯ ಗುಣಗಳನ್ನು ಒಳಗೊಂಡಿವೆ. ನಮ್ಮಲ್ಲಿ ಸುಖ, ಶಾಂತಿ, ನೆಮ್ಮದಿ, ವಿಶ್ವಾಸ, ದಯೆಯಿಂದ ತುಂಬಿರಬೇಕು ಎನ್ನುವುದು ಮಾನವೀಯ ಗುಣ. ಮನುಷ್ಯ ಮತ್ತು ಮಾನವನ ನಡುವೆ ವ್ಯತ್ಯಾಸವಿದೆ. ಕೆಲವೇ ಕೆಲವರು ಮಾನವರಾಗಿ, ಇನ್ನೂ ಕೆಲವರು ಅತ್ಯಂತ ಯುಗಪುರುಷರಾಗಿ ದೇವ ಮಾನವರಾಗುತ್ತಾರೆ. ಅಂತಹ ದೇವ ಮಾನವರಾಗಿರುವವರು ನಾರಾಯಣ ಗುರುಗಳು ಎಂದು ಸಿಎಂ ತಿಳಿಸಿದರು.

ಸರ್ವಕಾಲಿಕ ಸತ್ಯ ಮಾರ್ಗದಲ್ಲಿ ನಡೆಯುವವನೇ ದೇವ ಮಾನವ. ಅವರ ಬದುಕಿನ ಸಾವಿರಾರು ಹೆಜ್ಜೆಗಳಲ್ಲಿ ನಾವು ಎರಡು ಹೆಜ್ಜೆ ನಡೆದರೆ ನಮ್ಮ ಜೀವನ ಸಾರ್ಥಕ‌ ಆಗುತ್ತದೆ. ಬದಲಾವಣೆ ಜಗದ ನಿಯಮ. ಆದರೆ ಬದಲಾವಣೆ ಆರಂಭದಲ್ಲಿಯೇ ಆಗುವುದಿಲ್ಲ. ಆಚಾರ ವಿಚಾರದಲ್ಲಿ ಬದಲಾವಣೆ ಸುಲಭವಾಗಿ ಆಗುವುದಿಲ್ಲ. ಅದಕ್ಕೆ ಗುರುವಿನ ಅವಶ್ಯಕತೆಯಿದೆ. ಗುರುವಿನ ಮಾರ್ಗದರ್ಶನ, ಸ್ಪೂರ್ತಿಯಿಂದ ನಾವು ನಮ್ಮ ಬದುಕಿನ ಗುರಿಯನ್ನು ಮುಟ್ಟಬಹುದಾಗಿದೆ. ನಮ್ಮ ದೇಶಕ್ಕೆ‌ ಹಿಂದಿನಗಿಂತಲೂ ಈಗ ನಾರಾಯಣ ಗುರುಗಳ ಅವಶ್ಯಕತೆ ಹೆಚ್ಚಿದೆ ಎಂದು ತಿಳಿಸಿದರು.

ಮಂಗಳೂರು; ಫಾಝಿಲ್ ಹತ್ಯೆ ಪ್ರಕರಣದಲ್ಲಿ‌ ಸರ್ಕಾರದ ತಾರತಮ್ಯ ಆರೋಪ..ಇಂದು ಮುಸ್ಲಿಂ ಐಕ್ಯತಾ ವೇದಿಕೆಯ ನೇತೃತ್ವದಲ್ಲಿ ಪ್ರತಿಭಟನೆ – Vishwanews24

ಸಮಾಜದಲ್ಲಿ ಜಾಗೃತಿಯ ಜೊತೆಗೆ ಒಗ್ಗಟ್ಟು ಬಹಳ ಮುಖ್ಯ. ಬೇರೆ ಬೇರೆ 26 ಕಸುಬುಗಳಲ್ಲಿ ಕೆಲಸ ಮಾಡಿಕೊಂಡರು, ಅವರನ್ನು ಒಗ್ಗೂಡಿಸಿದ್ದು ನಾರಾಯಣ ಗುರುಗಳು. ಇದನ್ನು ಕಾಪಾಡಿಕೊಂಡು ಹೋಗಬೇಕು. ಪ್ರಜಾಪ್ರಭುತ್ವದಲ್ಲಿ ಸಂಘಟಿತವಾದ ಧ್ವನಿಗೆ ಬಹಳ ಬೆಲೆಯಿದೆ. ಈ ವ್ಯವಸ್ಥೆಯಲ್ಲಿ ನಮ್ಮ ಬದುಕು, ನಮ್ಮ ಮಕ್ಕಳ ಭವಿಷ್ಯ ಚೆನ್ನಾಗಿ ಆಗಬೇಕಾದರೆ, ಈ ಸಮಾಜ ಸಂಘಟಿತವಾಗಿ ಎದ್ದು ನಿಲ್ಲಬೇಕು ಎಂದು ಕರೆ ನೀಡಿದರು.

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

4 days ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

5 days ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

5 days ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

5 days ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

5 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

5 days ago