Featured

ಈ ವರ್ಷದ ಕೊನೆಯ ಸೂರ್ಯಗ್ರಹಣ ವಿಶೇಷತೆ ಇಲ್ಲಿದೆ ಓದಿ ಈ ವರದಿ….Vishwanews24

ನವದೆಹಲಿ,: ಒಂದು ತಿಂಗಳಿನಲ್ಲಿ ಈ ವರ್ಷದ ಕೊನೆಯ ಸೂರ್ಯಗ್ರಹಣ ಸಂಭವಿಸಲಿದೆ. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಪ್ರವೇಶಿಸುವ ಈ ವೇಳೆ ಸೂರ್ಯ ತನ್ನ ಪ್ರಖರತೆಯನ್ನು ಕಳೆದುಕೊಳ್ಳುತ್ತದೆ. ಕೆಲವೇ ಕ್ಷಣಗಳು ಸಂಭವಿಸುವ ಈ ವಿದ್ಯಮಾನಕ್ಕೆ ಭಾರತ ಕೂಡ ಸಾಕ್ಷಿಯಾಗಲಿದೆ.

ಪ್ರಖರಿಸುವ ಗುಂಡನೆಯ ಸೂರ್ಯ, ಗ್ರಹಣ ಆವರಿಸಿದ ಸಂದರ್ಭದಲ್ಲಿ ಚಿನ್ನದ ಹೊಳಪಿನ ಉಂಗುರದಂತೆ ಗೋಚರಿಸುತ್ತಾನೆ. ಡಿ. 26ರಂದು 2019ರ ಕೊನೆಯ ಸೂರ್ಯಗ್ರಹಣ ಉಂಟಾಗಲಿದ್ದು, ಇದು ಭಾರತದಲ್ಲಿ ಭಾಗಶಃ ಗೋಚರವಾಗಲಿದೆ. ವರ್ಷದ ಅಂತ್ಯದಲ್ಲಿ ಉಂಟಾಗುವ ಸೂರ್ಯಗ್ರಹಣ ವಿಶಿಷ್ಟವೂ ಆಗಿದೆ. ಏಕೆಂದರೆ ಸುದೀರ್ಘ ಕಾಲ ಸೂರ್ಯನನ್ನು ಚಂದ್ರ ಆವರಿಸಿಕೊಳ್ಳಲಿದೆ. ಹೀಗಾಗಿ ಅದರ ಪರಿಣಾಮ ಕೂಡ ಹೆಚ್ಚು ಅವಧಿಯವರೆಗೆ ಇರುತ್ತದೆ.

ಭಾರತವಲ್ಲದೆ, ಸೌದಿ ಅರೇಬಿಯಾ, ಕತಾರ್, ಸುಮಾತ್ರಾ, ಮಲೇಷ್ಯಾ, ಒಮನ್, ಸಿಂಗಪುರ, ಉತ್ತರ ಮರೀನಾ ಐಲ್ಯಾಂಡ್ಸ್, ಶ್ರೀಲಂಕಾ ಮತ್ತು ಬೋರ್ನಿಯೋಗಳಿಗೆ ಸೂರ್ಯಗ್ರಹಣ ಗೋಚರವಾಗಲಿದೆ. ಭಾರತದ ಎಲ್ಲ ಸ್ಥಳಗಳಲ್ಲಿಯೂ ಸಂಪೂರ್ಣ ಗ್ರಹಣ ಕಾಣಿಸಿಕೊಳ್ಳುವುದಿಲ್ಲ. ತಮಿಳುನಾಡಿನ ಮದುರೆ, ಕೊಯಮತ್ತೂರು, ಮತ್ತು ಕೇರಳದ ಚೆರುವತೂರು, ಕೋಯಿಕ್ಕೋಡ್‌ನಲ್ಲಿ ಮಾತ್ರ ಸಂಪೂರ್ಣ ಸೂರ್ಯಗ್ರಹಣ ನೋಡಲು ಸಾಧ್ಯ. ಉಳಿದ ಭಾಗಗಳಲ್ಲಿ ಭಾಗಶಃ ಸೂರ್ಯಗ್ರಹಣ ಕಾಣಿಸಲಿದೆ.

ಭಾರತದಲ್ಲಿ ಡಿ. 26ರ ಬೆಳಿಗ್ಗೆ 8.17ಕ್ಕೆ ಸೂರ್ಯಗ್ರಹಣ ಆರಂಭವಾಗಲಿದೆ. ಬೆಳಿಗ್ಗೆ 10.57ಕ್ಕೆ ಅದು ಪೂರ್ಣಗೊಳ್ಳಲಿದೆ. ಈ ನಡುವೆ ಬೆಳಿಗ್ಗೆ 9.31ಕ್ಕೆ ಪೂರ್ಣ ಪ್ರಮಾಣದಲ್ಲಿ ಸೂರ್ಯಗ್ರಹಣ ಗೋಚರವಾಗಲಿದೆ. 2019ರ ಕೊನೆಯ ಸೂರ್ಯಗ್ರಹಣ ಒಟ್ಟು 2 ಗಂಟೆ 40 ನಿಮಿಷ ಮತ್ತು 6 ಸೆಕೆಂಡ್‌ಗಳವರೆಗೆ ಸಂಭವಿಸಲಿದೆ ಎಂದು ವಿವಿಧ ವೆಬ್‌ಸೈಟ್‌ಗಳು ತಿಳಿಸಿವೆ. ಈ ಅವಧಿಯಲ್ಲಿ ಸೂರ್ಯನನ್ನು ಚಂದ್ರ ಶೇ 91.93ರಷ್ಟು ಆವರಿಸಿಕೊಳ್ಳಲಿದೆ.

ಉಂಗುರಾಕಾರದಲ್ಲಿ ಸೂರ್ಯನನ್ನು ಗೋಚರಿಸುವಂತೆ ಮಾಡುವ ಗ್ರಹಣವನ್ನು ‘ರಿಂಗ್ ಆಫ್ ಫೈರ್’ ಎಂದೂ ಕರೆಯಲಾಗುತ್ತದೆ. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಚಂದ್ರನ ನೆರಳು ಭೂಮಿಯ ಮೇಲೆ ಬೀಳುತ್ತದೆ. ಆಗ ಸೂರ್ಯನ ಸುತ್ತಲೂ ಉಂಗುರಾಕಾರದ ಬೆಳಕು ಕಾಣಿಸುತ್ತದೆ. ಸೂರ್ಯಗ್ರಹಣ ಆಗಾಗ್ಗೆ ಸಂಭವಿಸುತ್ತಿದ್ದರೂ, ಸೂರ್ಯನಿಗಿಂತ ತುಸು ಸಣ್ಣನೆ ಎದುರಾಗುವ ಚಂದ್ರನ ಸುತ್ತಲಿನಿಂದ ಬರುವ ಬೆಳಕು ಉಂಗುರವನ್ನು ಸೃಷ್ಟಿಸುತ್ತದೆ. ಈ ವಿದ್ಯಮಾನವನ್ನು ಬರಿಗಣ್ಣಿನಿಂದ ವೀಕ್ಷಿಸುವುದು ಅಪಾಯಕಾರಿ ಎಂದು ಎಚ್ಚರಿಕೆ ನೀಡಲಾಗಿದೆ.

ಯುಎಇದಲ್ಲಿ 172 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಉಂಗುರಾಕಾರದ ಸೂರ್ಯಗ್ರಹಣ ಕಾಣಿಸಲಿದೆ. ಇದಕ್ಕೂ ಮೊದಲು 1847ರಲ್ಲಿ ಈ ರೀತಿಯ ಸೂರ್ಯಗ್ರಹಣ ಕಾಣಿಸಿತ್ತು. ಈ ಬಾರಿ ಸಂಪೂರ್ಣ ಸೂರ್ಯಗ್ರಹಣವು ಅಬುದಾಬಿಯ ಘಾರ್ಬಿಯಾ ಅಥವಾ ಲಿವಾ ಪ್ರದೇಶದಲ್ಲಿ ಮಾತ್ರ ಕಾಣಿಸಲಿದೆ. ಹರಿಯಾಣದ ಕುರುಕ್ಷೇತ್ರದಲ್ಲಿ ಹತ್ತು ವರ್ಷದ ಬಳಿಕ ಗ್ರಹಣ ಗೋಚರವಾಗಲಿದೆ.

Vishwa News 24

Recent Posts

ಕಾರ್ಕಳ ಮಹಾಮಸ್ತಕಾಭಿಷೇಕ 2027 : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 1.59 ಕೋಟಿ ರೂ. ಮಂಜೂರು – vishwanews24

ಕಾರ್ಕಳ ಮಹಾಮಸ್ತಕಾಭಿಷೇಕ 2027 : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 1.59 ಕೋಟಿ ರೂ. ಮಂಜೂರು ಉಡುಪಿ: ಕಾರ್ಕಳದಲ್ಲಿ 2027ರಲ್ಲಿ ನಡೆಯಲಿರುವ…

16 hours ago

ಕಾಪು: ಕ್ಷುಲ್ಲಕ ವಿಚಾರಕ್ಕೆ ಪತಿಯೊಂದಿಗೆ ಜಗಳವಾಡಿ ಅಪ್ರಾಪ್ತ ಮಗಳೊಂದಿಗೆ ಮಹಿಳೆ ನಾಪತ್ತೆ – vishwanews24

ಕಾಪು: ಕ್ಷುಲ್ಲಕ ವಿಚಾರಕ್ಕೆ ಪತಿಯೊಂದಿಗೆ ಜಗಳವಾಡಿ ಅಪ್ರಾಪ್ತ ಮಗಳೊಂದಿಗೆ ಮಹಿಳೆ ನಾಪತ್ತೆ ಕಾಪು: ಕ್ಷುಲ್ಲಕ ಕಾರಣಕ್ಕಾಗಿ ಪತಿಯೊಂದಿಗೆ ಜಗಳವಾಡಿ ಬಳಿಕ…

16 hours ago

ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯುವುದು ನಿಮ್ಮ ದೇಹದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ತಿಳಿದುಕೊಳ್ಳಿ – vishwanews24

ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯುವುದು ಒಳ್ಳೆಯದೋ? ಅಥವಾ ಕೆಟ್ಟದೋ? ಬೆಳಿಗ್ಗೆ ಖಾಲಿ ಹೊಟ್ಟೆಗೆ ಎಳನೀರು ಕುಡಿಯುವುದರಿಂದಾಗುವ ಪ್ರಯೋಜನಗಳೇನು ಗೊತ್ತಾ? ಇದು ನಿಮ್ಮ…

16 hours ago

ಕಾಪು: ತಮಿಳುನಾಡು ದೋಣಿ ಡಿಕ್ಕಿ ; ಸ್ಥಳೀಯ ನಾಡದೋಣಿ ಮುಗುಚಿ ಬಿದ್ದು ಮೀನುಗಾರ ನಾಪತ್ತೆ – vishwanews24

ಕಾಪು: ತಮಿಳುನಾಡು ಮೂಲದ ದೋಣಿ ಡಿಕ್ಕಿ ; ಸ್ಥಳೀಯ ನಾಡದೋಣಿ ಮುಗುಚಿ ಮೀನುಗಾರ ನಾಪತ್ತೆ  ಕಾಪು: ಕಾಪು ಕಡಲ ಕಿನಾರೆಯಲ್ಲಿ…

17 hours ago

ಭೀಕರ ರಸ್ತೆ ಅಪಘಾತ : ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ಸೀಸನ್-3ರ ಸ್ಪರ್ಧಿ ಬಾವತೀಶ್ ಸಾವು – vishwanews24

ಭೀಕರ ರಸ್ತೆ ಅಪಘಾತ : ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ಸೀಸನ್-3ರ ಸ್ಪರ್ಧಿ ಬಾವತೀಶ್ ಸಾವು ಯಲ್ಲಾಪುರ : ಉತ್ತರ ಕನ್ನಡ…

19 hours ago

ಕುಂದಾಪುರ: ರಸ್ತೆ ಅಪಘಾತ ; ಗಾಣಿಗ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ ಗಾಣಿಗ ಸಾವು – vishwanews24

ಕುಂದಾಪುರ: ರಸ್ತೆ ಅಪಘಾತ ; ಗಾಣಿಗ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ ಗಾಣಿಗ ಸಾವು ಕುಂದಾಪುರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ…

19 hours ago