ಹೊಸದಿಲ್ಲಿ,: ಈ ವರ್ಷ ದಾಖಲೆಯ ಎರಡು ಲಕ್ಷ ಭಾರತೀಯ ಮುಸ್ಲಿಮರು ಹಜ್ ನಿರ್ವಹಿಸಲು ಪ್ರಯಾಣ ಬೆಳೆಸಲಿದ್ದಾರೆ, ಈ ಪೈಕಿ ಶೇ.48 ಮಹಿಳೆಯರು ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಮಂಗಳವಾರ ತಿಳಿಸಿದ್ದಾರೆ.
ಈ ವರ್ಷ 2,340ಕ್ಕೂ ಅಧಿಕ ಮಹಿಳೆಯರು ಪುರುಷರ ಜೊತೆಗಾರರು ಇಲ್ಲದೆ ಹಜ್‌ಗೆ ತೆರಳಲಿದ್ದಾರೆ. ಕಳೆದ ವರ್ಷ ಈ ಸಂಖ್ಯೆ 1,180 ಆಗಿತ್ತು. ಈ ಮಹಿಳೆಯರನ್ನು ಯಾವುದೇ ಲಾಟರಿ ವ್ಯವಸ್ಥೆಯಿಲ್ಲದೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಹಜ್ ಕೋಟ ಹೆಚ್ಚಾಗಿರುವ ಕಾರಣ ನಿರೀಕ್ಷಣಾ ಪಟ್ಟಿಯಲ್ಲಿದ್ದ ಎಲ್ಲರಿಗೂ ಈ ವರ್ಷ ಅವಕಾಶ ನೀಡಿರುವುದರಿಂದ ಇದೇ ಮೊದಲ ಬಾರಿ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಆಂಧ್ರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳ ಎಲ್ಲ ಅರ್ಜಿದಾರರು ಹಜ್‌ಗೆ ತೆರಳಲಿದ್ದಾರೆ ಎಂದವರು ಮಾಹಿತಿ ನೀಡಿದ್ದಾರೆ.
ಸ್ವಾತಂತ್ರ ನಂತರ ಇದೇ ಮೊದಲ ಬಾರಿ ಎರಡು ಲಕ್ಷ ಭಾರತೀಯ ಮುಸ್ಲಿಮರು 21 ವಿವಿಧ ವಿಮಾನ ನಿಲ್ದಾಣಗಳಿಂದ 500 ವಿಮಾನಗಳಲ್ಲಿ ಹಜ್‌ಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ನಖ್ವಿ ತಿಳಿಸಿದ್ದಾರೆ.
ಹಜ್‌ಗೆ ತೆರಳುವ ವಿಮಾನಗಳು ದಿಲ್ಲಿ, ಗಯಾ,ಗುವಾಹತಿ ಮತ್ತು ಶ್ರೀನಗರದಿಂದ ಜುಲೈ 4ಕ್ಕೆ, ಬೆಂಗಳೂರು ಮತ್ತು ಕಲ್ಲಿಕೋಟೆಯಿಂದ ಜುಲೈ 7ಕ್ಕೆ, ಕೊಚ್ಚಿನ್‌ನಿಂದ ಜುಲೈ 14ಕ್ಕೆ, ಮಂಗಳೂರಿನಿಂದ ಜುಲೈ 17ಕ್ಕೆ, ಮುಂಬೈಯಿಂದ ಜುಲೈ 14 ಮತ್ತು 21ಕ್ಕೆ ಹಾಗೂ ಶ್ರೀನಗರದಿಂದ ಜುಲೈ 21ಕ್ಕೆ ಪ್ರಯಾಣ ಬೆಳೆಸಲಿವೆ. ಎರಡನೇ ಹಂತದಲ್ಲಿ, ವಿಮಾನಗಳು, ಅಹ್ಮದಾಬಾದ್, ಜೈಪುರ ಮತ್ತು ಲಕ್ನೋದಿಂದ ಜುಲೈ 20ಕ್ಕೆ, ಭೋಪಾಲ ಮತ್ತು ರಾಂಚಿಯಿಂದ ಜುಲೈ 21ಕ್ಕೆ, ಔರಂಗಾಬಾದ್‌ನಿಂದ ಜುಲೈ 22ಕ್ಕೆ, ಕೋಲ್ಕತಾ ಮತ್ತು ನಾಗ್ಪುರದಿಂದ ಜುಲೈ 25ಕ್ಕೆ, ಹೈದರಾಬಾದ್‌ನಿಂದ ಜುಲೈ 26ಕ್ಕೆ, ವಾರಣಾಸಿಯಿಂದ ಜುಲೈ 29ಕ್ಕೆ ಮತ್ತು ಚೆನ್ನೈಯಿಂದ ಜುಲೈ 31ಕ್ಕೆ ಹಜ್‌ಗೆ ಪ್ರಯಾಣ ಬೆಳೆಸಲಿವೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…