ಬೆಂಗಳೂರು: ಈ ಸರ್ಕಾರದಲ್ಲಿ ನಾನು ಮಂತ್ರಿ ಆಗಲ್ಲ ಎಂದು ಮಾಜಿ ಸಚಿವ ರೋಷನ್ ಬೇಗ್ ಆಕ್ರೋಶ ಹೊರಹಾಕಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೇ ಮುಖ್ಯಮಂತ್ರಿ, ನಾನೇ ಮುಖ್ಯಮಂತ್ರಿ ಅಂತಿದ್ರಲ್ಲಾ ಈಗಲಾದರೂ ಇಳಿದು ಬಾ ಇಳಿದು ಬಾ ಎಂದು ಸಿದ್ದರಾಮಯ್ಯ ರೀತಿಯಲ್ಲಿ ವ್ಯಂಗ್ಯವಾಡಿದರು, ಸಿದ್ದರಾಮಯ್ಯಗೆ ನಂದೇ ನಡಿಬೇಕು. ನಾನೇ ಹೇಳಿದ ಹಾಗೇ ನಡಿಬೇಕು ಅನ್ನೋ ಅಹಂ ಭಾವನೆ ಇದೆ. ನಾನೇ ಸಿಎಂ ನಾನೇ ಸಿಎಂ ಅಂತಾ ಹೇಳ್ತಾ ಇದ್ರಿ 2018ರಲ್ಲಿ ಏನು ಫಲಿತಾಂಶ ಬಂತೋ ಈಗಲೂ ಅದೇ ಆಗಿದೆ ಎಂದು ಸಿದ್ದರಾಮಯ್ಯ ವಿರುದ್ಧ ತೀವ್ರ ಆಕ್ರೋಶಗೊಂಡರು.
ನಾನೇ ಹೇಳಿದ ಹಾಗೇ ಎಲ್ಲಾ ಕೇಳಬೇಕು ಅನ್ನೋ ಇಗೋ ಇದೆ. ಅವರಪ್ಪರಾಣೆ ಮುಖ್ಯಮಂತ್ರಿ ಆಗಲ್ಲ ಅಂತ ಹೇಳಿ ಕುಮಾರಸ್ವಾಮಿಯನ್ನು ಸಿಎಂ ಮಾಡಿದ್ರಲ್ಲಾ ಎಂದು ಇದೇ ವೇಳೆ ಟೀಕೆ ಮಾಡಿದರು.
ನಾನು ಯಾವುದೇ ನೋಟೀಸ್ ಗೂ ಉತ್ತರ ಕೊಡಲ್ಲ, ಪಕ್ಷ ಬಿಡುವುದು ಇಲ್ಲ, ಬೇರೆ ಪಕ್ಷ ಸೇರುವುದೂ ಇಲ್ಲ, ನನ್ನ ಸ್ನೇಹಿತ ರಾಮಲಿಂಗಾ ರೆಡ್ಡಿ ಜೊತೆ ನಾನಿದ್ದೇನೆ. ರಾಹುಲ್ ಗಾಂಧಿ ಅವರಲ್ಲಿ ಕ್ಷಮೆ ಕೇಳುತ್ತೇನೆ. ರಾಜ್ಯದ ಇಂತಹ ಕಾಂಗ್ರೆಸ್ ಮುಖಂಡರೆಲ್ಲಾ ಅಲ್ಲಿ ಹೋಗಿ ರಾಹುಲ್ ಗಾಂಧಿಗೆ ಮಿಸ್ ಗೈಡ್ ಮಾಡ್ತಿದ್ದಾರೆ. ದಿನೇಶ ಗುಂಡೂರಾವ್ ಅಪ್ರಬುದ್ಧ ಹಾಗೂ ವಿಫಲ ಅಧ್ಯಕ್ಷ ಎಂದು ಕೆಪಿಸಿಸಿ ಅಧ್ಯಕ್ಷರ ವಿರುದ್ಧ ವಾಗ್ದಾಳಿ ನಡೆಸಿದರು
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…