Featured

ಈ ಹಿಂದೆಯೇ ನರೇಂದ್ರ ಮೋದಿ-ಅಮಿತ್ ಶಾ ಜೋಡಿ ಇದ್ದಿದ್ದರೆ ಪಾಕಿಸ್ತಾನ ಬೇಕು ಎನ್ನುವವರ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡುತ್ತಿದ್ದರು : ಸಿ.ಟಿ. ರವಿ -Vishwanews24

ಈ ಹಿಂದೆಯೇ ನರೇಂದ್ರ ಮೋದಿ-ಅಮಿತ್ ಶಾ ಜೋಡಿ ಇದ್ದಿದ್ದರೆ ಪಾಕಿಸ್ತಾನ ಬೇಕು ಎನ್ನುವವರ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡುತ್ತಿದ್ದರು : ಸಿ.ಟಿ. ರವಿ -Vishwanews24

ಬೆಳಗಾವಿ,  : ”ಈ ಹಿಂದೆಯೇ ನರೇಂದ್ರ ಮೋದಿ-ಅಮಿತ್ ಶಾ ಜೋಡಿ ಇದ್ದಿದ್ದರೆ ಪಾಕಿಸ್ತಾನ ಬೇಕು ಎನ್ನುವವರ ಮೇಲೆ ಇವರು ಸರ್ಜಿಕಲ್ ಸ್ಟ್ರೈಕ್ ಮಾಡುತ್ತಿದ್ದರು. ಪಾಕಿಸ್ತಾನ ಬೇಕು ಎನ್ನುವವರು ತುಂಡಾಗುತ್ತಿದ್ದರು” ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

ಬಿಜೆಪಿ ವತಿಯಿಂದ ಭಾನುವಾರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜನಸೇವಕ ಸಮಾವೇಶ ಸಮಾರೋಪದಲ್ಲಿ ಮಾತನಾಡಿದ ಅವರು, ”ಪ್ರಧಾನಿ ಮೋದಿ ಪ್ರಧಾನ ಸೇವಕರಾದರೆ ನಾವು ಜನಸೇವಕರು. ಗ್ರಾಮ ಪಂಚಾಯತಿಯ ನಮ್ಮ ಸದಸ್ಯರು ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಬೇಕು. ಹಾಗೆಯೇ ಅನ್ಯಾಯ, ಅಸ್ಪೃಶ್ಯತೆ ಹಾಗೂ ಜಾತಿ ದೌರ್ಜನ್ಯದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡಬೇಕು” ಎಂದು ಹೇಳಿದರು.

ಮೀನುಗಾರ ಮತ್ತು ಸ್ಥಳೀಯರಿಗೆ ಯಾವುದೇ ತೊಂದರೆ ಇಲ್ಲ ಎಂಬಲ್ಲಿ ಮಾತ್ರ ಮರೀನಾ ನಿರ್ಮಾಣ ಮಾಡುತ್ತೇವೆ : ಶಾಸಕ ರಘುಪತಿ ಭಟ್ -Vishwanews24

”ಕಾಂಗ್ರೆಸ್‌ ದಲ್ಲಾಳಿಗಳ ಪರ ಕೆಲಸ ಮಾಡಿದೆ” ಎಂದು ದೂರಿದ ಅವರು, ”ರೈತರ ಆದಾಯ ದ್ವಿಗುಣ ಮಾಡಲು ಕೈಗೊಳ್ಳಬೇಕಾದ ಕ್ರಮವನ್ನು ನಮ್ಮ ಸರ್ಕಾರ ತೆಗೆದುಕೊಂಡಿದೆ. ಕನಿಷ್ಠ ಬೆಂಬಲ ಬೆಲೆ ಮುಂದುವರಿಯುತ್ತದೆ. ನಾವು ರೈತರಿಗೆ ಸ್ವಾತಂತ್ರ್ಯ ನೀಡುತ್ತಿದ್ದೇವೆ. ಹೀಗಿರುವಾಗ ನಾವು ರೈತ ವಿರೋಧಿಯೇ” ಎಂದು ಪ್ರಶ್ನಿಸಿದರು.

”ಕಾಂಗ್ರೆಸ್ ಸರ್ಕಾರ ಅಥವಾ ಎಚ್.ಡಿ. ದೇವೇಗೌಡರು ಇದ್ದಾಗ ಕಿಸಾನ್ ಸಮ್ಮಾನ್ ಯೋಜನೆ ಇತ್ತಾ? ರೈತ ಪರ ಯೋಜನೆಗಳನ್ನು ಜಾರಿಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ರೈತ ವಿರೋಧಿ ಆಗುತ್ತಾರಾ?” ಎಂದು ಕೂಡಾ ಪ್ರಶ್ನಿಸಿದರು.

 

Vishwa News 24

Recent Posts

ಕಾರ್ಕಳ: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ – vishwanews24

ಕಾರ್ಕಳ:   ಎಣ್ಣೆಹೊಳೆ ಸೇತುವೆಯ ಕೆಳಭಾಗದ ನದಿಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ ಕಾರ್ಕಳ: ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಣ್ಣೆಹೊಳೆ…

13 hours ago

ಕಾರ್ಕಳ:  ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ – vishwanews24

ಕಾರ್ಕಳ:  ನಾಪತ್ತೆಯಾಗಿದ್ದ ಎಣ್ಣೆಹೊಳೆ ಸೇತುವೆಯ ಕೆಳಭಾಗದ ನದಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ ಕಾರ್ಕಳ: ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಣ್ಣೆಹೊಳೆ…

13 hours ago

ಕಿರುಕುಳ ಆರೋಪ : ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ – vishwanews24

ಕಿರುಕುಳ ಆರೋಪ : ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಬಳ್ಳಾರಿ: ಗಂಡನ ಕಿರುಕುಳ ತಾಳಲಾರದೆ ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು…

13 hours ago

ಮಂಗಳೂರಿನಿಂದ ಅಗತ್ತಿ ದ್ವೀಪಕ್ಕೆ ವಿಮಾನಯಾನ ಸೇವೆ : ನೂತನ ಚಳಿಗಾಲದ ವೇಳಾಪಟ್ಟಿ ಪ್ರಕಟ – vishwanews24

ಮಂಗಳೂರಿನಿಂದ ಅಗತ್ತಿ ದ್ವೀಪಕ್ಕೆ ವಿಮಾನಯಾನ ಸೇವೆ ;ನೂತನ 'ಚಳಿಗಾಲದ ವೇಳಾಪಟ್ಟಿ ಪ್ರಕಟ ಮಂಗಳೂರು : ಕರಾವಳಿಯ ಪ್ರಯಾಣಿಕರಿಗೆ ದೇಶೀಯ ಹಾಗೂ…

14 hours ago

ಕಾಂಗ್ರೆಸ್ ಸೇರ್ಪಡೆ ಕುರಿತು ಅಂತಿಮ ನಿರ್ಧಾರ ಕೈಗೊಂಡಿಲ್ಲ : ರಘುಪತಿ ಭಟ್ – vishwanews24

ಕಾಂಗ್ರೆಸ್‌ನಿಂದ ಆಹ್ವಾನ ಬಂದಿರುವುದು ನಿಜ  .. ಪಕ್ಷ ಬದಲಾವಣೆಯಂತಹ ನಿರ್ಧಾರವನ್ನು ಏಕಾಏಕಿ ತೆಗೆದುಕೊಳ್ಳಲು ಸಾಧ್ಯವಿಲ್ಲ .. 2028ರ ವಿಧಾನಸಭಾ ಚುನಾವಣೆಯಲ್ಲಿ…

18 hours ago

ಉಡುಪಿ: ಕಾಮಗಾರಿ ಹಿನ್ನೆಲೆ ; ಸಂಚಾರಕ್ಕೆ ಬದಲಿ ಮಾರ್ಗ – vishwanews24

ಉಡುಪಿ:  ಕಾಮಗಾರಿ ಹಿನ್ನೆಲೆ ಸಂಚಾರಕ್ಕೆ ಬದಲಿ ಮಾರ್ಗ    ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ತೆಂಕಪೇಟೆ ವಾರ್ಡಿನ ಬಡಗುಪೇಟೆ ರಸ್ತೆಯಲ್ಲಿ ಒಳಚರಂಡಿ…

18 hours ago