ಮುಂಬೈ: ಉಗ್ರರನ್ನು ಉತ್ಪಾದಿಸಿ ಭಾರತಕ್ಕೆ ಕಳುಹಿಸುತ್ತಿರುವ ಪಾಕಿಸ್ತಾನ ತಿರುಗೇಟು ನೀಡಲು ನಮ್ಮ ನೆಲದಿಂದ ಹರಿದು ಹೋಗುವ ನೀರನ್ನು ನಿಲ್ಲಿಸುವ ಕಾರ್ಯ ಈಗಾಗಲೇ ಆರಂಭಗೊಂಡಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಇಂಡಸ್ ಒಪ್ಪಂದವನ್ನು ಉಲ್ಲಂಘಿಸದೇ ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರನ್ನು ನಿಲ್ಲಿಸುವ ಕಾರ್ಯ ಈಗಾಗಲೇ ಆರಂಭಗೊಂಡಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನಕ್ಕೆ ನಮ್ಮ ನೆಲದಿಂದ ಜಾಸ್ತಿ ನೀರು ಹರಿದು ಹೋಗುತ್ತದೆ. ನೀರನ್ನು ಸಂಗ್ರಹಿಸಲು ನಾವು ಜಲಾಶಯವನ್ನು ನಿರ್ಮಿಸುತ್ತಿದ್ದೇವೆ. ನಂತರ ಕಾಲುವೆಗಳ ಮೂಲಕ ನೀರನ್ನು ಹರಿಸಲಾಗುತ್ತದೆ ಎಂದು ವಿವರಿಸಿದರು.
2016ರಲ್ಲಿ ಉರಿ ಸೇನಾ ನೆಲೆಯ ಮೇಲೆ ದಾಳಿ ನಡೆದ ಬಳಿಕ ಕೇಂದ್ರ ಸರ್ಕಾರ ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರನ್ನು ಭಾರತದತ್ತ ತಿರುಗಿಸಲು ಯೋಜನೆ ರೂಪಿಸಿತ್ತು. ಈ ವಿಚಾರದ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದ ಅಂದಿನ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ, ಉಗ್ರರಿಗೆ ಸಹಕಾರ ನೀಡುವುದನ್ನು ಮುಂದುವರಿಸಿದರೆ ಮುಂದೆ ಸಂಪೂರ್ಣವಾಗಿ ಭಾರತದಿಂದ ಪಾಕಿಸ್ತಾನಕ್ಕೆ ನೀರು ಹರಿಸುವುದನ್ನು ನಿಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.
ವಿದ್ಯುತ್ ಉತ್ಪಾದನೆಗೆ ಮಾತ್ರ ಜಲಾಶಯ ನಿರ್ಮಿಸುತ್ತಿಲ್ಲ. ಮಳೆ ಕಡಿಮೆಯಾದ ಸಂದರ್ಭದಲ್ಲಿ ನೀರನ್ನು ಹರಿಸಲು ಈ ಡ್ಯಾಂ ನಿರ್ಮಾಣ ಮಾಡುತ್ತಿದ್ದೇವೆ ಎಂದು ಸರ್ಕಾರದ ಕ್ರಮಕ್ಕೆ ಅವರು ಸಮರ್ಥನೆ ನೀಡಿದರು.
ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ ಶಿಳ್ಳೆ ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್ ಭಟ್ ಗರಂ ಮಂಗಳೂರು: ಯಕ್ಷಗಾನ…
ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…
SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…
ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಗೌರವ ಡಾಕ್ಟರೇಟ್ ಮಂಗಳೂರು…
ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…
ಕೇಂದ್ರ ಸರ್ಕಾರ ತೈಲ ಬೆಲೆ ಏರಿಸುವ ಮೂಲಕ ನಮ್ಮನ್ನ ಕೊಲೆ ಮಾಡ್ತಿದೆ : ಡಿಕೆಶಿ ಬೆಂಗಳೂರು : ಕೇಂದ್ರ ಸರ್ಕಾರ…