ಉಡುಪಿ: ಕೇಂದ್ರ ಸರಕಾರ, ಸೇನೆ ಉಗ್ರರಿಗೆ ಮರೆಯಲಾಗದ ಪಾಠ ಕಲಿಸಬೇಕು, ಆದರೆ ಅದು ಭಾರತ ಪಾಕ್ ನಡುವೆ ಯುದ್ಧಕ್ಕೆ ಕಾರಣವಾಗಬಾರದು ಎಂದು ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.
ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 43ಮಂದಿ ಸಿಆರ್‍ಪಿಎಫ್ ಯೋಧರು ಹುತಾತ್ಮರಾಗಿದ್ದು ದೇಶಕ್ಕೆ ದುಃಖ ತಂದಿದೆ. ಚಿರ ಶಾಂತಿಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸುವೆ. ಯುದ್ಧವಾದರೆ ಸಾವಿರಾರು ಜನ ಬಲಿಯಾಗುತ್ತಾರೆ. ಉಗ್ರರ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಕೂಡ ಯುದ್ಧಕ್ಕೆ ಕಾರಣವಾಗಬಾರದು ಎಂದರು.
ದೇಶಕ್ಕಾಗಿ ಪ್ರಾಣತಾಗ್ಯ ಮಾಡಿದವರಿಗೆ ಒಬ್ಬ ಯೋಗಿಗೆ ದೊರೆಯುವ ಫಲವೇ ದೊರೆಯುವುದು ಎಂದು ನಮ್ಮ ವೇದಪುರಾಣಗಳು ಹೇಳುತ್ತವೆ. ಹುತಾತ್ಮರಿಗೆ ದೇವರು ಸದ್ಗತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಪೇಜಾವರ ಶ್ರೀ ಹೇಳಿದರು.
ಕೇಂದ್ರ ಸರಕಾರ ಆ ಭಯೋತ್ಪಾದಕರಿಗೆ ಮರೆಯದ ಪಾಠ ಕಲಿಸಲಿ, ಆದರೆ ಯುದ್ದವಾಗುವ ರೀತಿ ಇರಬಾರದು. ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಸರ್ಜಿಕಲ್ ಸ್ಟೈಕ್ ರೀತಿಯ ಒಂದು ಪ್ರಯೋಗವಾಗಿರಬಹುದು ಅಥವಾ ಭಯೋತ್ಪಾದಕರಿಗೆ ಒಂದು ಸಣ್ಣ ಶಾಕ್ ಕೊಡುವಂತಿರಬೇಕು. ಆದರೆ ಯುದ್ದಕ್ಕೆ ಆಹ್ವಾನ ಕೊಡುವಂತಿರಬಾರದು, ಎಂದು ಶ್ರೀಗಳು ಉಗ್ರರ ಕೃತ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ ಬೆಂಗಳೂರು: ಮಟನ್ ಶಾಪ್ ನಲ್ಲಿ ಎಂಡಿಎಂಎ ಮಾದಕ…
ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ ಕಾರ್ಕಳ : ಮನೆ ವಿಚಾರದಲ್ಲಿ ತಂದೆಯೊಬ್ಬ ತನ್ನ…
ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ ಮಂಗಳೂರು: ಮೈಸೂರು ದಸರಾ 2026ರ ಅಂಗವಾಗಿ ಮೊದಲ ಬಾರಿಗೆ ಅದ್ದೂರಿಯಾಗಿ ಆಯೋಜಿಸಲಾಗುತ್ತಿರುವ…
ಸೌಜನ್ಯಾ ಪ್ರಕರಣ: ಎಸ್‌ಐಟಿ ತಂಡದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ ಅಸಮಾಧಾನ ಬಂಟ್ವಾಳ: ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆಗೆ…
ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಬೆಂಗಳೂರು: ನವರಾತ್ರಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ‘ಗೃಹಲಕ್ಷ್ಮಿ’…
ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಬಂಟ್ವಾಳ : ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು…