ಉಡುಪಿ

ಉಚ್ಚಿಲ ದಸರಾ: ಇಂದು ವೈಭವದ  ಶೋಭಾಯಾತ್ರೆ ; ಕಾಪು ಬೀಚ್‌ನಲ್ಲಿ ಬೃಹತ್ ಗಂಗಾರತಿ, ವಿದ್ಯುದ್ದೀಪಾಲಂಕಾರ, ಸುಡುಮದ್ದು ಲೇಸರ್ ಲೈಟ್ ಪ್ರದರ್ಶನ  – vishwanews24

ಉಚ್ಚಿಲ ದಸರಾ: ಇಂದು ವೈಭವದ  ಶೋಭಾಯಾತ್ರೆ ; ಕಾಪು ಬೀಚ್‌ನಲ್ಲಿ ಬೃಹತ್ ಗಂಗಾರತಿ, ವಿದ್ಯುದ್ದೀಪಾಲಂಕಾರ, ಸುಡುಮದ್ದು ಲೇಸರ್ ಲೈಟ್ ಪ್ರದರ್ಶನ

ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಆಡಳಿತದ ಶ್ರೀ ಕ್ಷೇತ್ರ ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಸ್ಥಾನದ ಐತಿ ಹಾಸಿಕ 3ನೇ ವರ್ಷದ ಉಡುಪಿ ಉಚ್ಚಿಲ ದಸರಾ – 2024 ಕೊನೆಯ ಹಂತ ತಲುಪಿದ್ದು, ಶರನ್ನವರಾತ್ರಿಯ ವಿಜಯದಶಮಿ ದಿನವಾದ ಶನಿವಾರ ನಡೆಯಲಿರುವ ಭವ್ಯ ಶೋಭಾಯಾತ್ರೆಗೆ ಭರದ ಸಿದ್ಧತೆ ನಡೆಸಲಾಗಿದೆ.

ಕಳೆದ 2 ವರ್ಷಗಳ ದಸರಾ ಮಹೋತ್ಸವದ ಅನುಭವದೊಂದಿಗೆ ಶೋಭಾಯಾತ್ರೆಯನ್ನು ಮಹಾ ಜನ ಸಂಘ, ದಸರಾ ಸಮಿತಿ ಹಾಗೂ ಮೊಗವೀರ ಸಮಾಜದ ಎಲ್ಲ ಗ್ರಾಮಸಭೆಗಳು, ಸಾರ್ವಜನಿಕರ ಮುಕ್ತ ಸಹಕಾರದೊಂದಿಗೆ ಅಚ್ಚುಕಟ್ಟಾಗಿ ಹಾಗೂ ಶಿಸ್ತುಬದ್ಧವಾಗಿ ನಿರ್ವಹಿಸಲು ನಿರ್ಧರಿಸಿದೆ. ಶೋಭಾಯಾತ್ರೆಯನ್ನು ಶಿಸ್ತುಬದ್ಧವಾಗಿ ನಿರ್ವಹಿಸಲು ಪೊಲೀಸ್‌ ಇಲಾಖಾಧಿ ಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ಮೆರವಣಿಗೆಯ ಬಗ್ಗೆ ವಿಸ್ತ್ರತ ಚರ್ಚೆ ನಡೆಸಿ ಏಕ ನಾಯಕತ್ವದೊಂದಿಗೆ ಶೋಭಾಯಾತ್ರೆ ಮುಂದುವರಿಸಲು ನಿರ್ಧರಿಸಲಾಗಿದೆ. ಪೊಲೀಸರು ಶೋಭಾಯಾತ್ರೆಯ ಮಾರ್ಗವನ್ನು ಪರಿಶೀಲಿಸಿದ್ದು, ಅಗತ್ಯವಿದ್ದೆಡೆ ಹೆಚ್ಚು ಬಂದೋಬಸ್ತ್ ನಿರ್ವಹಿಸಲು ಸಿದ್ಧತೆ ನಡೆಸಿದ್ದಾರೆ.

ದಸರಾ ರೂವಾರಿ ನಾಡೋಜ ಡಾ.ಜಿ.ಶಂಕರ್ ಮತ್ತು ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ ಹಾಗೂ ಪದಾಧಿ ಕಾರಿಗಳ ಜತೆ ನಡೆದ ಸಭೆಯಲ್ಲಿ ಕಾಪು ಸಿಪಿಐ ಜಯಶ್ರೀ, ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ಕುಮಾರ್ ಎಂ.ಎಸ್., ಕಾಪು ಠಾಣಾಧಿಕಾರಿ ಅಬ್ದುಲ್ ಖಾದರ್ ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆ ನೀಡಿದ್ದಾರೆ.

ಡೋನ್‌ ಮೂಲಕ ಪುಷ್ಪಾರ್ಚನೆ:

ಶನಿವಾರ 3 ಗಂಟೆಗೆ ಶಾರದಾ ದೇವಿ ಮತ್ತು ನವದುರ್ಗೆಯರಿಗೆ ಮಹಾಪೂಜೆ, 4 ಗಂಟೆಗೆ ವಿಗ್ರಹಗಳನ್ನು ವಾಹನಕ್ಕೆ ಸ್ಥಳಾಂತರಿಸುವುದು, 5 ಗಂಟೆಗೆ ಶೋಭಾಯಾತ್ರೆಗೆ ವಿಧ್ಯುಕ್ತ ಚಾಲನೆ ನೀಡಲು ನಿರ್ಧರಿಸಿದ್ದು, ಸಮಯ ಪರಿಪಾಲನೆಗೆ ಮಹತ್ವ ನೀಡಲಾಗಿದೆ. ಪ್ರಥಮ ದಸರಾ ಮಹೋತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಲಾಗಿತ್ತು. ಈ ಬಾರಿ ವಿಶೇಷವಾಗಿ ಡೋನ್ ಮೂಲಕ ಶ್ರೀ ಶಾರದಾದೇವಿ ಮತ್ತು ನವದುರ್ಗೆಯರ ವಿಗ್ರಹಗಳಿಗೆ ಪುಷ್ಪಾರ್ಚನೆಗಾಗಿ ಸಿದ್ಧತೆ ನಡೆಸಲಾಗಿದೆ.

ಶೋಭಾಯಾತ್ರೆಯಲ್ಲಿ ಶ್ರೀ ಶಾರದಾದೇವಿ ಹಾಗೂ ನವದುರ್ಗೆಯರ 10 ಟ್ಯಾಬ್ಲೊಗಳೊಂದಿಗೆ ತುಳು ನಾಡಿನ ಸಂಸ್ಕೃತಿ ಬಿಂಬಿಸುವ, ಮೀನುಗಾರಿಕೆ ಯನ್ನು ಪ್ರತಿಬಿಂಬಿಸುವ ಹಾಗೂ ಮೊಗವೀರ ಸಮಾ ಜದ ಗುರುಗಳಾದ ಮಾಧವ ಮಂಗಳ ಗುರುಗಳು, ಸದಿಯ ಸಾಹುಕಾರರ ಸಹಿತ 22 ಟ್ಯಾಬ್ಲೊಗಳು, 5 ಕಲಾ ತಂಡ ಗಳು, ಭಜನಾ ತಂಡಗಳು, ಚೆಂಡೆ ವಾದ್ಯ, ಕೊಂಬು ಕಹಳೆ, ಡಿಜೆ ಸಂಗೀತ ಸಹಿತ ಸುಮಾರು ಲಕ್ಷಕ್ಕೂ ಅಧಿಕ ಭಕ್ತಾದಿಗಳ ಜತೆಗೆ ಶೋಭಾಯಾತ್ರೆ ಸಾಗಿ ಬರಲಿದೆ.

ಶೋಭಾಯಾತ್ರೆ ದಾರಿ: ಉಚ್ಚಿಲ ದೇವಳದಿಂದ ರಾಷ್ಟ್ರೀಯ ಹೆದ್ದಾರಿ 66ರ ಪೂರ್ವಬದಿಯಲ್ಲಿ ದಕ್ಷಿಣಕ್ಕೆ ಎರ್ಮಾಳು ಮಸೀದಿವರೆಗೆ ಸಾಗಿ ಅಲ್ಲಿ ಹೆದ್ದಾರಿಯ ಪಶ್ಚಿಮ ರಸ್ತೆಗೆ ಯೂ ಟರ್ನ್ ಪಡೆದು, ಉಚ್ಚಿಲ- ಮೂಳೂರು-ಕಾಪುವರೆಗೆ ಸಾಗಿಬರಲಿದೆ. ಕಾಪು ಕೊಪ್ಪಲಂಗಡಿ ಬಳಿ ಹೆದ್ದಾರಿಯ ಎಡಭಾಗದ ಬೀಚ್ ರಸ್ತೆಗೆ ತಿರುಗಿ ಅಲ್ಲಿಂದ ಕಾಪು ಬೀಚ್‌ವರೆಗೆ ಸಾಗಿಬ ರಲಿದೆ. ಟ್ಯಾಬ್ಲೊಗಳಿಗೆ ಕ್ರಮಸಂಖ್ಯೆ ನೀಡಲಾಗಿದ್ದು, ಶಿಸ್ತುಬದ್ಧ ಚಾಲನೆಗೆ ಸೂಚನೆ ನೀಡಲಾಗಿದೆ.

ಕಾಪು ಬೀಚ್‌ನಲ್ಲಿ ವ್ಯವಸ್ಥೆ: ಕಾಪು ಬೀಚ್ ಬಳಿ ಬೃಹತ್ ಗಂಗಾರತಿ, ಸಮುದ್ರದಾರತಿ ನಡೆಸಲು ನಿರ್ಧರಿಸಲಾ ಗಿದ್ದು, ಸುಮಂಗಲೆಯರಿಂದ ಮಹಾಮಂಗಳಾರತಿ, ಸುಡುಮದ್ದು ಪ್ರದರ್ಶನ, ಸಮುದ್ರ ಮಧ್ಯೆ 50ಕ್ಕೂ ಹೆಚ್ಚು ಬೋಟ್‌ಗಳಿಂದ ವಿದ್ಯುದ್ದೀಪಾಲಂಕಾರ, ಸುಡುಮದ್ದು ಪ್ರದರ್ಶನ, ಲೇಸರ್ ಲೈಟ್ ಪ್ರದರ್ಶನ ನಡೆಸ ಲಾಗುವುದು. ಕಾಪು ಬೀಚ್ ಬಳಿ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಕಾಪು ಬೀಚ್ ಬಳಿ ಸಮುದ್ರದಲ್ಲಿ ಶಾರದೆ ಸಹಿತ ನವದುರ್ಗೆಯರ ವಿಗ್ರಹಗಳನ್ನು ಸಾಂಪ್ರದಾಯಿಕವಾಗಿ ಜಲಸ್ತಂಭನಗೊಳಿಸಲಾಗುವುದು.

ವಿಶ್ವಪ್ರಸಿದ್ಧಿ ಪಡೆದಿರುವ ಉಡುಪಿ ಉಚ್ಚಿಲ ದಸರಾ ಶೋಭಾಯಾತ್ರೆಯನ್ನು ಅವಿಸ್ಮರ ಣೀಯಗೊಳಿಸಲು ಸಿದ್ದತೆ ನಡೆಸಲಾಗಿದೆ. ಈ ಬಾರಿ ಕಳೆದ ಬಾರಿಗಿಂತಲೂ ಅಧಿಕ ಭಕ್ತರು ಮಹಾಲಕ್ಷ್ಮೀ ಸನ್ನಿಧಿಯ ದಸರಾ ಮಹೋತ್ಸವದಲ್ಲಿ ಭಾಗಿಯಾ ಗುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಜಾತಿ ಮತ ಭೇದ ಮರೆತು ಸರ್ವ ಸಮಾಜದವರೂ ಮಹೋತ್ಸವದಲ್ಲಿ ಭಾಗಿಯಾಗಿದ್ದು ಮಹೋತ್ಸವಕ್ಕೆ ಮೆರುಗು ತಂದಿದೆ. ಮುಂದಿನ ಬಾರಿ ಇನ್ನಷ್ಟು ವಿಜೃಂಭಣೆಯಿಂದ ಮಹೋತ್ಸವ ನಡೆಸಲು ಸ್ಫೂರ್ತಿ ನೀಡಿದೆ ಎಂದು ಉಡುಪಿ ಉಚ್ಚಿಲ ದಸರಾ ರೂವಾರಿಯಾದ ನಾಡೋಜ ಡಾ.ಜಿ.ಶಂಕರ್ ಅವರು ತಿಳಿಸಿದ್ದಾರೆ

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

2 days ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

2 days ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

2 days ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

2 days ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

3 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

3 days ago