Featured

ಉಚ್ಚಿಲ ದಸರಾ -ನವದುರ್ಗೆ -ಶಾರದ ಮಾತೆಯ ಮೃಣ್ಮಯ ವಿಗ್ರಹಗಳ ವಿಸರ್ಜನೆ ಹೊತ್ತಿಗೆ ಬಿರುಸುಗೊಂಡ ಕಡಲು: vishwanews24

ಉಚ್ಚಿಲ ದಸರಾ -ನವದುರ್ಗೆ -ಶಾರದ ಮಾತೆಯ ಮೃಣ್ಮಯ ವಿಗ್ರಹಗಳ ವಿಸರ್ಜನೆ ಹೊತ್ತಿಗೆ ಬಿರುಸುಗೊಂಡ ಕಡಲು

ಚಿತ್ರ ಕೃಪೆ: ಸಚಿನ್ ಉಚ್ಚಿಲ

ಕಾಪು: ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ‌ ೯ ದಿನಗಳ ಕಾಲ ನಡೆದ ೩ನೇ ವರ್ಷ ಉಚ್ಚಿಲ ದಸರಾ ಮಹೋತ್ಸವ ೨೦೨೫ರ ಸಂದರ್ಭ ಪೂಜಿತ ಶ್ರೀ ಶಾರದಾಂಬೆ ಸಹಿತ ನವದುರ್ಗೆಯರ ಮೃಣ್ಮಯ ಮೂರ್ತಿಗಳ ವಿಸರ್ಜನೆ ಶನಿವಾರ ರಾತ್ರಿ ಕಾಪು ಬೀಚ್ ನಲ್ಲಿ ಅದ್ದೂರಿಯಾಗಿ ಸಂಪನ್ನಗೊಂಡಿತು.
ಉಚ್ಚಿ ದೇವಸ್ಥಾನದಿಂದ ಹೊರಟು ಎರ್ಮಾಳು ಮೂಲಕ ಹಾದು ಕಾಪು ಕೊಪ್ಪಲಂಗಡಿ ಮೂಲಕ ವೈಭವದ ಶೋಭಾಯಾತ್ರೆಯಲ್ಲಿ ಕಾಪು ಬೀಚ್ ತಲುಪಿದ ನವದುರ್ಗೆಯರನ್ನು ಸುಮಂಗಲಿಯರು ಪುಷ್ಪವೃಷಿ ಗೈಯ್ಯುವ ಮೂಲಕ ಸ್ವಾಗತಿಸಿದರು.

ಬಳಿಕ ಬೀಚ್ ನಲ್ಲಿ ವಿಶೇಷವಾಗಿ ನಿರ್ಮಿಸಿದ ಪೀಠಗಳಲ್ಲಿ‌ ಸ್ಥಾಪಿಸಿ ಗಂಗಾರತಿ , ಸಮುದ್ರಾರತಿ ಹಾಗು ವಿಸರ್ಜನಾ ಪೂಜೆ ನೆರವೇರಿಸಲಾಯಿತು. ಈ ವೇಳೆ ದೇವತಾ ಮೂರ್ತಿಗಳಿಗೆ ಡ್ರೋಣ್ ಮೂಲಕ ಪುಷ್ಪಾರ್ಚನೆ ನೆರವೇರಿಸಲಾಯಿತು. ಆಕರ್ಷಕ ಸುಡುಮದ್ದು ಪ್ರದರ್ಶನ, ಲೇಸರ್ ಲೈಟ್ ಪ್ರದರ್ಶನ ನಡೆಯಿತು.

ಬಿರುಸುಗೊಂಡ ಕಡಲು
ಶೋಭಾ ಯಾತ್ರೆ ಮುಗಿದು ವಿಗ್ರಹಗಳಿಗೆ ಕಾಪು ಬೀಚ್ ಬಳಿ ಗಂಗಾರತಿ ಬೆಳಗಿ ತದನಂತರ ಸಮುದ್ರಕ್ಕೆ ವಿಸರ್ಜನೆ ಮಾಡುವ ಸಮಯದಲ್ಲಿ ಕಡಲು ಬಿರುಸುಗೊಂಡಿತ್ತು.

ಸಹಸ್ರ ಸಹಸ್ರ ಸಂಖ್ಯೆಯ ಭಕ್ತರು ಸಾಕ್ಷಿ
ನವದುರ್ಗಸಹಿತವಾದ ಶಾರದಾ ಮಾತ್ರೆಯ ಮೃಣ್ಮಯ ವಿಗ್ರಹಗಳ ವಿಸರ್ಜನೆ ಸಮಯದಲ್ಲಿ ಕಾಪ್ ಬೀಚಿನ ಭಾಗ ಸಂಪೂರ್ಣ ಜನಸ್ತೋಮದಿಂದ ತುಂಬಿಹೋಗಿತ್ತು ಸಾವಿರ ಸಾವಿರ ಸುಮಂಗಲೆಯರು ನವದುರ್ಗ ಸಹಿತವಾಗಿ ಶಾರದಾ ಮಾತೆಗೆ ದೀಪವನ್ನು ಬೆಳಗಿ ಆರತಿ ಮಾಡಿದರು.
ಸುಮಾರು 11 ಗಂಟೆಯ ಸಮೀಪ ಕಾಪು ಬೀಚ್
ಭಾಗದಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ದಸರಾ ಸಂಪನ್ನತೆಯಲ್ಲಿ ಸಾಕ್ಷಿಯಾದರು.

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

1 day ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

2 days ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

2 days ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

2 days ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

3 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

3 days ago