ಕಾಪು : ರೂಪಾಯಿ 7 ಕೋಟಿ ಅನುದಾನದ ಉಚ್ಚಿಲ ರಾ.ಹೆ. ೬೬ರಿಂದ ಪಣಿಯೂರು – ಮುದರಂಗಡಿ ಸಂಪರ್ಕದ ಲೋಕೋಪಯೋಗಿ ರಸ್ತೆಯ ಪಣಿಯೂರು ಜಂಕ್ಷನ್‌ವರೆಗಿನ ೨.೬೦ ಕಿ.ಮೀ ದ್ವಿಪಥ ರಸ್ತೆಯ ಅಭಿವೃದ್ಧಿ ಕಾಮಗಾರಿಯು ಆಮೆಗತಿಯಿಂದ ಸಾಗುತ್ತಿದ್ದು, ಈ ಭಾಗದ ನಿವಾಸಿಗಳು, ವ್ಯಾಪಾರಸ್ಥರು ನಿತ್ಯ ಧೂಳಿನ ಕಾಟ ಅನುಭವಿಸುವಂತಾಗಿದ್ದು, ವಾಹನ ಸವಾರರು ಸಂಚಾರಕ್ಕೆ ಸಂಕಟ ಅನುಭವಿಸುವಂತಾಗಿದೆ
ನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುವ ವಾಹನ ನಿಬಿಡ ಮತ್ತು ಜನಸಂಚಾರ ನಿಬಿಡವಾದ ಪ್ರಮುಖ ರಸ್ತೆಯು ಇದಾಗಿದೆ. ಆದರೆ ಅಭಿವೃದ್ಧಿ ಕಾಮಗಾರಿಯು ಆರಂಭ ಶೂರನಂತೆ ೫ ಕಡೆಗಳಲ್ಲಿ ಮೋರಿ ನಿರ್ಮಾಣ ಕಾಮಗಾರಿಗೆ ಮಾತ್ರ ಸೀಮಿತಗೊಂಡಿದ್ದು, ಮತ್ತೆ ಅಭಿವೃದ್ಧಿ ಕಾಮಗಾರಿ ಮುಂದುವರೆಯುವುದು ಕಂಡು ಬರುತ್ತಿಲ್ಲ. ಮೋರಿ ನಿರ್ಮಾಣಗೊಂಡ ಬಳಿಕ ತೆರವುಗೊಳಿಸದ ಮಣ್ಣು ರಸ್ತೆಯಲ್ಲಿಯೇ ಉಳಿದಿದ್ದು, ವಾಹನ ಸಂಚಾರದ ಸಂದರ್ಭ ಸ್ಥಳೀಯರು ಧೂಳಿನ ಅಭಿಷೇಕವನ್ನು ಅನುಭವಿಸುವಂತಾಗಿದೆ. ಅದರೊಂದಿಗೆ ನಡೆದ ಕಾಮಗಾರಿಯ ಪ್ರದೇಶದಲ್ಲಿ ವಾಹನಗಳು ದೊಡ್ಡ ಶಬ್ದ ಮಾಡುತ್ತಾ ಹೊಂಡ ದಿಣ್ಣೆಗಳನ್ನು ಏರಿ ಸಾಗುವ ದುಸ್ಥಿತಿ ಅನುಭವಿಸುವಂತಾಗಿದೆ ಎಂದು ವಾಹನ ಚಾಲಕರು ತಮ್ಮ ಅಸಹನೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ.
ನಗರ, ಪಟ್ಟಣಗಳನ್ನು ಸಂಪರ್ಕಿಸುವ ಸಂಪರ್ಕ ರಸ್ತೆಗಳು ಸುಸಜ್ಜಿತಗೊಂಡಲ್ಲಿ ಗ್ರಾಮದ ಜೊತೆಗೆ ಗ್ರಾಮೀಣ ಭಾಗದ ಜನರ ಅಭಿವೃದ್ಧಿಯೂ ಸಾಧ್ಯವಾಗುತ್ತದೆ ಎಂಬ ನಿಟ್ಟಿನಲ್ಲಿ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ೨೦೨೦ರ ಅಕ್ಟೋಬರ್ ೧೮ರಂದು ದ್ವಿಪಥ ರಸ್ತೆ ನಿರ್ಮಾಣದ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಿದ್ದು, ರಸ್ತೆಯ ಇಕ್ಕೆಲಗಳಲ್ಲಿ ೫೦ ಮೀ. ವ್ಯಾಪ್ತಿಯಲ್ಲಿ ಚರಂಡಿ ಹಾಗೂ ರಸ್ತೆಯ ನಡುವೆ ವಿಭಾಜಕವನ್ನು ನಿರ್ಮಿಸಿ ಸುರಕ್ಷಿತ ಸಂಚಾರ ಮತ್ತು ಸುಂದರ ರಸ್ತೆಯ ನಿರ್ಮಾಣ ಕಾರ್ಯ ನಡೆಯಲಿದ್ದು ರಾಷ್ಟಿçÃಯ ಹೆದ್ದಾರಿ ಸಂಪರ್ಕದ ಈ ಪ್ರದೇಶವು ಸುಸಜ್ಜಿತಗೊಳ್ಳಲಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದರು.
ಆದರೆ ಇದೀಗ ರಸ್ತೆಯ ನಡುವೆಯೇ ಚರಂಡಿ ನಿರ್ಮಿಸಿದಂತಾಗಿದ್ದು, ಕಾಮಗಾರಿಯೂ ಮಂದಗತಿಯಿ0ದ ಸಾಗುತ್ತಿದ್ದು ಈ ಭಾಗದಲ್ಲಿ ಸಾರ್ವಜನಿಕರು, ಸ್ಥಳೀಯ ನಿವಾಸಿಗಳು, ವಾಹನ ಸವಾರರು, ವ್ಯಾಪಾರಸ್ಥರು ಅನುಭವಿಸುವ ಸಂಕಷ್ಟಕ್ಕೆ ಸಂಬ0ಧ ಪಟ್ಟ ಇಲಾಖಾಧಿಕಾರಿಗಳು ಎಚ್ಚೆತ್ತು ಕಾಮಗಾರಿಯು ವೇಗವನ್ನು ಪಡೆದು ಸುರಕ್ಷಿತ ಸಂಚಾರ ಸಾಧ್ಯಕ್ಕೆ ಜನತೆ ಆಗ್ರಹಿಸುತ್ತಿದ್ದಾರೆ.
ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ.. ನಾನು ಯಾವುದೇ ತಪ್ಪು ಮಾಡಿಲ್ಲ, ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ.. ನಾನು…
ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ ಉಡುಪಿ:…
ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ ನವದೆಹಲಿ: ಜುಲೈ 1 ರಿಂದ ಕಮರ್ಶಿಯಲ್ ಹಾಗೂ…
ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ ಬೆಂಗಳೂರು: ರಾಮ ಮಂದಿರ ದೇಣಿಗೆ…
ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ ಅಗ್ನಿ ಅವಘಡ : ಶಾಕ್‌ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ ಚಿಕ್ಕಬಳ್ಳಾಪುರ: ನಗರದ ಪಶುವೈದ್ಯ ಇಲಾಖೆ ಕಚೇರಿ ಸಮೀಪ…
ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ ಮಂಗಳೂರು : ಮಂಗಳೂರಿನ ಬಳಿ ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ…