Featured

ಉಡುಪಿ:ನಿರುದ್ಯೋಗಿ ಯುವ ಜನತೆಯಿಂದ ಬುಗ್ಗಿಲೆದ್ದ ಹೇೂರಾಟ ರಾಜಕೀಯ ಪಕ್ಷಗಳಿಗೆ ನೀಡಿದ ನೇರ ಎಚ್ಚರಿಕೆಯ ಕರೆಗಂಟೆ  : ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ – vishwanews24

ಉಡುಪಿ:ನಿರುದ್ಯೋಗಿ ಯುವ ಜನತೆಯಿಂದ ಬುಗ್ಗಿಲೆದ್ದ ಹೇೂರಾಟ ರಾಜಕೀಯ ಪಕ್ಷಗಳಿಗೆ ನೀಡಿದ ನೇರ ಎಚ್ಚರಿಕೆಯ ಕರೆಗಂಟೆ  : ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ

ಉಡುಪಿ:ಧಾರವಾಡದಲ್ಲಿ ನೊಂದು ಬೆಂದ ಸಾವಿರಾರು ನಿರುದ್ಯೋಗಿ ಯುವ ಜನತೆಯಿಂದ ಒಮ್ಮೆಲೆ ಬುಗ್ಗಿಲೆದ್ದ ಹೇೂರಾಟ ನಿಜಕ್ಕೂ ಇಂದಿನ ರಾಜಕೀಯ ಪಕ್ಷಗಳಿಗೆ ನೀಡಿದ ನೇರ ಎಚ್ಚರಿಕೆಯ ಕರೆಗಂಟೆ ಎಂದರೂ ತಪ್ಪಾಗಲಾರದು.

ಈ ಹೇೂರಾಟ ಬಹು ಸಂಖ್ಯೆಯನಿರುದ್ಯೋಗಿಗಳ ಒಡಲ ಧ್ವನಿಯಾಗಿ ಬಂದಿರ ಬಹುದು ಅನ್ನಿಸುತ್ತದೆ.ಆದರೂ ಬಿಜೆಪಿ ಇದನ್ನು ಸಂಘಟನೆ ಮಾಡುವುದರಲ್ಲಿ ಸ್ವಲ್ಪ ಮಟ್ಟಿನ ತಂತ್ರಗಾರಿಕೆವಹಿಸಿತ್ತು ಅನ್ನುವುದು ಮೇಲ್ನೋಟಕ್ಕೆ ಸ್ವಷ್ಟವಾಗಿ ಕಾಣುವಂತೆ ಇದೆ.ಆದರೆ ಈ ಹೇೂರಾಟದ ಗುಂಪಿನಲ್ಲಿ ಬಿಜೆಪಿಗರ ನಿರೀಕ್ಷೆಗೆ ವಿರುದ್ಧವಾಗಿ ಒಂದಿಷ್ಟು ನಿರುದ್ಯೋಗಿ ಯುವಕರು ಬಿಜೆಪಿಯನ್ನು ಕೂಡಾ ಈ ನಿರುದ್ಯೋಗ ಸೃಷ್ಟಿಗೆ ನೀವು ಕೂಡಾ ಕಾರಣಕರ್ತರು ಅನ್ನುವುದು ಅವರ ಪ್ರತಿಭಟನೆಯ ಧ್ವನಿಯಲ್ಲಿ ಕೇಳಿ ಬಂತು ಒಂದಂತು ನಿಜ ಈ ಹೇೂರಾಟ ಪಕ್ಷ ಮೀರಿ ಯುವ ವಿದ್ಯಾರ್ಥಿಗಳ ಒಮ್ಮತವಾದ ಹೇೂರಾಟವಾಗಿ ಮೊಳಗಬೇಕಾದ ಅನಿವಾರ್ಯತೆ ಇದೆ ಅನ್ನುವುದು ಅಷ್ಟೇ ಸ್ವಷ್ಟ.

ಇದನ್ನೂ ಓದಿ : 👇

ನಮ್ಮ ರಾಜ್ಯ ಒಂದರಲ್ಲಿಯೇ ಎರಡುವರೆ ಲಕ್ಷಕ್ಕೂ ಮೀರಿ ಸರಕಾರದ ವಿವಿಧ ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಬಿದ್ದಿದ್ದಾವೆ ಅನ್ನುವುದು ಇದು ಇಂದು ನಿನ್ನೆಯ ವ್ಯಥೆಯ ಕಥೆಯಲ್ಲ ಹತ್ತು ಇಪ್ಪತ್ತು ವರುಷಗಳ ದುರಂತಮಯ ಪರಿಸ್ಥಿತಿ ಅನ್ನುವುದನ್ನು ನಮ್ಮನ್ನು ಆಳಿದ ಬಿಜೆಪಿ ಜೆಡಿಎಸ್ ಕಾಂಗ್ರೆಸ್ ಪಕ್ಷದ ನಾಯಕರುಗಳು ಆತ್ಮ ವಿಮಶೆ೯ಮಾಡಿಕೊಳ್ಳ ಬೇಕಾದ ಸಂದರ್ಭವನ್ನು ನಮ್ಮ ವಿದ್ಯಾರ್ಥಿಗಳ ಒಡಲ ಧ್ವನಿಯ ಕ್ರಾಂತಿಯ ಪ್ರತಿಭಟನೆ ತೇೂರಿಸಿ ಕೊಟ್ಟಿದೆ ಅನ್ನುವುದನ್ನುಮರೆಯ ಬಾರದು.ಇಲ್ಲಿ ಯಾವುದೆ ಪಕ್ಷ ಯುವ ಜನತೆಯ ಬುಗ್ಗಿಲೆದ್ದ ಹೇೂರಾಟವನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವುದಾಗಲಿ. ಬೇರೆಯವರ ಮೇಲೆ ಈ ಜವಾಬ್ದಾರಿಯನ್ನು ಹೇೂರಿಸಿ ತಾವು ಸಂಭಾವಿತರಾಗುವುದನ್ನು ಪ್ರಜ್ಞಾವಂತ ನಿರುದ್ಯೋಗಿ ಯುವ ಜನತೆ ಖಂಡಿತವಾಗಿಯೂ ಸಹಿಸಿಕೊಳ್ಳಬಾರದು.ಒಂದು ವೇಳೆ ಇದು ಬರೇ ಒಂದು ಪಕ್ಷವನ್ನು ಗೆಲ್ಲಿಸುವ ಒಲೈಸುವ ಹೇೂರಾಟವೆಂದು ಬಿಂಬಿತವಾದರೆ ಈ ಹೇೂರಾಟಕ್ಕೆ ಯಾವುದೇ ನೈತಿಕತೆವಾದ ಬೆಂಬಲ ಜನಸಾಮಾನ್ಯರಿಂದ ಸಿಗುವುದಿಲ್ಲ ಅನ್ನುವುದು ಇಂದಿನ ಅದೇಷ್ಷೊ ವಿದ್ಯಾರ್ಥಿ ಸಂಘಟನೆಗಳ ಹೇೂರಾಟವೇ ಸಾಕ್ಷೀಕರಿಸಿದ್ದನ್ನು ನಾವು ಮರೆಯುವಂತಿಲ್ಲ.ರಾಜಕೀಯ ಪಕ್ಷಗಳು ಅಷ್ಟೇ ಈ ಹೇೂರಾಟಕ್ಕೆ ರಾಜಕೀಯ ಲೇಪನ ಹಚ್ಚುವ ಕೆಲಸಕ್ಕೆ ಕೈ ಹಾಕಬಾರದು ಸಾಧ್ಯವಾದಷ್ಟು ಮಟ್ಟಿಗೆ ವಿವಿಧ ಇಲಾಖೆಗಳಲ್ಲಿ ಹಲವು ವರುಷಗಳಿಂದ ಖಾಲಿ ಬಿದ್ದಿರುವ ಹುದ್ದೆಗಳನ್ನು ತುಂಬುವಲ್ಲಿ ಪ್ರಾಮಾಣಿಕವಾದ ಇಚ್ಛಾ ಶಕ್ತಿಯನ್ನು ತೇೂರಲೇಬೇಕು.ಬರೇ ಅಡಳಿತ ಪಕ್ಷಗಳು ಮಾತ್ರವಲ್ಲ ವಿಪಕ್ಷಗಳು ಕೂಡ ಸಮಾನವಾದ ಜವಾಬ್ದಾರಿಯನ್ನು ಹೊರಬೇಕಾಗಿದೆ.ನಿರುದ್ಯೋಗದ ಸಮಸ್ಯೆ ಗಳ ಕುರಿತಾಗಿ ಒಂದೇ ಒಂದು ಪ್ರಶ್ನೆ ಎತ್ತುವಲ್ಲಿ ಕೂಡಾ ವಿಫಲವಾಗಿದ್ದಾವೆ ಅನ್ನುವುದು ಅಷ್ಟೇ ಸತ್ಯ.

ಇದನ್ನೂ ಓದಿ : 👇

ರಾಜಕೀಯ ಸ್ಥರದ ವಿವಿಧ ಹುದ್ದೆಗಳನ್ನು ಒಂದು ದಿನವುಾ ಖಾಲಿ ಬಿಡದ ನಮ್ಮನ್ನು ಆಳಿದ ರಾಜಕೀಯ ಪಕ್ಷಗಳು ಸಾವ೯ಜನಿಕರ ಸೇವೆಗಳಿಗೆ ದಿನನಿತ್ಯವೂ ಅಗತ್ಯವಾಗಿ ಬೇಕಾಗುವ ಶಿಕ್ಷಕರು, ವೈದ್ಯರು, ಪೊಲೀಸ್, ಕಂದಾಯ ನೌಕರರು ಇವೆಲ್ಲ ಹುದ್ದೆಗಳು ವರ್ಷಾನುಗಟ್ಟಲೆ ಖಾಲಿ ಖಾಲಿ.ಆದರೆ ಈ ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ಮುಖ್ಯ ಮಂತ್ರಿ ಹುದ್ದೆಯನ್ನಾಗಲಿ ಸಚಿವ ಸ್ಥಾವನ್ನಾಗಲಿ ನಿಗಮಂಡಳಿಗಳ ಕುಚಿ೯ಯನ್ನು ಒಂದು ಕ್ಷಣವೂ ಖಾಲಿ ಬಿಡಲು ಸಿದ್ಧರಿಲ್ಲ ತಮಗೆ ಬೇಕಾಗುವ ಸಕಲ ಸವಲತ್ತುಗಳನ್ನು ಪಡೆದು ಕೊಳ್ಳುವುದರಲ್ಲಿ ಎಲ್ಲಾ ಪಕ್ಷದವರ ಹಣೆ ಬರಹ ಒಂದೆ.ಆದರೆ ಜನ ಸೇವೆಗೆ ತೀರ ಅಗತ್ಯವಿರುವ ಹುದ್ದೆಗಳು ಮಾತ್ರ ಒಂದಲ್ಲಾ ಒಂದು ಕಾರಣ ನೀಡಿ ಖಾಲಿ ಇಟ್ಟು ತಮ್ಮ ಅಧಿಕಾರವನ್ನು ಅನುಭವಿಸಿಕೊಳ್ಳುವುದರಲ್ಲಿ ನಿಷ್ಣಾತರು.ಇಂತಹ ರಾಜಕೀಯ ವ್ಯವಸ್ಥೆಗೆ ಸರಿಯಾಗಿ ಬುದ್ಧಿ ಕಲಿಸ ಬೇಕಾದರೆ ನಮ್ಮ ಯುವ ಜನತೆ ತಮ್ಮ ನಿಜವಾದ ಪ್ರತಿಭಟನೆಯನ್ನು ರಾಜಕೀಯ ಪಕ್ಷಗಳನ್ನು ಮೀರಿ ಸಂಘಟನಾ ಶಕ್ತಿಯಾಗಿ ಮೂಡಿಬರಬೇಕಾದ ಅನಿವಾರ್ಯತೆ ಇದೆ.

Vishwa News 24

Recent Posts

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ – vishwanews24

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ ಮಂಗಳೂರು: ಯಕ್ಷಗಾನ…

1 hour ago

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ – vishwanews24

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…

2 hours ago

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ – vishwanews24

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…

3 hours ago

ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್ – vishwanews24

ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ  :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ  ಗೌರವ ಡಾಕ್ಟರೇಟ್ ಮಂಗಳೂರು…

3 hours ago

ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ – vishwanews24

ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…

4 hours ago

ಕೇಂದ್ರ ಸರ್ಕಾರ ತೈಲ ಬೆಲೆ ಏರಿಸುವ ಮೂಲಕ ನಮ್ಮನ್ನ ಕೊಲೆ ಮಾಡ್ತಿದೆ :  ಡಿಕೆಶಿ – vishwanews24

ಕೇಂದ್ರ ಸರ್ಕಾರ ತೈಲ ಬೆಲೆ ಏರಿಸುವ ಮೂಲಕ ನಮ್ಮನ್ನ ಕೊಲೆ ಮಾಡ್ತಿದೆ :  ಡಿಕೆಶಿ ಬೆಂಗಳೂರು : ಕೇಂದ್ರ ಸರ್ಕಾರ…

4 hours ago