Featured

ಉಡುಪಿ:ಬ್ಯೂಟಿಪಾರ್ಲರ್ ನಡೆಸುವ ಮಹಿಳೆಯರ ಸ್ವಾವಲಂಬನೆಗೆ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಮನವಿ – Vishwanews24

ಉಡುಪಿ:ಬ್ಯೂಟಿಪಾರ್ಲರ್ ನಡೆಸುವ ಮಹಿಳೆಯರ ಸ್ವಾವಲಂಬನೆಗೆ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಮನವಿ – Vishwanews24

ಉಡುಪಿ: ಬ್ಯೂಟಿಪಾರ್ಲರ್ ನಡೆಸುವ ಮಹಿಳೆಯರ ಸ್ವಾವಲಂಬನೆಗೆ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರಿಗೆ ಕರ್ನಾಟಕ ಐಕ್ಯ ಪಾರ್ಲರ್ ಮತ್ತು ಕ್ಷೌರಿಕ ಅಸೋಸಿಯೇಶನ್ ಮನವಿ ಸಲ್ಲಿಸಿದೆ.

ಅಸೋಸಿಯೇಶನ್ ಅಧ್ಯಕ್ಷೆ ಪೌಲಿನ್ ಕ್ರಾಸ್ತಾ, ಉಪಾಧ್ಯಕ್ಷೆ ಲತಿಸಿಯಾ ದಾಂತಿಸ್, ಖಜಾಂಜಿ ಗೀತಾ ಭಂಡಾರಿ, ಪಿಆರ್‌ಒ ಮಂಜುಳಾ ಡಿ. ನಾಯಕ್ ಅವರಿದ್ದ ನಿಯೋಗ ಬುಧವಾರ ಬೆಂಗಳೂರಿನಲ್ಲಿ ಸಚಿವರನ್ನು ಭೇಟಿ ಮಾಡಿ ಮನವಿ ನೀಡಿದ್ದಾರೆ.

ಬ್ಯೂಟಿ ಪಾರ್ಲರ್ ನಡೆಸುತ್ತಿರುವ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಪಡೆಯಲು ಸರಕಾರದ ಸಹಾಯಧನ, ವಿಶೇಷ ಪ್ಯಾಕೇಜ್ ಸೌಲಭ್ಯಗಳು ಅತ್ಯವಶ್ಯಕವಾಗಿದೆ. ನಮ್ಮ ಸಂಘಟನೆಯಿಂದ ನಗರ, ಗ್ರಾಮೀಣ ಭಾಗದಲ್ಲಿರುವ ಬ್ಯೂಟಿಷಿಯನ್‌ಗಳಿಗೆ ಪ್ರೊಫೆಶನಲ್ ಮೇಕಪ್, ಹೇರ್ ಕಟ್ಟಿಂಗ್ ತರಗತಿ, ಸೆಮಿನಾರ್, ಬ್ಯೂಟಿಷಿಯನ್ ಕಾರ್ಯಾಗಾರ ನಡೆಸುತ್ತಿದ್ದೇವೆ. ಆದರೆ, ಬ್ಯೂಟಿ ಪಾರ್ಲರ್ ನಡೆಸುತ್ತಿರುವ ನಮಗೆ ಸರಕಾರದಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಪ್ರಸ್ತುತ ಬಜೆಟ್‌ನಲ್ಲಿ ಬ್ಯೂಟಿ ಪಾರ್ಲರ್‌ಗಳನ್ನು ನಡೆಸುತ್ತಿರುವ ಮಹಿಳೆಯರಿಗೆ ಅಗತ್ಯ ಸಹಾಯಧನ ಘೋಷಣೆ ಮಾಡುವ ಜೊತೆಗೆ ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯ ಅಧೀನದಲ್ಲಿರುವ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಬೆಂಗಳೂರು ಇದರ ವತಿಯಿಂದ ದೊರಕುವ ಸ್ವಾವಲಂಬನ ಯೋಜನೆ, ಇ.ಎಸ್.ಐ., ಪಿ.ಎಫ಼್. ಸೌಲಭ್ಯ ಒದಗಿಸುವಂತೆ ಮನವಿ ಮಾಡಿದ್ದಾರೆ.

ಪಾರ್ಲರ್ ನವೀಕರಣ, ಉಪಕರಣ ಖರೀದಿಗೆ ರಾಷ್ಟ್ರೀಕೃತ ಅಥವಾ ಸಹಕಾರಿ ಬ್ಯಾಂಕ್‌ಗಳಲ್ಲಿ ಶೂನ್ಯ ಅಥವಾ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸುವುದು, ವಸತಿ ಯೋಜನೆಗೆ ವಿಶೇಷ ಅನುದಾನ ಮೀಸಲಿಡಬೇಕು, ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ವಿಶೇಷ ವಿದ್ಯಾರ್ಥಿ ವೇತನ ಘೋಷಿಸಬೇಕು ಮತ್ತು ಸ್ವೋದ್ಯೋಗಕ್ಕಾಗಿ ಸಬ್ಸಿಡಿ ಆಧಾರದಲ್ಲಿ ಸಾಲ ಸೌಲಭ್ಯ ಒದಗಿಸಬೇಕು ಎಂಬ ಬೇಡಿಕೆ ಸಲ್ಲಿಸಿದ್ದಾರೆ.

ಇದನ್ನೂ ಓದಿ :

Vishwa News 24

Recent Posts

ಗ್ರಾಪಂ. ವ್ಯಾಪ್ತಿಯಲ್ಲಿ ಪಿಓಪಿ ಗಣೇಶ ಸ್ಥಾಪನೆಗಿಲ್ಲ ಅವಕಾಶ : ಸಚಿವ ಈಶ್ವರ್‌ ಖಂಡ್ರೆ ಸೂಚನೆ -vishwanews24

ಗ್ರಾಪಂ. ವ್ಯಾಪ್ತಿಯಲ್ಲಿ ಪಿಓಪಿ ಗಣೇಶ ಸ್ಥಾಪನೆಗಿಲ್ಲ ಅವಕಾಶ : ಸಚಿವ ಈಶ್ವರ್‌ ಖಂಡ್ರೆ ಸೂಚನೆ ಬೆಂಗಳೂರು: ಸೆ.14ರಂದು ರಾಜ್ಯಾದ್ಯಂತ ಆಚರಿಸಲಿರುವ…

18 hours ago

ಮೂಡುಬಿದಿರೆ : ನಾಳೆ (ಆ. 7 ಹಾಗೂ 8 ರಂದು ) ದೇಶದ ಬೃಹತ್ ಉಚಿತ ಉದ್ಯೋಗ ಮೇಳ ಆಳ್ವಾಸ್ ಪ್ರಗತಿ-2026ಕ್ಕೆ  ಚಾಲನೆ -vishwanews24

ಮೂಡುಬಿದಿರೆ : ನಾಳೆ (ಆ. 7 ಹಾಗೂ 8 ರಂದು ) ದೇಶದ ಬೃಹತ್ ಉಚಿತ ಉದ್ಯೋಗ ಮೇಳ ಆಳ್ವಾಸ್…

19 hours ago

ಬರ್ತ್‌ಡೇ, ಪ್ರಿವೆಡ್ಡಿಂಗ್‌ ಫೋಟೋಶೂಟ್‌ಗಳಿಗೆ ಬಾಡಿಗೆಗೆ ಸಿಗಲಿದೆ ಡಬಲ್‌ ಡೆಕ್ಕರ್‌ ಅಂಬಾರಿ ಬಸ್‌! -vishwanews24

ಬರ್ತ್‌ಡೇ, ಪ್ರಿವೆಡ್ಡಿಂಗ್‌ ಫೋಟೋಶೂಟ್‌ಗಳಿಗೆ ಬಾಡಿಗೆಗೆ ಸಿಗಲಿದೆ ಡಬಲ್‌ ಡೆಕ್ಕರ್‌ ಅಂಬಾರಿ ಬಸ್‌! ಬೆಂಗಳೂರು : ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ…

19 hours ago

ಮಲ್ಪೆ : ಕಡಲಿಗಿಳಿದ ಮೀನುಗಾರಿಕೆ ಬೋಟುಗಳು -vishwanews24

ಮಲ್ಪೆ : ಕಡಲಿಗಿಳಿದ ಮೀನುಗಾರಿಕೆ ಬೋಟುಗಳು ಮಲ್ಪೆ: ಸಮುದ್ರ ಸಹಜ ಸ್ಥಿತಿಗೆ ಬಂದ ಹಿನ್ನೆಲೆಯಲ್ಲಿ ಮಲ್ಪೆ ಬಂದರಿನಲ್ಲಿ ತಮಿಳುನಾಡಿನ ಮೀನುಗಾರ…

21 hours ago

ಚಿಕ್ಕಮಗಳೂರು : ಭಾರೀ ಗಾಳಿಗೆ ಬೈಕ್ ಮೇಲೆ ಬಿದ್ದ ಮರ; ಸವಾರ ಕೂದಲೆಳೆ ಅಂತರದಲ್ಲಿ ಪಾರು -vishwanews24

ಚಿಕ್ಕಮಗಳೂರು : ಭಾರೀ ಗಾಳಿಗೆ ಬೈಕ್ ಮೇಲೆ ಬಿದ್ದ ಮರ; ಸವಾರ ಕೂದಲೆಳೆ ಅಂತರದಲ್ಲಿ ಪಾರು ಪ್ರವಾಸಿಗರು ಎಚ್ಚರಿಕೆಯಿಂದ ಸಂಚರಿಸುವಂತೆ…

21 hours ago

ಅಮಾನವೀಯ ಘಟನೆ : ತಂದೆಯ ಅಂತಿಮ ದರ್ಶನಕ್ಕೆ ಬರಲಾಗದೆ ವಿಡಿಯೋ ಕಾಲ್ ಮೂಲಕ ಅಂತ್ಯಸಂಸ್ಕಾರ ವೀಕ್ಷಿಸಿದ ಪುತ್ರಿಯರು -vishwanews24

ಅಮಾನವೀಯ ಘಟನೆ : ತಂದೆಯ ಅಂತಿಮ ದರ್ಶನಕ್ಕೆ ಬರಲಾಗದೆ ವಿಡಿಯೋ ಕಾಲ್ ಮೂಲಕ ಅಂತ್ಯಸಂಸ್ಕಾರ ವೀಕ್ಷಿಸಿದ ಪುತ್ರಿಯರು ಸೋನಿಪತ್: ತಮ್ಮ…

21 hours ago