Featured

ಉಡುಪಿಯಲ್ಲಿ ಆರಂಭವಾದ ಹಿಜಾಬ್ ಪ್ರಕರಣ ಕೂಡ PFI ನಿಷೇಧಕ್ಕೆ ಒಂದು ಕಾರಣ : ಶಾಸಕ ರಘುಪತಿ ಭಟ್ – Vishwanews24

ಉಡುಪಿಯಲ್ಲಿ ಆರಂಭವಾದ ಹಿಜಾಬ್ ಪ್ರಕರಣ ಕೂಡ PFI ನಿಷೇಧಕ್ಕೆ ಒಂದು ಕಾರಣ : ಶಾಸಕ ರಘುಪತಿ ಭಟ್

ಉಡುಪಿ : ಪಿಎಫ್ ಐ ನಿಷೇಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಉಡುಪಿ ಶಾಸಕ ರಘುಪತಿ ಭಟ್, ” ಈ ಕೆಲಸ ಯಾವತ್ತೋ ಆಗಬೇಕಿತ್ತು. ಎಲ್ಲಾ ರಾಜ್ಯಗಳಲ್ಲಿ ದಾಖಲೆಗಳನ್ನು ಸಂಗ್ರಹಿಸಿದ ನಂತರ ಬ್ಯಾನ್ ಮಾಡಿದ್ದಾರೆ.

ಸಂಪೂರ್ಣ ಸಾಕ್ಷಾಧಾರಗಳೊಂದಿಗೆ ಬ್ಯಾನ್ ಮಾಡಿದ್ದಾರೆ. ವಿದೇಶಿ ಉಗ್ರಸಂಘಟನೆಗಳ ಜೊತೆ ಪಿಎಫ್ ಕೈಜೋಡಿಸಿದೆ. ಇದು ಸಾಬೀತಾದ ನಂತರ ಬ್ಯಾನ್ ಮಾಡಲಾಗಿದೆ. ಸಮಾಜ ಒಡೆಯುವ ಕೆಲಸದಲ್ಲಿ ಸಂಘಟನೆ ನಿರತವಾಗಿತ್ತು” ಎಂದು ಮಾದ್ಯಮಕ್ಕೆ ಪಿಎಫ್ಐ  ನಿಷೇದದ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಉಡುಪಿಯಲ್ಲಿ ಆರಂಭವಾದ ಹಿಜಾಬ್ ಪ್ರಕರಣ ಕೂಡ ಪಿ ಎಫ್ ನಿಷೇಧಕ್ಕೆ ಒಂದು ಕಾರಣ. ನಾವು ಕೂಡ ಸಾಕಷ್ಟು ಮಾಹಿತಿಗಳನ್ನ ಗುಪ್ತಚರ ಇಲಾಖೆಗೆ ನೀಡಿದ್ದೆವು. ಹಿಜಾಬ್ ಗಲಾಟೆಯ ಒಂದು ಭಾಗವಾಗಿದ್ದ ಪಿಎಫ್ ಐ ಪಾತ್ರ ಇರುವುದರ ಈಗ ಸಾಬೀತಾಗಿದೆ.

ಸಿಎಫ್ಐ ಗೆ ಸೇರ್ಪಡೆಕೊಂಡ ನಂತರ‌ ಟ್ವಿಟರ್ ಅಕೌಂಟ್ ಓಪನ್ ಮಾಡಿದ್ದರು. ವಿದ್ಯಾರ್ಥಿನಿಯರ ವರ್ತನೆ ಬದಲಾಗಿತ್ತು. ಅವರು ಟ್ವಿಟರ್ ಮೂಲಕ ದೇಶ ವಿರೋಧಿ ಹೇಳಿಕೆಗಳನ್ನು ಹಾಕುತ್ತಿದ್ದರು.ಸಿಎಫ್ಐ ನೇರವಾಗಿ ಪಾತ್ರ ವಹಿಸಿತ್ತು ಎಂದು ಆಗಲೇ ನಂಬಿದ್ದೆ. ಸಿಎಫ್ಐ ಇರದಿದ್ದರೆ ಹಿಜಾಬ್ ವಿವಾದ ಆಗುತ್ತಿರಲಿಲ್ಲ. ಗುಪ್ತ ಸ್ಥಳದಲ್ಲಿ ಉಡುಪಿಯ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಲಾಗಿತ್ತು.

ಭಾರತ್‌ ಜೋಡೋ ಐಕ್ಯತಾ ಯಾತ್ರೆ – ಗಾಂಧೀಜಿ ಬ್ರಿಟಿಷರನ್ನು ದೇಶ ಬಿಟ್ಟು ತೊಲಗಿಸಿದಂತೆ ರಾಹುಲ್‌ ಗಾಂಧಿಯಿಂದ ಬಿಜೆಪಿ ಅಧಿಕಾರದಿಂದ ತೊಲಗಲಿದೆ : ಮಯೂರ್‌ ಜಯಕುಮಾರ್‌ – Vishwanews24

ಧರ್ಮದ ಅಂದ ಶ್ರದ್ದೆ ಬೆಳೆಸಲು ತರಬೇತಿ ನೀಡಲಾಗಿತ್ತು. ಈ ಬಗ್ಗೆ ನಾನು ಈ ಮೊದಲೇ ಆರೋಪಿಸಿದ್ದೆ. ಈಗ ಎಲ್ಲವೂ ನಿಜವಾದಾಗಿದೆ ಎಂದು ಶಾಸಕ‌ ಭಟ್ ಹೇಳಿದ್ದಾರೆ.

ಇನ್ನು, ಪಿಎಫ್ಐ ವಿರುದ್ಧದ ಕಾರ್ಯಾಚರಣೆ ಹಿಂದೆ ಆರ್ ಎಸ್ ಎಸ್ ಇದೆ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ‘ಪಿಎಫ್ ಐ ಬಗ್ಗೆ ಯಾರೂ ಹೇಳಬೇಕಾಗಿಲ್ಲ, ಸಮಾಜಕ್ಕೆ ಗೊತ್ತು.ಆರ್ ಎಸ್ ಎಸ್ ಹೇಳುವುದು ಬೇಡ ನೈಜ ಮುಸ್ಲಿಮರ ಬಳಿ ಬೇಕಾದರೆ ಕೇಳಿ. ನೈಜ ಮುಸ್ಲಿಮರು ಪಿಎಫ್ ಐ ಬ್ಯಾನ್ ಮಾಡಬೇಕು ಎಂದು ಹೇಳುತ್ತಾರೆ.

ಹಿಜಾಬ್ ವಿಚಾರ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಚರ್ಚೆಯಾಯಿತು, ಪಾಕಿಸ್ತಾನದಲ್ಲಿ ಅದು ಸುದ್ದಿ ಆಯಿತು. ಸಿ ಎಫ್ ಐ ಮಾಡಿದ ಹೋರಾಟ ಪಾಕಿಸ್ತಾನ ವಾಹಿನಿಗಳಲ್ಲಿ ಹೇಗೆ ಬಂತು?ವಿದೇಶದಿಂದ ಈ ರೀತಿಯ ಕೃತ್ಯಗಳಿಗೆ ಹಣ ಬಂದಿದೆ. ಸರಕಾರ ಈಗ ಪಿ ಎಫ್ ಐ ನಿಷೇಧಿಸಿದೆ. ಅವರು ಇನ್ನೊಂದು ಹೆಸರು ಇಟ್ಟುಕೊಂಡು ಸಂಘಟನೆ ಮಾಡುತ್ತಾರೆ. ಪಿ ಎಫ್ ಐ ಸಂಘಟನೆಯಲ್ಲಿ ನಂಟು ಇರುವವರನ್ನು ಪ್ರಜ್ಞಾವಂತ ಮುಸ್ಲಿಂ ಸಮುದಾಯದಿಂದ ಹೊರಹಾಕಿ. ಅವರನ್ನು ಸಮಾಜಘಾತಕ ಶಕ್ತಿಗಳಂತೆ ಪರಿಗಣಿಸಿ . ನಾವು ಮಾಡಿದರೆ ಆರ್ ಎಸ್ ಎಸ್ ಮಾಡಿದ್ದು ಎಂದು ಹೇಳುತ್ತಾರೆ. ಸಮುದಾಯವೇ ಅವರನ್ನು ಬಹಿಷ್ಕರಿಸಲಿ.ಮುಸ್ಲಿಮರು ಎಚ್ಚೆತ್ತುಕೊಳ್ಳಲು ಇದು ಸಕಾಲಇಲ್ಲವಾದರೆ ಪಿಎಫ್ ಐ ಸಿ ಎಫ್ ಐ ಜೊತೆ ಎಲ್ಲ ಮುಸ್ಲಿಮರ ಹೆಸರು ಹಾಳಾಗುತ್ತೆ ಎಂದು ರಘುಪತಿ ಭಟ್ ಎಚ್ಚರಿಕೆ ನೀಡಿದ್ದಾರೆ.

ಗಲಭೆಗೆ ಕಾರಣವಾಗುತ್ತಿರುವುದು ಕೇವಲ ಈ ಒಂದು ಸಂಘಟನೆ ಮಾತ್ರವೇ…?

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

2 days ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

3 days ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

3 days ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

3 days ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

3 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

3 days ago