ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದೆ ಕಾಂಗ್ರೆಸ್ಸಿನಲ್ಲಿ ಇನ್ನೂ ಕೂಡ ಸರಿಯಾಗಿ ಮತಯಾಚನೆ ನಡೆಯಲಿಲ್ಲ ಕಾರ್ಯಕರ್ತರ ಕೊರತೆಯಿಂದಾಗಿ ಮತ್ತು ಭುಗಿಲದ್ದ ಭಿನ್ನಮತದಿಂದಾಗಿ ಕಾಂಗ್ರೆಸ್ ಇಭ್ಬಾಗಗೊಂಡಿತ್ತು ಇದಾದ ನಂತರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಉಡುಪಿ ಭೇಟಿಯ ನಂತರ ಒಂದಷ್ಟು ಮುಲಾಮ್ ಹಚ್ಚುವ ಪ್ರಯತ್ನ ಮಾಡಿದ್ದರು ಕೂಡ ಒಳಗೊಳಗೆ ಭಿನ್ನಮತ ಬುಸುಗುಡುತ್ತಿದೆ ಇದಕ್ಕೆಲ್ಲ ಮೂಲ ಕಾರಣ ಕಾಂಗ್ರೆಸ್ನ ಅಭ್ಯರ್ಥಿ ಆಯ್ಕೆ ವಿಚಾರ, ವರ್ಷದಲ್ಲಿ ಒಂದು ಬಾರಿಯೂ ಕಾಂಗ್ರೆಸ್ ಭವನದ ಕಡೆ ತಲೆಹಾಕಿ ಮಲಗದ ಒಬ್ಬ ಉದ್ಯಮಿಯನ್ನ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಡಿದ್ದೆ ಈ ಎಲ್ಲಾ ಗೊಂದಲಗಳಿಗೆ ಕಾರಣವಾಗಿರುವಂತದ್ದು.
ಕಾAಗ್ರೇಸ್ನ ಮೊದಲ ಸುತ್ತಿನ ಫೀಲ್ಡ್ ಮಕಾಡೆ ಮಲಗಿದ್ದು ಎರಡನೇ ಸುತ್ತಿನ ಮತಯಾಚನೆ ಕೂಡ ಜನರಿಗೆ ತೃಪ್ತಿದಾಯಕವಾಗಿಲ್ಲ ಉಡುಪಿಯಲ್ಲಿ ನೀಡಿರುವ ಗ್ಯಾರಂಟಿ ಕಾರ್ಡ್ ಬಗ್ಗೆ ಅನುಮಾನ ಜನ ವ್ಯಕ್ತಪಡಿಸಿದ್ದು ಉಡುಪಿಯಲ್ಲಿ ನೈಜ ಹಿಂದುತ್ವವಾದಿ ಗೆಲ್ಲಬೇಕು ಎಂಬುದು ಮತದಾರರ ಆಶಯವಾಗಿದೆ.
ಇನ್ನೂ ಹುಟ್ಟಿನಿಂದಲೆ ಹಿಂದೂ ಧರ್ಮದ ಪರವಾಗಿ ಸಂಘಟನೆಯ ಮುಖೇನ ದೇಶ ಸೇವೆಗಾಗಿ ಸವೆದಿರುವ ಗ್ರೌಂಡ್ ಮೂಲದ ಕಾರ್ಯಕರ್ತನಿಗೆ ಬಿಜೆಪಿ ಅವಕಾಶ ನೀಡಿದ್ದು ಗೆಲ್ಲಿಸುವ ಜವಬ್ಧಾರಿ ಕಾರ್ಯಕರ್ತರ ಮೇಲಿದೆ ಎಂದು ಮೊನ್ನೆ ನಡೆದ ಬಹಿರಂಗ ಸಭೆಯಲ್ಲಿ ಅಮಿತ್ ಶಾ ಕರೆ ನೀಡಿದ್ದರು.
ಚುನಾವಣೆಗೆ ಇನ್ನೇನೂ ಕೆಲವೆ ದಿನಗಳು ಬಾಕಿಯಿದ್ದರೂ ಸದ್ಯ ಗೆಲುವೆಂಬ ಚೆಂಡು ಬಿಜೆಪಿಯ ಮನೆಬಾಗಿಲ ಬಳಿ ನಿಂತುಕೊAಡಿದೆ ಕಾಂಗ್ರೇಸ್ ಎಷ್ಟು ಪ್ರಯತ್ನ ಪಟ್ಟರೂ ಕೂಡ ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೇಸ್ನ ಉದ್ಯಮಿಯ ಗೆಲುವು ಕಷ್ಟ ಸಾಧ್ಯವಾಗಿದೆಂಬು ರಾಜಕೀಯ ವಿಶ್ಲೇಷಕರ ವಾದ , ಗೊತ್ತಿಲ್ಲ ಯಾರನ್ನು ಆಯ್ಕೆ ಮಾಡಬೇಕೆಂಬ ಅಂತಿಮ ನಿರ್ಧಾರ ಮಾಡುವವರು ಮತದಾರರು ಮಾತ್ರ.
ಭಾರೀ ಮಳೆ ಮುನ್ಸೂಚನೆ : ನಾಳೆ(ಜುಲೈ 2)ದ.ಕ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆಯಾಗುವ…
ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿ ಹಣ ನೀಡದೆ ಪಾವತಿಸದೆ ಪರಾರಿ ; ಪ್ರಕರಣ ದಾಖಲು ಶಿರ್ವ : ಶಂಕರಪುರದ…
ಹಜ್ ಯಾತ್ರೆ - 2027 : ಅರ್ಜಿ ಸಲ್ಲಿಕೆಗೆ ಜುಲೈ 20 ಕೊನೆ ದಿನ ಬೆಂಗಳೂರು: ಮುಂದಿನ (2027ನೇ) ಸಾಲಿನಲ್ಲಿ…
ಉಡುಪಿ: ಭಾರೀ ಮಳೆಯಾಗುವ ಸಾಧ್ಯತೆ ; ಜುಲೈ 2 ಮತ್ತು 3ರಂದು ರೆಡ್ ಅಲರ್ಟ್ ಘೋಷಣೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ…
ಇಂದಿನಿಂದ ಜಾರಿಗೆ ಬರಲಿವೆ ಹೊಸ ರೂಲ್ಸ್: LPG, ಆಧಾರ್, ರೈಲ್ವೆ, ಬ್ಯಾಂಕ್ ಸೇವೆಗಳಲ್ಲಿ ಬದಲಾವಣೆ ನವದೆಹಲಿ: ಇಂದಿನಿಂದ ದೇಶಾದ್ಯಂತ ಹಲವು…
ಬ್ರಹ್ಮಾವರ :ಭೀಕರ ರಸ್ತೆ ಅಪಘಾತ: ಪ್ರಸಿದ್ಧ ಹುಲಿ ವೇಷ ಕಲಾವಿದ ಸಾವು ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ 66ರ ಬ್ರಹ್ಮಾವರದ ಹೇರೂರು…