ಉಡುಪಿ

ಉಡುಪಿಯಲ್ಲಿ ಪ್ರಮೋದ್ ಸಾಧನೆ ಶೂನ್ಯ : ರಘುಪತಿ ಭಟ್

ಉಡುಪಿ:ಮಾತೆತ್ತಿದರೆ ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ೨ ಸಾವಿರ ಕೋಟಿ ರೂ. ಅನುದಾನ ತಂದಿರುವ ಬಗ್ಗೆ ಮಾತನಾಡುವ ನನ್ನ ಎದುರಾಳಿ ಕಾಂಗ್ರೇಸ್ ಅಭ್ಯರ್ಥಿ, ಶಾಸಕ ಪ್ರಮೋದ್ ಮಧ್ವರಾಜ್, ಮೊದಲು ಆ ಕೋಟಿಗಟ್ಟಲೆ ರೂ. ಅನುದಾನ ಎಲ್ಲಿಗೆ ಹೋಗಿದೆ ಮತ್ತು ಅನುದಾನದಲ್ಲಿ ಏನೆಲ್ಲಾ ಸೇರಿದೆ ಎಂಬುದನ್ನು ಜನತೆಗೆ ಸ್ಪಷ್ಟಪಡಿಸಲಿ” ಎಂದು ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ರಘುಪತಿ ಭಟ್, ನಗರದ ಅಂಬಲಪಾಡಿ ಗ್ರಾ. ಪಂ. ವ್ಯಾಪ್ತಿಯ ಕಿದಿಯೂರು – ಪಡುಕೆರೆ ಚುನಾವಣಾ ಪ್ರಚಾರದಲ್ಲಿ ಸವಾಲು ಹಾಕಿದ್ದಾರೆ.

“ಕೇಂದ್ರ ಸರಕಾರದ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ಯೋಜನೆಗೆ ಭೂಸ್ವಾದೀನದ ಪರಿಹಾರ ಮೊತ್ತವೂ ಸೇರಿದಂತೆ ವಿವಿಧ ಯೋಜನೆಗಳ ಅನುದಾನವನ್ನು ಕ್ರೋಡೀಕರಿಸಿ ತನ್ನದಲ್ಲದ ಸಾಧನೆಯನ್ನು ತನ್ನದೇ ಎಂದು ಪ್ರಮೋದ್ ಬಿಂಬಿಸುತ್ತಿರುವುದು ಹಾಸ್ಯಸ್ಪದ. ಅವರ ಅವಧಿಯಲ್ಲಿ ಉಡುಪಿಯ ಕಲ್ಸಂಕ – ಅಂಬಾಗಿಲು ರಸ್ತೆಯ ೧ ಕಿ.ಮೀ. ಹೊರತುಪಡಿಸಿ ಯಾವುದೇ ಪ್ರಮುಖ ರಸ್ತೆಗಳ ಅಗಲೀಕರಣವಾಗಿಲ್ಲ ಆದರೆ ನನ್ನ ಶಾಸಕತ್ವದ ಅವಧಿಯಲ್ಲಿ ನಡೆದ ಆದಿಉಡುಪಿ – ಉಡುಪಿ, ಉಡುಪಿ – ಮಣಿಪಾಲ, ಕಲ್ಸಂಕ – ಅಂಬಾಗಿಲು ರಸ್ತೆ ಅಗಲೀಕರಣ ಹಾಗೂ ಕಾಂಕ್ರೀಟಿಕರಣ ಇಂದಿಗೂ ದಾಖಲೆಯ ಅಭಿವೃದ್ಧಿ ಎನಿಸಿದೆ ” ಎಂದು ಹೇಳಿದರು.

“ಕಳೆದ ಚುನಾವಣೆ ಸಂದರ್ಭದಲ್ಲಿ ೨೦೦ ಬೆಡ್ ಸರಕಾರಿ ಆಸ್ಪತ್ರೆ ನಿರ್ಮಾಣ ಮತ್ತು ಉಡುಪಿ ವಿಧಾನಸಭಾ ಕ್ಷೇತ್ರಾದ್ಯಾಂತ ದಿನದ ೨೪ ಗಂಟೆಯೂ ಕುಡಿಯುವ ನೀರು ನೀಡುತ್ತೇನೆ ಎಂದು ಪ್ರಣಾಳಿಕೆಯಲ್ಲಿ ಹೇಳಿ ಗೆದ್ದ ಪ್ರಮೋದ್, ನಗರದ ಹೃದಯ ಭಾಗದ ಅಲಂಕಾರ್ ಟಾಕೀಸ್ ಬಳಿ ಉಡುಪಿ ನಗರದ ಕೊಡುಗೈದಾನಿ ಹಾಜೀ ಅಬ್ದುಲ್ಲಾಸಾಹೇಬರು ದಾನವಾಗಿ ಸರಕಾರಕ್ಕೆ ನೀಡಿದ್ದ ಜಾಗದಲ್ಲಿದ್ದ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಸುಮಾರು ೫ ಎಕ್ರೆ ಜಾಗವನ್ನು ಅಬುಧಾಬಿ ಉದ್ಯಮಿ ಬಿ ಆರ್ ಶೆಟ್ಟಿಗೆ ಪ್ರಮೋದ್ ನೀಡಿದ್ದಾರೆ. ಇದರ ವಿರುದ್ಧ ಉಡುಪಿ ಜಿಲ್ಲಾ ಬಿಜೆಪಿ, ಮುಸ್ಲಿಂ ಸಮುದಾಯದವರು ಅದರಲ್ಲೂ ಎಸ್ಡಿಪಿಐ ಪಕ್ಷ ಹಾಗೂ ಉಡುಪಿಯ ನಾಗರಿಕರು ಸೇರಿಕೊಂಡು ಎರಡೇರಡು ಬಾರಿ ಪ್ರತಿಭಟನೆ ನಡೆಸಿದ್ದಾರೆ.ಅಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಸ್ ಡಿಪಿಐ ಪಕ್ಷವು ಈ ಬಾರಿಯ ಚುನಾವಣೆಯಲ್ಲಿ ಮಾತ್ರ ಉಡುಪಿ ಕ್ಷೇತ್ರದಿಂದ ಪ್ರಮೋದ್ ವಿರುದ್ಧ ಯಾವನೇ ಅಭ್ಯರ್ಥಿಯನ್ನು ಕಣಕ್ಕೀಳಿಸದಿರುವುದು ಹಲವಾರು ಸಂಶಯಗಳಿಗೆ ಕಾರಣವಾಗಿದೆ.” ಎಂದರು.

‘ಅದೇ ರೀತಿ ಹಿರಿಯಡ್ಕ ಸಮೀಪದ ಶಿರೂರು ಬಜೆ ಡ್ಯಾಂನಿಂದ ಹಾಗೂ ವಾರಾಹಿ ನದಿಯಿಂದ ಉಡುಪಿ ವಿಧಾನಸಭಾ ಕ್ಷೇತ್ರದ್ಯಾದಂತ ದಿನದ ೨೪ ಗಂಟೆಯೂ ಕುಡಿಯುವ ನೀರು ನೀಡುತ್ತೇನೆಂದು ಹೇಳಿದ ಪ್ರಮೋದ್ ಹಿರಿಯಡ್ಕದ ಬಜೆಯಿಂದ ೧ ಅಡಿ ನೀರು ಮೇಲ್ಕತ್ತಾಗಲಿ, ವಾರಾಹಿಯಿಂದ ನೀರು ತರುವುದಕ್ಕಾಗಲೀ ಸಾಧ್ಯವಾಗಲಿಲ್ಲ, ಒಟ್ಟಾರೆ ಪ್ರಮೋದ್ ಸುಳ್ಳು ಹೇಳಿಯೇ ಕ್ಷೇತ್ರದ ಮತದಾರರನ್ನು ಬಕ್ರಾ ಮಾಡುತ್ತಿದ್ದಾರೆ” ಎಂದು ರಘುಪತಿ ಭಟ್, ಪ್ರಮೋದ್ ವಿರುದ್ಧ ವಾಗ್ದಾಳಿ ನಡೆಸಿದರು.

“ಪ್ರಮೋದ್ ತನ್ನ ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸಿರುವ ಫಲವಾಗಿ ಇಂದು ಕಾರ್ಯಕರ್ತರನ್ನು ಹುಡುಕುವ ಸ್ಥಿತಿ ನಿರ್ಮಾಗೊಂಡಿದೆ. ಬಿಜೆಪಿ ಆಡಳಿತದ ಅವಧಿಯಲ್ಲಿ ಮುಕ್ತವಾಗಿ ದೊರಕುತ್ತಿದ್ದ ಮರಳು ಕ್ರಮೇಣ ಕ್ಷೇತ್ರದ ಜನತೆಯ ಕೈಗೆಟುಕದಂತಾದ ಸಂದರ್ಭದಲ್ಲಿ ಜನಪರ ಹೋರಾಟದ ಮೂಲಕ ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಿದ ತೃಪ್ತಿ ಇದೆ ” ಎಂದು ರಘುಪತಿ ಭಟ್ ಹೇಳಿದರು.

Vishwa News 24

Recent Posts

ಕುಂದಾಪುರ: ನಿಂತ ಲಾರಿಗಳಿಗೆ ಬಸ್ ಢಿಕ್ಕಿ: ಎರಡು ಸಾವು, ಹಲವರಿಗೆ ಗಾಯ – vishwanews24

ಕುಂದಾಪುರ: ನಿಂತ ಲಾರಿಗಳಿಗೆ ಬಸ್ ಢಿಕ್ಕಿ: ಎರಡು ಸಾವು, ಹಲವರಿಗೆ ಗಾಯ ಕುಂದಾಪುರ: ಮರವಂತೆ ಸಮುದ್ರ ಕಿನಾರೆಯ ಎದುರಿನ‌ ರಾಷ್ಟ್ರೀಯ…

16 hours ago

ರೇಣುಕಾಸ್ವಾಮಿ ಹತ್ಯೆ ಪ್ರಕರಣ : ಜಾಮೀನಿಗಾಗಿ ಸುಪ್ರೀಂ ಕೋರ್ಟ್‌ ಮೊರೆ ಹೋದ ದರ್ಶನ್‌ – vishwanews24

ರೇಣುಕಾಸ್ವಾಮಿ ಹತ್ಯೆ ಪ್ರಕರಣ : ಜಾಮೀನಿಗಾಗಿ ಸುಪ್ರೀಂ ಕೋರ್ಟ್‌ ಮೊರೆ ಹೋದ ದರ್ಶನ್‌ ನವದೆಹಲಿ : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು…

16 hours ago

ದ. ಕ, ಉಡುಪಿ ಸೇರಿದಂತೆ  5 ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆ ; 25 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ – vishwanews24

ದ. ಕ, ಉಡುಪಿ ಸೇರಿದಂತೆ  5 ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆ ; 25 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ …

16 hours ago

ಉಡುಪಿ ಶ್ರೀಕೃಷ್ಣ ದರ್ಶನಕ್ಕೆ ನೂತನ ಸರತಿ ಸಾಲು ಹಾಗೂ ಐಡಿ ಆಧಾರಿತ ಪ್ರವೇಶ ವ್ಯವಸ್ಥೆ ಉದ್ಘಾಟನೆ – vishwanews24

ಉಡುಪಿ ಶ್ರೀಕೃಷ್ಣ ದರ್ಶನಕ್ಕೆ ನೂತನ ಸರತಿ ಸಾಲು ಹಾಗೂ ಐಡಿ ಆಧಾರಿತ ಪ್ರವೇಶ ವ್ಯವಸ್ಥೆ ಉದ್ಘಾಟನೆ ಉಡುಪಿ : ಶ್ರೀ…

19 hours ago

ಮಂಗಳೂರು: ಸ್ಕೂಟರ್‌ ಸವಾರನಿಗೆ ಖಾರದ ಪುಡಿ ಎರಚಿ ದರೋಡೆ; ಪ್ರಕರಣ ದಾಖಲು – vishwanews24

ಮಂಗಳೂರು: ಸ್ಕೂಟರ್‌ ಸವಾರನಿಗೆ ಖಾರದ ಪುಡಿ ಎರಚಿ ದರೋಡೆ; ಪ್ರಕರಣ ದಾಖಲು ಮಂಗಳೂರು: ಗುರುಪುರ ಬಂಗ್ಲಗುಡ್ಡೆ ಬಳಿ ಸ್ಕೂಟರ್ ಸವಾರರೊಬ್ಬರಿಗೆ…

19 hours ago

ಪಿಯು ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣ: ಸಿಐಡಿ ತನಿಖೆಗೆ ಆದೇಶ – vishwanews24

ಪಿಯು ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣ: ಸಿಐಡಿ ತನಿಖೆಗೆ ಆದೇಶ 8 ತಿಂಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿಗಳು ಬೆಂಗಳೂರು: ನಗರದ ವಿದ್ಯಾರಣ್ಯಪುರ…

20 hours ago