ಉಡುಪಿ : ನಗರದಲ್ಲಿ ಶುಕ್ರವಾರ ಸಾಯಂಕಾಲ ಕೆಲ ನಿಮಿಷಗಳ ಕಾಲ ಬಿಳಿಬಣ್ಣದ ಬೂದಿ ಮಿಶ್ರಿತ ಮಳೆಯಾಗಿದೆ.
4 ಗಂಟೆ ಸುಮಾರಿಗೆ 5 ನಿಮಿಷಗಳ ಕಾಲ ಕಲ್ಸಂಕ, ಕೆಎಂ ಮಾರ್ಗ, ರಥಬೀದಿ, ಕಡಿಯಾಳಿ, ಮಿಶನ್ ಕಾಂಪೌಂಡ್ ಮೊದಲಾದ ಸ್ಥಳಗಳಲ್ಲಿ ಈ ರೀತಿ ಮಳೆಯಾಗಿದೆ. ಪಟಪಟ ಉದ್ದಿನ ಬೇಳೆಯಂತೆ ಬಿದ್ದ ಈ ಮಳೆಗೆ ಜನರು ಕಕ್ಕಾಬಿಕ್ಕಿಯಾದರು. ದ್ವಿಚಕ್ರ ವಾಹನ, ಕಾರುಗಳ ಮೇಲೆ ಬಿಳಿ ಬಣ್ಣದ ಮಳೆ ಬಿದ್ದು ಕಲೆ ಮೂಡಿಸಿತು. ಉಡುಪಿ ನಗರದಲ್ಲಿ ಮಾತ್ರ ಈ ರೀತಿಯ ಮಳೆಯಾಗಿರುವ ಮಾಹಿತಿ ಇದೆ. ಕೈಗಾರಿಕೆಗಳ ಹಾರುಬೂದಿ ಕಾರಣ ಇರಬಹುದೇ ಎಂಬ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಭೂಗರ್ಭ ಶಾಸ್ತ್ರಜ್ಞ ಡಾ.ಉದಯಶಂಕರ್, ಇದೇ ರೀತಿ ಕೆಂಪು ಬಣ್ಣದಲ್ಲಿ 10 ದಿನಗಳ ಹಿಂದೆ ಕೆಲವೆಡೆ ತುಂತುರು ಮಳೆ ಸುರಿದಿತ್ತು. ಇದಕ್ಕೆ ನಿಖರ ಕಾರಣ ತಿಳಿಯಲು ಸಾಧ್ಯವಿಲ್ಲ. ಮಳೆ ಆರಂಭವಾಗುವ ಸಮಯದಲ್ಲಿ ಆಮ್ಲೀಯ ಮಳೆ ಬೀಳುವುದು ಸಾಮಾನ್ಯ. ಈಗ ಇಷ್ಟೊಂದು ಮಳೆಯಾದ ಬಳಿಕ ಇಂಥ ಘಟನೆ ಅಚ್ಚರಿ ತಂದಿದೆ ಎಂದು ತಿಳಿಸಿದ್ದಾರೆ. ಉಡುಪಿಯಲ್ಲಿ ಹಾರುಬೂದಿ ಸೂಸುವ ಕೈಗಾರಿಕೆಗಳಾಗಲಿ, ದೊಡ್ಡ ಪ್ರಮಾಣದಲ್ಲಿ ಪರಿಸರಕ್ಕೆ ಹಾನಿ ಮಾಡುವಂತ ಕೈಗಾರಿಕೆ ಘಟಕಗಳು ಇಲ್ಲ; ಆದರೂ ಈ ರೀತಿ ಮಳೆಯಾಗಿರುವುದು ವಿಚಿತ್ರವಾಗಿದೆ. ಪ್ರಕೃತಿಯಲ್ಲಿ ಸಂಭವಿಸುವ ಇಂಥ ಕೆಲವು ವಿಚಾರಗಳಿಗೆ ನಮ್ಮಲ್ಲಿ ಉತ್ತರವಿಲ್ಲ ಎಂದಿದ್ದಾರೆ.
ಕುಂದಾಪುರ: ಹೋಂ ಸ್ಟೇ ಎನ್ ಒಸಿ ನೀಡಲು ಲಂಚ ಪಡೆದ ಆರೋಪ ; ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ ಕುಂದಾಪುರ…
ಉಡುಪಿ ಉಚ್ಚಿಲ ದಸರಾದಲ್ಲಿ ಮಹಿಳಾ ದಸರಾ ಉದ್ಘಾಟಿಸಿದ ಸಿಎಂ ಕರಾವಳಿ ಕರ್ನಾಟಕ ‘ಜಾಗತಿಕ ಟೂರಿಸಂ ಹಬ್’ ಆಗಿ ಅಭಿವೃದ್ಧಿ :…
ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ : ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಮಂಗಳೂರು: ಮಂಗಳೂರು…
ಉಡುಪಿ: ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ ಉಡುಪಿ: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ…
ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…
ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…