ಉಡುಪಿ: ಜಿಲ್ಲೆಯಲ್ಲಿ ಬೆಳಗ್ಗೆಯಿಂದ ಭಾರೀ ಮಳೆಯಾಗುತ್ತಿದ್ದು, ಕಡಿಯಾಳಿಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಮನೆಗೆ ಬೆಂಕಿ ತಗುಲಿದೆ. ಮನೆಯ ಭಾಗಶಃ ಹಾನಿಯಾಗಿದ್ದು ಸೊತ್ತುಗಳು ನಷ್ಟವಾಗಿದೆ.
ಮುಕೇಶ್ ರಾವ್ ಎಂಬವರ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದ್ದು ಬೆಂಕಿ ಹೊತ್ತಿಕೊಂಡಿದೆ. ಮನೆಯಲ್ಲಿದ್ದ ಟಿವಿ, ಫ್ಯಾನ್, ಕಪಾಟು, ಹಾರ್ಮೋನಿಯಂ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ದುರ್ಘಟನೆ ಸಂದರ್ಭದಲ್ಲಿ ಮನೆಯಲ್ಲಿ ಯಾರು ಇರಲಿಲ್ಲ. ಪಕ್ಕದ ಮನೆಯವರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಅಗ್ನಿಶಾಮಕ ದಳದ ಕ್ಷಿಪ್ರ ಕಾರ್ಯಾಚರಣೆಯಿಂದ ಭಾರೀ ಅವಘಡ ತಪ್ಪಿದೆ.
ಸುಮಾರು 1 ಲಕ್ಷ ರೂಪಾಯಿಯಷ್ಟು ಮೊತ್ತದ ವಸ್ತುಗಳು ನಷ್ಟವಾಗಿದೆ. ಆಟೋ ಡ್ರೈವರ್ ಆಗಿರುವ ಮುಕೇಶ್ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದು, ಪರಿಹಾರ ಮೊತ್ತ ಕೊಡುವಂತೆ ಒತ್ತಾಯಿಸಲಾಗಿದೆ.
ನಾನು 9 ಗಂಟೆಯಷ್ಟು ಹೊತ್ತಿಗೆ ಮನೆಗೆ ಬೀಗ ಹಾಕಿ ಹೋಗಿದ್ದೆ. 9.30ರ ಹೊತ್ತಿಗೆ ಫೋನ್ ಬಂತು. ಕೂಡಲೇ ಬಂದಿದ್ದೇನೆ. ಮನೆಗೆ ಬರುವಷ್ಟರಲ್ಲಿ ಬೆಂಕಿ ಆವರಿಸಿಕೊಂಡಿದ್ದು, 85 ರಿಂದ ಸುಮಾರು ಒಂದು ಲಕ್ಷದವರೆಗೆ ನಷ್ಟವಾಗಿದೆ ಅಂತ ಮುಕೇಶ್ ರಾವ್ ಹೇಳಿದ್ದಾರೆ.
ಸ್ಥಳೀಯ ಮಣೀಂದ್ರ ಮಾತನಾಡಿ, ಬಡತನದ ಕುಟುಂಬದಲ್ಲಿ ಮುಕೇಶ್ ಜೀವನ ನಡೆಸುತ್ತಿದ್ದಾರೆ. ಅಗ್ನಿಶಾಮಕ ದಳ ಕೂಡಲೇ ಬಂದಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಮಳೆ ಹಾನಿಯ ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತ ಪರಿಹಾರ ಕೊಡಬೇಕಾಗಿದೆ ಎಂದರು.
ಉಡುಪಿ: ಮೀನುಗಾರರಿಗೆ ಯೋಜನೆಗಳ ಮಾಹಿತಿ ತಲುಪಿಸಿ: ಶಾಸಕ ಯಶ್‌ಪಾಲ್ ಸುವರ್ಣ ಉಡುಪಿ: ಮೀನುಗಾರಿಕೆ ದೇಶದ ಆರ್ಥಿಕತೆಗೆ ಮಹತ್ತರ ಕೊಡುಗೆ ನೀಡುವ…
ನಾಳೆ ಮಧ್ಯಾಹ್ನ ಸಿಜೆಪಿಗೆ ಸರ್ಕಾರದ ನಿರ್ಧಾರ ತಿಳಿಸುತ್ತೇವೆ: ಜೆಪಿ ನಡ್ಡಾ ನವದೆಹಲಿ: ನಾಳೆ ಮಧ್ಯಾಹ್ನ ಮತ್ತೆ ಕಾಕ್ರೋಚ್ ಜನತಾ ಪಾರ್ಟಿ…
ಉಡುಪಿ ಅಕ್ಕಪಡೆ ತ್ವರಿತ ಕಾರ್ಯಾಚರಣೆ : ಕಾಣೆಯಾಗಿದ್ದ 8ನೇ ತರಗತಿ ವಿದ್ಯಾರ್ಥಿ ಸುರಕ್ಷಿತವಾಗಿ ಪತ್ತೆ ಉಡುಪಿ :ಜಿಲ್ಲೆಯಲ್ಲಿ ಕಾಣೆಯಾಗಿದ್ದ ಎಂಟನೇ…
ಧರ್ಮೇಂದ್ರ ಪ್ರಧಾನ್ ವಜಾಗೊಳಿಸುವವರೆಗೆ ವಿಪಕ್ಷಗಳು ಸಂಸತ್ತಿನ ಯಾವುದೇ ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ : ರಾಹುಲ್ ಗಾಂಧಿ ನವದೆಹಲಿ: ಧರ್ಮೇಂದ್ರ ಪ್ರಧಾನ್ ಅವರನ್ನ…
ಪ್ರತಿಷ್ಠಿತ ಕಂಪನಿಗಳ ಹೆಸರಲ್ಲಿ ನಕಲಿ ಕೀಟನಾಶಕ ತಯಾರಿಸಿ ರೈತರಿಗೆ ಮಾರಾಟ : ಕೃಷಿ ಅಧಿಕಾರಿಗಳ ದಾಳಿ ಚಿಕ್ಕಬಳ್ಳಾಪುರ: ಪ್ರತಿಷ್ಠಿತ ಕಂಪನಿಗಳ…
ನಂದಿನಿ ತುಪ್ಪ, ಬೆಣ್ಣೆ ಬೆಲೆ ಏರಿಕೆ: ಇಂದಿನಿಂದಲೇ ಪರಿಷ್ಕೃತ ದರ ಜಾರಿ ಬೆಂಗಳೂರು : ರಾಜ್ಯದಲ್ಲಿ ಕರ್ನಾಟಕ ರಾಜ್ಯ ಹಾಲು…