Featured

ಉಡುಪಿಯಲ್ಲಿ ಭೀಕರ ಅಪಘಾತ ; ಡಿವೈಡರ್‌ ಹಾರಿ ಗುದ್ದಿದ ಕಾರು : ಟೆಂಪೋ ಚಾಲಕ ಬಲಿ ! ; ಐವರು ಗಂಭೀರ

ಉಡುಪಿ : ಇಲ್ಲಿನ ಸಂತೆಕಟ್ಟೆಯ ಸೇತುವೆ ಬಳಿ  ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗ್ಗೆ ಭೀಕರ ಅಪಘಾತ ನಡೆದಿದ್ದು  ಓರ್ವ ಸಾವನ್ನಪ್ಪಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬ್ರಹ್ಮಾವರ ಕಡೆಯಿಂದ ಉಡುಪಿಗೆ ತೆರಳುತ್ತಿದ್ದ ಕಾರು ಡಿವೈಡರ್‌ ಹಾರಿ ಉಡುಪಿಯಿಂದ ಬ್ರಹ್ಮಾವರ ಕಡೆಗೆ ತೆರಳುತ್ತಿದ್ದ ಟೆಂಪೋಗೆ ಮುಖಾಮುಖೀ ಢಿಕ್ಕಿಯಾಗಿದೆ. ಪರಿಣಾಮವಾಗಿ ಟೆಂಪೋ ಚಾಲಕ ಉಡುಪಿಯ ನಿಟ್ಟೂರಿನ ಅಶೋಕ್‌ ಎನ್ನುವವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಟೆಂಪೋದಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಾರಿನಲ್ಲಿದ್ದ ಚಾಲಕ(ವೈದ್ಯ ಎನ್ನಲಾಗಿದೆ) ಮತ್ತು ಇನ್ನೋರ್ವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ರಸ್ತೆಯಲ್ಲಿದ್ದ ಹೊಂಡ ತಪ್ಪಿಸಲು ಹೋಗಿ ಕಾರು ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ ಎಂದು ಪ್ರತ್ಯಕ್ಷ ದರ್ಶಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಉಡುಪಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Vishwa News 24

Recent Posts

ಪ್ರಧಾನಿಯಾಗಿ ಮೋದಿ ಸರ್ಕಾರಕ್ಕೆ 12 ವರ್ಷ: ನೆಹರೂ ದಾಖಲೆ ಮುರಿದ ನಮೋ – vishwanews24

ಪ್ರಧಾನಿಯಾಗಿ ಮೋದಿ ಸರ್ಕಾರಕ್ಕೆ 12 ವರ್ಷ: ನೆಹರೂ ದಾಖಲೆ ಮುರಿದ ನಮೋ ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ದೀರ್ಘಕಾಲ ನಿರಂತರ ಅಧಿಕಾರ…

40 minutes ago

ಉಡುಪಿ : ಜೂ.12 ರಂದು ನೇರ ಸಂದರ್ಶನ – vishwanews24

ಉಡುಪಿ : ಜೂ.12 ರಂದು ನೇರ ಸಂದರ್ಶನ ಉಡುಪಿ : ನಗರದ ಮಣಿಪಾಲದ ಮನೋಹರ್ ಭವನ್ ಹೋಟೆಲ್ ಮುಂಭಾಗದ ಮಣಿಪಾಲ್…

47 minutes ago

ಜೂ.12ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ  ತಮಿಳುನಾಡು ಸಿಎಂ ಭೇಟಿ – vishwanews24

ಜೂ.12ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ  ತಮಿಳುನಾಡು ಸಿಎಂ ವಿಜಯ್ ಭೇಟಿ ಉಡುಪಿ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಜೂನ್…

53 minutes ago

ಉಡುಪಿ : ಜೂ.11ರಂದು ಖಾಸಗಿ ಬಸ್ ದರ ಏರಿಕೆ ಖಂಡಿಸಿ ಸಿಪಿಎಂ ಪ್ರತಿಭಟನೆ – vishwanews24

ಉಡುಪಿ : ಜೂ.11ರಂದು ಖಾಸಗಿ ಬಸ್ ದರ ಏರಿಕೆ ಖಂಡಿಸಿ ಸಿಪಿಎಂ ಪ್ರತಿಭಟನೆ ಉಡುಪಿ : ರಾಜ್ಯದ ಖಾಸಗಿ ಬಸ್…

1 hour ago

ಮಲ್ಪೆ ಬಂದರು ಪ್ರವೇಶ ದ್ವಾರ ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭ :ಯಶ್ಪಾಲ್ ಸುವರ್ಣ – vishwanews24

ಮಲ್ಪೆ ಬಂದರು ಪ್ರವೇಶ ದ್ವಾರ ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭ :ಯಶ್ಪಾಲ್ ಸುವರ್ಣ ಮಳೆಗಾಲದ ಹಿನ್ನೆಲೆಯಲ್ಲಿ ಮಲ್ಪೆ ಮೀನುಗಾರಿಕಾ…

2 hours ago

ಗುರುತಿನ ಚೀಟಿ ಇಲ್ಲದೆ ಪಬ್, ಬಾರ್ ಮತ್ತು ಕ್ಲಬ್‌ಗಳಿಗೆ ಪ್ರವೇಶವಿಲ್ಲ : ಸಚಿವ ಪ್ರಿಯಾಂಕ್ ಖರ್ಗೆ – vishwanews24

ಗುರುತಿನ ಚೀಟಿ ಇಲ್ಲದೆ ಪಬ್, ಬಾರ್ ಮತ್ತು ಕ್ಲಬ್‌ಗಳಿಗೆ ಪ್ರವೇಶವಿಲ್ಲ : ಸಚಿವ ಪ್ರಿಯಾಂಕ್ ಖರ್ಗೆ ಬೆಂಗಳೂರು : ಅಪ್ರಾಪ್ತ…

2 hours ago