ಉಡುಪಿ: ಉಡುಪಿಯಲ್ಲಿ ವಿಟ್ಲಪಿಂಡಿ ಉತ್ಸವದ ಸಂಭ್ರಮ ನೆಲೆಸಿದೆ. ದೂರದೂರು ಮುಂಬೈಯಿಂದ ಆಗಮಿಸಿದ ಆಲಾರೆ ಗೋವಿಂದ ತಂಡವು ನಗರದ ವಿವಿಧೆಡೆ ಏಳು ಅಡಿಯ ಪಿರಮಿಡ್ ರಚಿಸಿ ಮಡಿಕೆ ಒಡೆದು ಸಂಭ್ರಮಿಸಿತು.
ಮಧುಸೂದನ ಪೂಜಾರಿ ಕೆಮ್ಮುಣ್ಣು ಇವರ ಸಂಯೋಜನೆಯಲ್ಲಿ ಪೂರ್ವ ಮುಂಬೈಯ ಸಾಂತಾಕ್ರೂಸ್ ಬಾಲಮಿತ್ರ ವ್ಯಾಯಾಮ ಶಾಲೆಯ ತಂಡ ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಆಲಾರೆ ಗೋವಿಂದ ಪ್ರದರ್ಶನ ನಡೆಸಿತು. ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಆಲಾರೆ ಗೋವಿಂದ ತಂಡ ಪಿರಮಿಡ್ ರಚಿಸಿ ಮಡಿಕೆ ಒಡೆಯುವ ಪ್ರದರ್ಶನ ನೀಡಿತು.
ತಂಡವು ಬರೋಬ್ಬರಿ ಏಳು ಅಂತಸ್ತಿನ ಮಾನವ ಪಿರಮಿಡ್ ರಚಿಸಿತು. ಪುಟಾಣಿ ಮನಸ್ವಿ ಸಂತೋಷ್ ಪಿರಮಿಡ್‌ನ ತುತ್ತತುದಿಗೇರಿ ಮೊಸರು ಗಡಿಗೆಯನ್ನು ಒಡೆದು ಎಲ್ಲರನ್ನು ರಂಜಿಸಿದ್ದಾಳೆ. ಈ ತಂಡ ವಿಟ್ಲ ಪಿಂಡಿಯ ಪ್ರಯುಕ್ತ ಉಡುಪಿ ಹತ್ತುಕಡೆಗಳಲ್ಲಿ “ಆಲಾರೆ ಗೋವಿಂದ”ವನ್ನು ಪ್ರದರ್ಶಿಸಲಿದೆ.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…