Featured

ಉಡುಪಿಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ – Vishwanews24

ಉಡುಪಿಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ..

ಸಚಿವ ಎಸ್.ಅಂಗಾರರಿಂದ ಧ್ವಜರೋಹಣ..

ಮೀನುಗಾರರಿಗೆ ವಿಶೇಷ ಯೋಜನೆ..

ಕರಾವಳಿಯ ಮೀನುಗಾರರಿಗೆ ನೂರು ಆಳ ಸಮುದ್ರ ದೋಣಿಗಳನ್ನು ನೀಡಲು 120 ಕೋಟಿ. ರೂ ಗಳ ಕ್ರಿಯಾ ಯೋಜನೆಗೆ ಕೇಂದ್ರ ಸರಕಾರದ ಅನುಮೋದನೆ..

ಉಡುಪಿ : ದೇಶದಲ್ಲಿ ಯಾವುದೇ ದುಷ್ಟ ಶಕ್ತಿಗಳು ತಲೆ ಎತ್ತದಂತೆ ಮಾಡುವುದರ ಜೊತೆಗೆ ಸರ್ವ ಧರ್ಮಗಳನ್ನು ಗೌರವಿಸಿ ಯಾವುದೇ ಕೋಮು ಗಲಭೆಗಳಿಗೆ ಅವಕಾಶ ಕೊಡದೇ ಸರ್ವ ಧರ್ಮ ಸಮನ್ವಯ ಭಾವ ಬೆಳೆಸಿಕೊಂಡು ಹೋಗಲು ನಾವೆಲ್ಲರೂ ಇಂದು ಪ್ರತಿಜ್ಞೆ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಕರೆ ನೀಡಿದರು. ಅವರು ಗುರುವಾರ ನಗರದ ಅಜ್ಜರಕಾಡುವಿನ ಮಹಾತ್ಮಾ ಗಾಂಧಿ ಜಿಲ್ಲಾ ಮೈದಾನದಲ್ಲಿ ಗಣರಾಜ್ಯೋತ್ಸದ ಧ್ವಜರೋಹಣ ನೆರವೇರಿಸಿ ಮಾತನಾಡಿದರು.

ಮೀನುಗಾರರಿಗೆ ವಿಶೇಷ ಯೋಜನೆ
ಮೀನುಗಾರಿಕಾ ಅಭಿವೃದ್ಧಿಗೆ ರಾಜ್ಯದ ಆಯವ್ಯಯದಲ್ಲಿ ಪ್ರಸಕ್ತ ಸಾಲಿಗೆ 279.91 ಕೋ.ರೂ ಗಳನ್ನು ನಿಗದಿಪಡಿಸಲಾಗಿದೆ. ಕೇಂದ್ರ ಸರಕಾರದ ಪ್ರಧಾನಮಂತ್ರಿ ಮತ್ಸ ಸಂಪದ ಮತ್ತು ರಾಜ್ಯ ಸರಕಾರದ ಮತ್ಸಸಿರಿ ಯೋಜನೆಗಳನ್ನು ಜೊತೆಗೂಡಿಸಿ ಕರಾವಳಿಯ ಮೀನುಗಾರರಿಗೆ ನೂರು ಆಳ ಸಮುದ್ರ ದೋಣಿಗಳನ್ನು ನೀಡಲು 120 ಕೋಟಿ. ರೂ ಗಳ ಕ್ರಿಯಾ ಯೋಜನೆಗೆ ಕೇಂದ್ರ ಸರಕಾರದ ಅನುಮೋದನೆ ದೊರೆತಿದೆ ಎಂದರು.

ಅಲ್ಲದೇ 78,983 ಮೀನುಗಾರರಿಗೆ ಸಾಮೂಹಿಕ ಅಪಘಾತ ವಿಮೆ, 3,329 ದೋಣಿಗಳಿಗೆ ತೆರಿಗೆ ರಹಿತ ಡಿಸೇಲ್, 5,000 ಮೀನುಗಾರರಿಗೆ ಮತ್ಸ್ರಾಶಯ ಯೋಜನೆ ಅಡಿ ಮನೆ, 5650 ಗ್ರಾ.ಪಂ ಕೆರೆಗಳಲ್ಲಿ ಮೀನು ಕೃಷಿ ನಡೆಸಲು ಯೋಜನೆ ರೂಪಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೂರ್ಮಾ ರಾವ್, ಜಿ.ಪಂ ಸಿಇಓ ಪ್ರಸನ್ನ, ತರಬೇತಿ ನಿರತ ಐ.ಎ.ಎಸ್ ಅಧಿಕಾರಿ ಯತೀಶ್, ಶಾಸಕ ರಘುಪತಿ ಭಟ್, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ. ನ ಅಧ್ಯಕ್ಷ ಕಿದಿಯೂರು ಉದಯ್ ಕುಮಾರ್ ಶೆಟ್ಟಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಕಲ್ಮಾಡಿ ಉಪಸ್ಥಿತರಿದ್ದರು.

ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಅಗ್ನಿಶಾಮಕ ದಳ, ಗೃಹರಕ್ಷಕ ದಳ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ, ಕಾಲೇಜಿನ ಎಸ್.ಸಿ.ಸಿ ತಂಡಗಳಿಂದ ಪಥಸಂಚಲನ ನಡೆಯಿತು.

ರಾಜ್ಯ ಮಟ್ಟದ ಉದಯೋನ್ಮುಖ ಕೃಷಿ ಪಂಡಿತ ಪ್ರಶಸ್ತಿಯನ್ನು ಸತೀಶ್ ಹೆಗ್ಡೆ ಮತ್ತು ನಾರಾಯಣ ನಾಯ್ಕ್, ಜಿಲ್ಲಾ ಮಟ್ಟದ ಆತ್ಮಯೋಜನೆಯಡಿ ಶ್ರೇಷ್ಠ ಕೃಷಿ ಪ್ರಶಸ್ತಿಯನ್ನು ಸದಾನಂದ ನಾಯ್ಕ್, ಚಂದ್ರಕಾಂತ್ ರಾವ್, ಚೈತ್ರ.ವಿ.ಆಡಪ, ಲಕ್ಷ್ಮೀ, ಮ್ಯಾಕ್ಸಿಂಡಿಸೋಜಾ, ಸುಪ್ರೀಯಾ, ದಿನೇಶ್ ಪೂಜಾರಿ, ಕಸ್ತೂರಿ ಶೆಡ್ತಿ, ಶಶಿಧರ ನಾಯಕ್, ರಮೇಶ್ ನಾಯಕ್, ತಾಲೂಕು ಮಟ್ಟದಲ್ಲಿ ನಾಗರಾಜ್, ಲವ ಶೆಟ್ಟಿ, ಭಾರತಿ, ಭಾಸ್ಕರ್ ಪೂಜಾರಿ, ಅರುಣ್ ಕುಮಾರ್, ಶ್ರೇಷ್ಠ ಆಸಕ್ತ ಗುಂಪು ಜಿಲ್ಲಾ ಮಟ್ಟದಲ್ಲಿ ವರಂಗ ತೆಂಗು ಉತ್ಪಾದಕರ ಸೌಹಾರ್ದ ಸೊಸೈಟಿ, ಕಾರ್ಕಳ, ಕೃಷಿ ಪ್ರಶಸ್ತಿ ಯೋಜನೆ ಜಿಲ್ಲಾ ಮಟ್ಟದಲ್ಲಿ ಸಣ್ಣಮ್ಮ, ರಮೇಶ್ ನಾಯ್ಕ್, ಪುಷ್ಪಲತಾ ಶೆಟ್ಟಿ, ತಾಲೂಕು ಮಟ್ಟದಲ್ಲಿ ಭಾಸ್ಕರ್ ಶೆಟ್ಟಿ, ರಾಘವೇಂದ್ರ ನಾಯಕ್, ರಮೇಶ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಸ್ತುತ ಮಣಿಪಾಲ ವೃತ್ತನಿರೀಕ್ಷಕ ದೇವರಾಜ್ ತಮ್ಮ ಸೇವಾವಧಿಯಲ್ಲಿ ತಾಂತ್ರಿಕವಾಗಿ ತನಿಖೆ ನಡೆಸಿ ಪ್ರಕರಣ ಭೇದಿಸಿರುವುದಕ್ಕೆ ಗೃಹಸಚಿವರ ಪ್ರಶಸ್ತಿ, ಜಿಲ್ಲಾ ಪೋಲಿಸ್ ಕಚೇರಿಯ ಅಪರಾಧ ವಿಭಾಗದಲ್ಲಿ ವಿಶೇಷ ಕರ್ತವ್ಯ ತೋರಿದ ಪ್ರಕಾಶ್ ( ರಾಷ್ಟ್ರಪತಿ ಪದಕ), ಶಿವಾನಂದ ( ಮುಖ್ಯಮಂತ್ರಿ ಪದಕ) ಪಡೆದವರನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾಯಿತು.

ಜಿಲ್ಲಾಧಿಕಾರಿ ಕೂರ್ಮಾ ರಾವ್ ಚುನಾವಣಾ ಆಯೋಗವು ನೀಡಿದ ಜಿಲ್ಲಾ ಚುನಾವಣಾ ಅಧಿಕಾರಿ ಪ್ರಶಸ್ತಿ ಪಡೆದ ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರನ್ನು ಸನ್ಮಾನಿಸಲಾಯಿತು.

Vishwa News 24

Recent Posts

ಸುಳ್ಯ:  ಶಾಸಕಿ ಭಾಗೀರಥಿ ಮುರುಳ್ಯ ಕಾರು ಅಪಘಾತ – vishwanews24

ಸುಳ್ಯ:  ಶಾಸಕಿ ಭಾಗೀರಥಿ ಮುರುಳ್ಯ ಕಾರು ಅಪಘಾತ ಸುಳ್ಯ: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು…

15 hours ago

ಸ್ವಾಮೀಜಿಗಳು ನನ್ನ ಸೇವೆ ಮಾಡಲಿ ಅಂತ ಹೇಳಿಲ್ಲ ; ನನ್ನ ಹೇಳಿಕೆಯನ್ನು ತಿರುಚಲಾಗಿದೆ : ಸಿಎಂ  – vishwanews24

ಸ್ವಾಮೀಜಿಗಳು ನನ್ನ ಸೇವೆ ಮಾಡಲಿ ಅಂತ ಹೇಳಿಲ್ಲ ; ನನ್ನ ಹೇಳಿಕೆ ತಿರುಚಲಾಗಿದೆ : ಸಿಎಂ  ಬೆಂಗಳೂರು: ನನಗೆ ಮದ…

15 hours ago

ಎಚ್ಚರ ತಪ್ಪಿದರೆ ಎಂಆರ್‌ಪಿಎಲ್ ಯಾವತ್ತಿಗೂ ಜೀವಂತ ಜ್ವಾಲಾಮುಖಿ: ಸತ್ಯಜಿತ್ ಸುರತ್ಕಲ್ – vishwanews24

ಎಂಆರ್‌ಪಿಎಲ್‌ ಜೀವಂತ ಜ್ವಾಲಾಮುಖಿಯಾಗದಂತೆ ಎಚ್ಚರ ವಹಿಸಿ: ಸತ್ಯಜಿತ್ ಸುರತ್ಕಲ್ ಮಂಗಳೂರು: ಎಂಆರ್‌ಪಿಎಲ್‌ನಂತಹ ಸಂಸ್ಥೆ ಕರಾವಳಿಯಲ್ಲಿರುವುದು ಹೆಮ್ಮೆಯ ವಿಚಾರವಾದರೂ, ಆಡಳಿತ ವರ್ಗ…

16 hours ago

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ – vishwanews24

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ…

16 hours ago

ಕಾರ್ಕಳ: ಉದ್ಯಮಿ ನೇಣು ಬಿಗಿದು ಆತ್ಮಹತ್ಯೆ – vishwanews24

ಕಾರ್ಕಳ: ಉದ್ಯಮಿ ಮಂಜುನಾಥ್ ಪೈ ನೇಣು ಬಿಗಿದು ಆತ್ಮಹತ್ಯೆ ಕಾರ್ಕಳ: ಜೋಡು ರಸ್ತೆಯ ಅಪಾರ್ಟ್‌ಮೆಂಟ್ ಕಟ್ಟಡದ ಕೆಳಭಾಗದಲ್ಲಿ ಉದ್ಯಮಿ ಮಂಜುನಾಥ್…

16 hours ago

ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ ಮಾಡಿದ ಆರೋಪ : ಡಿಐಜಿ ಸೋಮಶೇಖರ್ ಬಂಧನ – vishwanews24

ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ ಮಾಡಿದ ಆರೋಪ : ಡಿಐಜಿ ಸೋಮಶೇಖರ್ ಬಂಧನ ಬೆಂಗಳೂರು:…

17 hours ago