ಉಡುಪಿ : ಬಾಲಕಿಯೊಬ್ಬಳು ಧಿಡೀರ್ ನಾಪತ್ತೆಯಾದ ಘಟನೆ ಉಡುಪಿ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಸುಶ್ಮಿತ ನಾಪತ್ತೆಯಾದ ಬಾಲಕಿ. ಮೂಲತಃ ಕೊಪ್ಪಳ ಜಿಲ್ಲೆ ಪುಷ್ಟಗಿ ತಾಲೂಕಿನ ನಿವಾಸಿಯಾದ ಈಕೆ ಉಡುಪಿ ಜಿಲ್ಲೆಯ ಕಲ್ಯಾಣಪುರದ ಟಿಎಂಎಪೈ ಶಾಲೆಯಲ್ಲಿ 8ನೇ ತರಗತಿಯಲ್ಲಿ ಕಲಿಯುತ್ತಿರುವ ಈಕೆಯನ್ನು ಆಕೆ ತಾಯಿ ಲಕ್ಷ್ಮಿ ಕಲ್ಯಾಣಪುರದಲ್ಲಿರುವ ಪ್ಲಾನೆಟ್ ಮಾರ್ಸ್ ಫೌಂಡೇಶನ್ ಎಂಬ ಆಶ್ರಮದಲ್ಲಿ ಸೇರಿಸಿ ಹೋಗಿದ್ದರು.
ಎಂದಿನಂತೆ ಶಾಲೆಗೆ ಹೋಗಿ ಆಶ್ರಮಕ್ಕೆ ಬರುತ್ತಿದ್ದ ಸುಶ್ಮಿತ ಎಂಬಾಕೆ ಇದೇ ಜೂನ್19ರಂದು ರಾತ್ರಿ ಊಟ ಮಾಡಿ ಮಲಗಿದ್ದವಳು ಮರುದಿನ ಬೆಳಿಗ್ಗೆ ಕಾಣೆಯಾಗಿದ್ದಾಳೆ.
ಪೋಷಕರು ಆಶ್ರಮದ ಮೇಲೆಯೇ ಶಂಕೆ ವ್ಯಕ್ತಪಡಿಸಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ಆದರೆ ಆಶ್ರಮದ ಮುಖ್ಯಸ್ಥರು ಮಾತ್ರ ಆಕೆ ಯಾರಿಗೂ ತಿಳಿಯದೆ ರಾತ್ರೋ ರಾತ್ರಿ ಆಶ್ರಮ ಬಿಟ್ಟು ಹೋಗಿದ್ದಾಳೆ. ಈ ಬಗ್ಗೆ ಆಕೆ ಆಶ್ರಮದಿಂದ ಒಬ್ಬಳೇ ಹೊರಗೆ ಹೋಗಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮಲ್ಪೆ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ. ಇಷ್ಟೇ ಅಲ್ಲದೆ ಬಾಲಕಿಯನ್ನು ಯಾರಾದರೂ ಅಪಹರಿಸಿದ್ದಾರಾ ಎಂಬ ಶಂಕೆಯೂ ಪೋಷಕರಿಂದ ವ್ಯಕ್ತವಾಗಿದೆ. ಈ ನಿಟ್ಟಿನಲ್ಲೂ ತನಿಖೆ ಮುಂದುವರೆದಿದೆ.
ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ ಶಿಳ್ಳೆ ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್ ಭಟ್ ಗರಂ ಮಂಗಳೂರು: ಯಕ್ಷಗಾನ…
ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…
SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…
ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಗೌರವ ಡಾಕ್ಟರೇಟ್ ಮಂಗಳೂರು…
ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…
ಕೇಂದ್ರ ಸರ್ಕಾರ ತೈಲ ಬೆಲೆ ಏರಿಸುವ ಮೂಲಕ ನಮ್ಮನ್ನ ಕೊಲೆ ಮಾಡ್ತಿದೆ : ಡಿಕೆಶಿ ಬೆಂಗಳೂರು : ಕೇಂದ್ರ ಸರ್ಕಾರ…