Featured

ಉಡುಪಿ : ಅತ್ಯುತ್ತಮ ಪ್ರಗತಿಪರ ಬಜೆಟ್ : ಶ್ರೀಶಾ ನಾಯಕ್ -Vishwanews24

ಉಡುಪಿ : ಅತ್ಯುತ್ತಮ ಪ್ರಗತಿಪರ ಬಜೆಟ್ : ಶ್ರೀಶಾ ನಾಯಕ್

ಉಡುಪಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅತ್ಯುತ್ತಮ ಪ್ರಗತಿಪರ ಬಜೆಟನ್ನು ಮಂಡಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಅಮೃತ ಕಾಲ – ಕರ್ತವ್ಯದ ಕಾಲ ಎಂಬ ಕರೆಯನ್ನು ಈ ಬಜೆಟ್ ಮೂಲಕ ಜಾರಿಗೊಳಿಸಿದ್ದಾರೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀಶಾ ನಾಯಕ್ ಹೇಳಿದ್ದಾರೆ

ಬೊಮ್ಮಾಯಿ ಅವರು ಕಳೆದ ವರ್ಷದ ಬಜೆಟ್ ಮೂಲಕ ರಾಜ್ಯದ ಆರ್ಥಿಕ ಬೆಳವಣಿಗೆಯಲ್ಲಿ ಶೇ 7.9, ತಲಾದಾಯ 2.40 ಲಕ್ಷದಿಂದ 3.32 ಲಕ್ಷ ರೂ., ಜಿಎಸ್ ಟಿ ಸಂಗ್ರಹದಲ್ಲಿ ಶೇ 26, ರಾಜ್ಯ ತೆರಿಗೆಯಲ್ಲಿ ಶೇ 21 ಮತ್ತು ಕೇಂದ್ರ ತೆರಿಗೆಯ ಪಾಲು ಶೇ 25ರಷ್ಟು ಹೆಚ್ಚಿಸಿ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸುಸ್ಥಿರಗೊಳಿಸಿದ್ದಾರೆ. ಈ ಬಾರಿ ಮತ್ತೇ ರಾಜ್ಯದ ಪ್ರಗತಿಯ ಗತಿಗೆ ವೇಗ ನೀಡುವಂತಹ ಬಜೆಟ್ ಮಂಡಿಸಿದ್ದಾರೆ.

ರೈತರಿಗಾಗಿ ರೈತ ಉನ್ನತಿ, ಕೃಷಿ ಸಿರಿ, ಸಹಸ್ರ ಸರೋವರ, ಸಹ್ಯಾದ್ರಿ ಸಿರಿ, ಜಲನಿಧಿ ಯೋಜನೆಗಳು, ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ 3,500 ಕೋಟಿ ರು.ಗಳ ಬೆಂಬಲ ಬೆಲೆ ಆವರ್ತ ನಿಧಿ, ಬಡವಿದ್ಯಾರ್ಥಿಗಳಿಗಾಗಿ ಮುಖ್ಯಮಂತ್ರಿ ವಿದ್ಯಾ ಶಕ್ತಿ ಮಕ್ಕಳ ಬಸ್ಸು, ಹಳ್ಳಿ ಮುತ್ತುನ ಯೋಜನೆಗಳು, ತಾಯಿ ಮತ್ತುಮಕ್ಕಳಿಗಾಗಿ ಜೀವ ಸುಧೆ, ವಾತ್ಸಲ್ಯ, ನಗು ಮಗು, ಯುವಜನಿರಿಗಾಗಿ ನಸ್ವಾಮೀ ವಿವೇಕಾನಂದ ಯುವಶಕ್ತಿ, ಬದುಕುವ ದಾರಿ, ಯುವಸ್ನೇಹಿ, ಗ್ರಾಮೀಣ ಸೇವೆಗಾಗಿ ಜನಸೇವಕ ಇತ್ಯಾದಿ ಯೋಜನೆಗಳನ್ನು ಬೊಮ್ಮಾಯಿಯವರು ಮಂಡಿಸಿದ್ದು, ಇದು ರಾಜ್ಯದ ಮುಂದಿನ ಪ್ರಗತಿಯ ಮಾರ್ಗಸೂಚಿಯಾಗಿದೆ ಎಂದು ಹೇಳಿದ್ದಾರೆ.

ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಸಿಫುಡ್ ಪಾರ್ಕ್ ಮತ್ತು ಮರೀನಾ ಸ್ಥಾಪನೆ, ನಾರಾಯಣಗುರು ವಸತಿ ಶಾಲೆ, ಧಾರ್ಮಿಕ ಮತ್ತು ಸಾಹಸ ಪ್ರವಾಸೋದ್ಯಮ ಅಭಿವೃದ್ಧಿಗೆ ಸಿಆರ್ ಝಡ್ ಸಡಿಲಿಕೆ, ಗೇರು ಲೀಸ್ ಭೂಮಿಯನ್ನು ರೈತರಿಗೆ ಖಾಯಂಗೊಳಿಸುವ ನಿರ್ಧಾರ, ಕಂಬಳ ಮತ್ತು ಗ್ರಾಮೀಣ ಕ್ರೀಡೆಗಳ ಪ್ರೋತ್ಸಾಹಕ್ಕೆ ಗ್ರಾಮೀಣ ಕ್ರೀಡಾಂಗಣಗಳ ನಿರ್ಮಾಣದಂತಹ ಯೋಜನೆಗಳನ್ನು ನೀಡಿರುವ ಮುಖ್ಯಮಂತ್ರಿಗಳಿಗೆ ಶ್ರೀಶಾ ನಾಯಕ್ ಕೃತಜ್ಞತೆ ಸಲ್ಲಿಸಿದ್ದಾರೆ.

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

7 hours ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

1 day ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

1 day ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

1 day ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

1 day ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

1 day ago