Featured

ಉಡುಪಿ: ಅ. 3 ರಿಂದ  12 ರವರೆಗೆ “ದಸರಾ ದರ್ಶನಿ-2024” ವಿಶೇಷ ಪ್ಯಾಕೇಜ್ – vishwanews24

ಉಡುಪಿ: ಅ. 3 ರಿಂದ  12 ರವರೆಗೆ “ದಸರಾ ದರ್ಶನಿ-2024” ವಿಶೇಷ ಪ್ಯಾಕೇಜ್

      ಉಡುಪಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಉಡುಪಿ ಘಟಕದದಿಂದ ಜಿಲ್ಲೆಯ ಸುತ್ತ ಮುತ್ತಲಿನ ಪ್ರದೇಶಗಳಿಗೆ “ದಸರಾ ದರ್ಶನಿ-2024” ಎಂಬ ವಿಶೇಷ ಪ್ಯಾಕೇಜ್ ಪ್ರವಾಸವನ್ನು ಅಕ್ಟೋಬರ್ 3 ರಿಂದ ಅಕ್ಟೋಬರ್ 12 ರವರೆಗೆ  ಕಾರ್ಯಾಚರಿಸಲಾಗುತ್ತಿದೆ.

ಪ್ಯಾಕೇಜ್ 1. ಪಂಚದುರ್ಗ ದರ್ಶನ: ಉಡುಪಿ ನಗರ ಸಾರಿಗೆ ಬಸ್ ನಿಲ್ದಾಣದಿಂದ ಬೆಳಗ್ಗೆ 7.30 ಬಸ್ ಹೊರಟು, ಸೌಕೂರು ಶ್ರೀ ದುರ್ಗಾ ಪರಮೇಶ್ವರೀ ದೇವಾಸ್ಥಾನಕ್ಕೆ ಬೆಳಗ್ಗೆ 09 ಕ್ಕೆ ತಲುಪಿ, 9.15 ಕ್ಕೆ ಹೊರಟು, ಕೊಲ್ಲೂರು ಮೂಕಾಂಬಿಕ ದೇವಾಸ್ಥಾನಕ್ಕೆ ಬೆಳಗ್ಗೆ 10.30 ಕ್ಕೆ ತಲುಪಿ, 11.00 ಕ್ಕೆ ಹೊರಟು, ನಂತರ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಬೆಳಗ್ಗೆ 11.30 ಕ್ಕೆ ತಲುಪಿ, ಮಧ್ಯಾಹ್ನ 12 ಕ್ಕೆ ಹೊರಟು, ಕಮಲಶಿಲೆ ಬ್ರಾಹ್ಮಿದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಮಧ್ಯಾಹ್ನ 1.30 ಕ್ಕೆ ತಲುಪಿ, ಮಧ್ಯಾಹ್ನ ಊಟದ ನಂತರ, ಮಧ್ಯಾಹ್ನ 3 ಕ್ಕೆ ಹೊರಟು ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಸಂಜೆ 4.30 ಕ್ಕೆ ತಲುಪಿ, ಸಂಜೆ 4.45 ಕ್ಕೆ ಹೊರಟು, ನೀಲಾವರ ಶ್ರೀ ಮಹಿಷ ಮರ್ದಿನಿ ದೇವಸ್ಥಾನಕ್ಕೆ ಬಸ್ ಸಂಜೆ 5.15 ಕ್ಕೆ ತಲುಪಿ, ಸಂಜೆ 5.30 ಕ್ಕೆ ಹೊರಟು, ಉಡುಪಿ ನಗರ ಸಾರಿಗೆ ಬಸ್ ನಿಲ್ದಾಣಕ್ಕೆ ಸಂಜೆ 6.15 ಹಾಗೂ ಉಡುಪಿ ಘಟಕ್ಕೆ ಸಂಜೆ 6.30 ಗಂಟೆಗೆ ಬಸ್ ತಲುಪಲಿದೆ.

     ಒಟ್ಟು 223 ಕಿ.ಮೀ ಇದ್ದು, ಪ್ರಪೋಸಲ್ ದರ ವಯಸ್ಕರಿಗೆ 400 ರೂ ಹಾಗೂ ಮಕ್ಕಳಿಗೆ 350 ರೂ ನಿಗಧಿಪಡಿಸಲಾಗಿದೆ.

ಪ್ಯಾಕೇಜ್ 2. ಕ್ಷೇತ್ರ ದರ್ಶನ : ಉಡುಪಿ ನಗರ ಸಾರಿಗೆ ಬಸ್ ನಿಲ್ದಾಣದಿಂದ ಬೆಳಗ್ಗೆ 8.30 ಕ್ಕೆ ಬಸ್ ಹೊರಟು, ಪುತ್ತೂರು ಭಗವತೀ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಬೆಳಗ್ಗೆ 8.45 ಕ್ಕೆ ತಲುಪಿ, ಬೆಳಗ್ಗೆ 9.25 ಕ್ಕೆ ಹೊರಟು, ಕೋಟ ಅಮೃತೇಶ್ವರಿ ದೇವಸ್ಥಾನಕ್ಕೆ ಬೆಳಗ್ಗೆ 9.45 ಕ್ಕೆ ತಲುಪಿ, ಬೆಳಗ್ಗೆ 10.15 ಕ್ಕೆ ಹೊರಟು, ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಬೆಳಗ್ಗೆ 10.25 ಕ್ಕೆ ತಲುಪಿ, ಬೆಳಗ್ಗೆ 10.45 ಕ್ಕೆ ಹೊರಟು, ಮರವಂತೆಗೆ ಬೆಳಗ್ಗೆ 11.15 ಕ್ಕೆ ತಲುಪಿ, ಬೆಳಗ್ಗೆ 11.45 ಕ್ಕೆ ಅಲ್ಲಿಂದ ಹೊರಟು, ಮುಡೇಶ್ವರ ವನ್ನು ಮಧ್ಯಾಹ್ನ 1 ಗಂಟೆಗೆ ತಲುಪಿ, ಮಧ್ಯಾಹ್ನದ ಊಟದ ನಂತರ 2.30 ಕ್ಕೆ ಬಸ್ ಹೊರಟು, ಇಡಗುಂಜಿಗೆ ಮಧ್ಯಾಹ್ನ 3 ಕ್ಕೆ ತಲುಪಿ, ಮಧ್ಯಾಹ್ನ 3.30 ಕ್ಕೆ ಹೊರಟು, ಅಪ್ಸರಕೊಂಡಕ್ಕೆ ಬಸ್ ಸಂಜೆ 3.50 ಕ್ಕೆ ತಲುಪಿ, ಅಲ್ಲಿಂದ ಸಂಜೆ 4.30 ಕ್ಕೆ ಹೊರಟು, ಕಾಸರಕೋಡ್ ಇಕೋಬೀಚ್‌ಗೆ sಸಂಜೆ 4.45 ಕ್ಕೆ ತಲುಪಿ, ಅಲ್ಲಿಂದ ಸಂಜೆ 5.45 ಕ್ಕೆ ಹೊರಟು, ಉಡುಪಿ ನಗರ ಸಾರಿಗೆ ಬಸ್ ನಿಲ್ದಾಣಕ್ಕೆ ಬಸ್ ತಲುಪುವ ರಾತ್ರಿ 8.30 ಹಾಗೂ ಉಡುಪಿ ಘಟಕಕ್ಕೆ ರಾತ್ರಿ 8.45 ಕ್ಕೆ ಬಸ್ ತಲುಪಲಿದೆ.

  ಒಟ್ಟು 281 ಕಿ.ಮೀ ಗೆ ಪ್ರಪೋಸಲ್ ದರ ವಯಸ್ಕರಿಗೆ 500 ರೂ ಹಾಗೂ ಮಕ್ಕಳಿಗೆ 400 ರೂ. ನಿಗಧಿಪಡಿಸಿದ್ದು, online ಬುಕ್ಕಿಂಗ್‌ಗಾಗಿ www.ksrtc.in  ಮತ್ತು ಮುಂಗಡ ಬುಕ್ಕಿಂಗ್‌ಗಾಗಿ ಡಾ.ವಿ.ಎಸ್ ಆಚಾರ್ಯ ಬಸ್ ನಿಲ್ದಾಣ, ಉಡುಪಿ ಮೊ.ನಂ: 9663266400 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕ.ರಾ.ರ.ಸಾ.ನಿಗಮದ ಉಡುಪಿ ಘಟಕ ವ್ಯವಸ್ಥಾಪಕರ ಕಚೇರಿ ಪ್ರಕಟಣೆ ತಿಳಿಸಿದೆ.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

2 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

2 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

2 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

2 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

3 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

3 days ago