Featured

ಉಡುಪಿ: ಆನ್‌ಲೈನ್‌ ಬಹುಮಾನ ಆಮಿಷ ; 5.63 ಲಕ್ಷ ಕಳೆದುಕೊಂಡ ವ್ಯಕ್ತಿ – Vishwanews24

ಉಡುಪಿ: ಆನ್‌ಲೈನ್‌ ಬಹುಮಾನ ಆಮಿಷ ; 5.63 ಲಕ್ಷ ಕಳೆದುಕೊಂಡ ವ್ಯಕ್ತಿ – Vishwanews24

ಉಡುಪಿ: ವಾಟ್ಸ್ ಅಫ್ ಗೆ ವಾಯ್ಸ್ ಸಂದೇಶ ಕಳುಹಿಸಿ 25 ಲಕ್ಷ ಹಣ ಬಹುಮಾನ ಬಂದಿರುವುದಾಗಿ ನಂಬಿಸಿ ಆನ್‌ಲೈನ್‌ ಮುಖಾಂತರ ವ್ಯಕ್ತಿಯೊಬ್ಬರಿಗೆ 5,63,150 ಲಕ್ಷ ರೂ. ವಂಚಿಸಿದ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿವಾಕರ್ ಎಂಬವರ ವಾಟ್ಸ್ ಅಫ್ ನಂಬರ್ ಗೆ ಅಪರಿಚಿತ ವ್ಯಕ್ತಿಗಳು ವಾಯ್ಸ್ ಸಂದೇಶ ಕಳುಹಿಸಿ 25 ಲಕ್ಷ ಹಣ ಬಹುಮಾನ ಬಂದಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ದಾಖಲಾತಿಗಳನ್ನು ವಾಟ್ಸ್ ಅಫ್ ಗೆ ಕಳುಹಿಸಿ ದಿವಾಕರ್ ಅವರು ನಂಬುವಂತೆ ಮಾಡಿ ನಂತರ ಯಾರೋ ಅಪರಿಚಿತ ವ್ಯಕ್ತಿಗಳು ದೂರವಾಣಿ ಕರೆ ಮಾಡಿ, ವಿವಿಧ ಇಲಾಖೆಯ ಅಧಿಕಾರಿಗಳೆಂದು ನಂಬಿಸಿ ಬಹುಮಾನದ ಮೊತ್ತಕ್ಕೆ ಡಿಪಾಸಿಟ್ ಹಣವನ್ನು ಕಟ್ಟುವಂತೆ ತಿಳಿಸಿದ್ದಾರೆ.

ಆ ಬಳಿಕ ಎಸ್.ಬಿ.ಐ, ಐಡಿಬಿಐ ಬ್ಯಾಂಕ್ ಗಳ ವಿವಿಧ ಖಾತೆಗಳನ್ನು ನೀಡಿದ್ದು, ಇದನ್ನು ನಂಬಿದ ದಿವಕಾರ್ ಜಲ್ದಿ ಕ್ಯಾಶ್ ನಿಂದ ರೂಪಾಯಿ 1,90,000 ಹಾಗೂ ಐಡಿಐಬಿ ಬ್ಯಾಂಕ್ ನಿಂದ ಉಡುಪಿಯಿಂದ ರೂಪಾಯಿ 3,73,150 ರಂತೆ ಒಟ್ಟು ರೂಪಾಯಿ 5,63,150 ಹಣವನ್ನು ಡಿಪಾಸಿಟ್ ಮಾಡಿರುತ್ತಾರೆ.

ಆದರೆ ಬಳಿಕ ಬಹುಮಾನದ ಹಣವನ್ನು ನೀಡದೆ, ಡಿಪಾಸಿಟ್ ಮಾಡಿಸಿಕೊಂಡ ಹಣವನ್ನು ಕೂಡ ವಾಪಾಸ್ಸು ನೀಡದೆ ಒಟ್ಟು ರೂಪಾಯಿ 5,63,150ಹಣವನ್ನು ಮೋಸ ಮಾಡಿರುವುದಾಗಿ ಸೆನ್ ಅಪರಾಧ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದಾರೆ.

Vishwa News 24

Recent Posts

ದುಬೈನಲ್ಲಿ ರಸ್ತೆ ಅಪಘಾತ : ಕಿನ್ನಿಗೋಳಿಯ ಯುವತಿ ಸಾವು – vishwanews24

ದುಬೈನಲ್ಲಿ ರಸ್ತೆ ಅಪಘಾತ : ಕಿನ್ನಿಗೋಳಿಯ ಯುವತಿ ಸಾವು ಮಂಗಳೂರು: ದುಬೈನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಕಳೆದ ಕೆಲವು…

15 minutes ago

ಗೋ ರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಮಂಗಳೂರಿನಲ್ಲಿ SDPI ಪ್ರತಿಭಟನೆ – vishwanews24

ಬಿಜೆಪಿ ಸಂಘಪರಿವಾರವು ದೇಶದ ಕಾನೂನಿಗೆ ವಿರುದ್ಧವಾಗಿದೆ: ರಿಯಾಝ್ ಫರಂಗಿಪೇಟೆ ಗಲಭೆಕೋರರ ವಿರುದ್ಧದ ಪ್ರಕರಣ ಹಿಂಪಡೆದ ಕ್ರಮಕ್ಕೆ SDPI ತೀವ್ರ ವಿರೋಧ…

36 minutes ago

ಬೆಳ್ತಂಗಡಿ : ಜೂನ್ 1 ರಿಂದ ಟ್ರೆಕ್ಕಿಂಗ್, ಜಲಪಾತಗಳ ಮೇಲಿನ ನಿರ್ಬಂಧ ತೆರವು – vishwanews24

ಬೆಳ್ತಂಗಡಿ : ಜೂನ್ 1 ರಿಂದ ಪ್ರವಾಸಿಗರಿಗೆ ಟ್ರೆಕ್ಕಿಂಗ್, ಜಲಪಾತಗಳ ಮೇಲಿನ ನಿರ್ಬಂಧ ತೆರವು ಅರಣ್ಯ ಇಲಾಖೆಯಿಂದ ಪ್ರವಾಸಿಗರಿಗೆ ಕಟ್ಟುನಿಟ್ಟಿನ…

45 minutes ago

50 ಸಾವಿರ ರೂ. ವರೆಗಿನ ಬೆಳೆ ಸಾಲ ಮನ್ನಾ ಘೋಷಿಸಿದ ವಿಜಯ್‌ – vishwanews24

50 ಸಾವಿರ ರೂ. ವರೆಗಿನ ಬೆಳೆ ಸಾಲ ಮನ್ನಾ ಘೋಷಿಸಿದ ವಿಜಯ್‌ ಚೆನ್ನೈ: ರೈತರಿಗೆ ಭಾರಿ ನೆರವು ಘೋಷಿಸಿರುವ ತಮಿಳುನಾಡು…

1 hour ago

ನಟ ಧರ್ಮೇಂದ್ರಗೆ ಮರಣೋತ್ತರ ಪದ್ಮವಿಭೂಷಣ : ಪ್ರಶಸ್ತಿ ಸ್ವೀಕರಿಸಿದ ಪತ್ನಿ ಹೇಮಾ ಮಾಲಿನಿ – vishwanews24

ನಟ ಧರ್ಮೇಂದ್ರಗೆ ಮರಣೋತ್ತರ ಪದ್ಮವಿಭೂಷಣ: ಪ್ರಶಸ್ತಿ ಸ್ವೀಕರಿಸಿದ ಪತ್ನಿ ಹೇಮಾ ಮಾಲಿನಿ ನವದೆಹಲಿ: ದಿವಂಗತ ಬಾಲಿವುಡ್ ನಟ ಧರ್ಮೇಂದ್ರ  ಅವರಿಗೆ…

1 hour ago

ಪುತ್ತೂರು: ವಿದ್ಯುತ್ ಶಾಕ್‌ ಹೊಡೆದು ಯುವಕ ಮೃತ್ಯು – vishwanews24

ಪುತ್ತೂರು: ವಿದ್ಯುತ್ ಶಾಕ್‌ ಹೊಡೆದು ಯುವಕ ಮೃತ್ಯು ಪುತ್ತೂರು : ನಿಡಳ್ಳಿ ಗ್ರಾಮದ ಬೋಳುಂಬುಡೆಯಲ್ಲಿ ವಿದ್ಯುತ್ ಶಾಕ್ ಹೊಡೆದು ನೆಲಕ್ಕೆ…

1 hour ago