ಉಡುಪಿ: ಜನರನ್ನು ವಂಚಿಸಲು ಸ್ಕ್ಯಾಮರ್ ಗಳು ಹೊಸ ಹೊಸ ವಿಧಾನವನ್ನು ಹುಡುಕುತ್ತಾ ಇರುತ್ತಾರೆ. ಇವರ ಈ ವಂಚನಾ ಜಾಲದಲ್ಲಿ ಸಿಕ್ಕಿಹಾಕಿಕೊಂಡ್ರೆ ನಿಮಗೆ ಪಂಗನಾಮ ಗ್ಯಾರಂಟಿ. ಇದೀಗ ಆನ್ ಲೈನ್ ಹೆಸರಿನಲ್ಲಿ ಹೊಸತೊಂದು ವಂಚನೆ ನಡೆಯುತ್ತಿದೆ. ಈ ಬಗ್ಗೆ ಜನರು ಜಾಗೃತೆಯಾಗಿರಬೇಕಿದೆ.
ಬ್ಯಾಂಕ್ ಹೆಸರಿನಲ್ಲಿ ಅನೇಕ ವಿಧದಲ್ಲಿ ವಂಚನೆ ಮಾಡೋದು ಎಲ್ಲರಿಗೆ ಗೊತ್ತೇ ಇದೆ. . ಜನರನ್ನು ವಂಚಿಸಲು ಸ್ಕ್ಯಾಮರ್ ಗಳು ಹೊಸ ವಿಧಾನವನ್ನು ಕಂಡುಹುಡುಕುತ್ತಾರೆ.ಆದ್ರೆ ಈ ಬಗ್ಗೆ ಅರಿವಿಲ್ಲದವರು ಇಂತಹ ವಂಚನಾ ಜಾಲದಲ್ಲಿ ಸಿಲುಕಿ ತಮ್ಮ ಹಣ ಕಳೆದುಕೊಳ್ಳುತ್ತಾರೆ. ಇದೀಗ ಸ್ಕ್ಯಾಮರ್ ಗಳು ಹೊಸ ವಿಧಾನ ಕಂಡು ಹುಡುಕಿದ್ದು ಹೆಚ್ಚಿನವರಿಗೆ ರಿಜಿಸ್ಟಾರ್ ಪೋಸ್ಟ್ ಕಳುಹಿಸಿ ವಂಚಿಸಲಾಗುತ್ತಿದೆ.
ಹೌದು, ನಗರ ಭಾಗದಲ್ಲಿ ಬಟ್ಟೆಬರೆಗಳನ್ನು ಆನ್ ಲೈನ್ ಮೂಲಕನೇ ಖರೀದಿಸಲಾಗುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡ ವಂಚಕರು ಮಿಶೋ ಹೆಸರಿನ ಬಟ್ಟೆಬರೆಗಳ ಆನ್ ಲೈನ್ ಕಂಪೆನಿಯ ಹೆಸರಿನಲ್ಲಿ ರಿಜಿಸ್ಟಾರ್ ಪೋಸ್ಟ್ ಕಳುಹಿಸುತ್ತಿದ್ದಾರೆ. ಈ ರಿಜಿಸ್ಟಾರ್ ಪೋಸ್ಟ್ ನಲ್ಲಿ ಗಿಫ್ಟ್ ಓಚರೊಂದನ್ನು ಕಳುಹಿಸಿ ನೀವು ಕಂಪೆನಿಯ ವಾರ್ಷಿಕೊತ್ಸವದ ಸಂದರ್ಭದಲ್ಲಿ ಹಮ್ಮಿಕೊಂಡ ಲಕ್ಕಿ ಕೂಪನ್ ನಲ್ಲಿ ಗೆದ್ದಿದ್ದೀರಿ ನಿಮಗೆ ಬಂಪರ್ ಬಹುಮಾನವಾಗಿ ಕಾರು ಸಿಕ್ಕಿದೆ ಅಂತ ನಂಬಿಸುತ್ತಾರೆ.
ನಿಮ್ಮ ಎಕೌಂಟ್ ಗೆ ಹಣ ವರ್ಗಾವಣೆ ಮಾಡುತ್ತೇವೆ ಅದಕ್ಕಾಗಿ ಫಾರ್ಮೊಂದನ್ನು ತುಂಬಿಸಿ ವಾಟ್ಸಾಪ್ ಮಾಡಿ ಎಂದು ಹೇಳುತ್ತಾರೆ. ಬಳಿಕ ಎಲ್ಲಾ ಬ್ಯಾಂಕ್ ಡೀಟೇಲ್ಸ್ ಪಡೆದು ಮುಂಗಡವಾಗಿ ಹಣವನ್ನು ನೀಡಬೇಕು ಎಂದು ನಂಬಿಸಿ ಮೋಸ ಮಾಡುತ್ತಾರೆ. ಇಂತಹ ಮೋಸದ ಜಾಲ ಸದ್ಯ ಸಕ್ರೀಯವಾಗಿದ್ದು ಈ ಬಗ್ಗೆ ನಾಗರಿಕರು ಎಚ್ಚರದಿಂದ ಇರಬೇಕಿದೆ.
ಕಾರ್ಕಳ: ಜನವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ…
ಎಂಆರ್‌ಪಿಎಲ್ ದುರಂತ: ಮೃತರ ಕುಟುಂಬಕ್ಕೆ ₹1.20 ಕೋಟಿ ಪರಿಹಾರ, ಸದಸ್ಯರೊಬ್ಬರಿಗೆ ಉದ್ಯೋಗ : ಸಂಸದ ಕ್ಯಾ. ಬ್ರಿಜೇಶ್ ಚೌಟ ಮಂಗಳೂರು:…
ಉಡುಪಿ: ಜೈಲು ವಾರ್ಡನ್‌ಗೆ ಕೊಲೆ ಬೆದರಿಕೆ, ಹಲ್ಲೆ ಪ್ರಕರಣ :ಆರೋಪಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ ಉಡುಪಿ: ಸುಮಾರು…
ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕ ಸಾವು ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕರೊಬ್ಬರು ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ…
ದ. ಕ, ಉಡುಪಿಯಲ್ಲಿ ಅ. 11 ರವರೆಗೆ ಮಳೆಯಾಗುವ ನಿರೀಕ್ಷೆ: ಹವಾಮಾನ ಇಲಾಖೆ ಮುನ್ಸೂಚನೆ ಮಂಗಳೂರು/ಉಡುಪಿ: ದಕ್ಷಿಣ ಕನ್ನಡ (ದ.ಕ)…
ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…