Featured

ಉಡುಪಿ: ಆನ್ ಲೈನ್ ವಂಚಕರಿಂದ ಹೊಸ ತಂತ್ರ, ಗಿಫ್ಟ್ ಓಚರ್ ಕಳುಹಿಸಿ ಬ್ಯಾಂಕ್ ಖಾತೆಗೆ ಕನ್ನ – Vishwanews24

ಉಡುಪಿ: ಆನ್ ಲೈನ್ ವಂಚಕರಿಂದ ಹೊಸ ತಂತ್ರ, ಗಿಫ್ಟ್ ಓಚರ್ ಕಳುಹಿಸಿ ಬ್ಯಾಂಕ್ ಖಾತೆಗೆ ಕನ್ನ

ಉಡುಪಿ: ಜನರನ್ನು ವಂಚಿಸಲು ಸ್ಕ್ಯಾಮರ್ ಗಳು ಹೊಸ ಹೊಸ ವಿಧಾನವನ್ನು ಹುಡುಕುತ್ತಾ ಇರುತ್ತಾರೆ. ಇವರ ಈ ವಂಚನಾ ಜಾಲದಲ್ಲಿ ಸಿಕ್ಕಿಹಾಕಿಕೊಂಡ್ರೆ ನಿಮಗೆ ಪಂಗನಾಮ ಗ್ಯಾರಂಟಿ. ಇದೀಗ ಆನ್ ಲೈನ್ ಹೆಸರಿನಲ್ಲಿ ಹೊಸತೊಂದು ವಂಚನೆ ನಡೆಯುತ್ತಿದೆ. ಈ ಬಗ್ಗೆ ಜನರು ಜಾಗೃತೆಯಾಗಿರಬೇಕಿದೆ.

ಬ್ಯಾಂಕ್ ಹೆಸರಿನಲ್ಲಿ ಅನೇಕ ವಿಧದಲ್ಲಿ ವಂಚನೆ ಮಾಡೋದು ಎಲ್ಲರಿಗೆ ಗೊತ್ತೇ ಇದೆ. . ಜನರನ್ನು ವಂಚಿಸಲು ಸ್ಕ್ಯಾಮರ್ ಗಳು ಹೊಸ ವಿಧಾನವನ್ನು ಕಂಡುಹುಡುಕುತ್ತಾರೆ.ಆದ್ರೆ ಈ ಬಗ್ಗೆ ಅರಿವಿಲ್ಲದವರು ಇಂತಹ ವಂಚನಾ ಜಾಲದಲ್ಲಿ ಸಿಲುಕಿ ತಮ್ಮ ಹಣ ಕಳೆದುಕೊಳ್ಳುತ್ತಾರೆ. ಇದೀಗ ಸ್ಕ್ಯಾಮರ್ ಗಳು ಹೊಸ ವಿಧಾನ ಕಂಡು ಹುಡುಕಿದ್ದು ಹೆಚ್ಚಿನವರಿಗೆ ರಿಜಿಸ್ಟಾರ್ ಪೋಸ್ಟ್ ಕಳುಹಿಸಿ ವಂಚಿಸಲಾಗುತ್ತಿದೆ.

ಹೌದು, ನಗರ ಭಾಗದಲ್ಲಿ ಬಟ್ಟೆಬರೆಗಳನ್ನು ಆನ್ ಲೈನ್ ಮೂಲಕನೇ ಖರೀದಿಸಲಾಗುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡ ವಂಚಕರು ಮಿಶೋ ಹೆಸರಿನ ಬಟ್ಟೆಬರೆಗಳ ಆನ್ ಲೈನ್ ಕಂಪೆನಿಯ ಹೆಸರಿನಲ್ಲಿ ರಿಜಿಸ್ಟಾರ್ ಪೋಸ್ಟ್ ಕಳುಹಿಸುತ್ತಿದ್ದಾರೆ. ಈ ರಿಜಿಸ್ಟಾರ್ ಪೋಸ್ಟ್ ನಲ್ಲಿ ಗಿಫ್ಟ್ ಓಚರೊಂದನ್ನು ಕಳುಹಿಸಿ ನೀವು ಕಂಪೆನಿಯ ವಾರ್ಷಿಕೊತ್ಸವದ ಸಂದರ್ಭದಲ್ಲಿ ಹಮ್ಮಿಕೊಂಡ ಲಕ್ಕಿ ಕೂಪನ್ ನಲ್ಲಿ ಗೆದ್ದಿದ್ದೀರಿ ನಿಮಗೆ ಬಂಪರ್ ಬಹುಮಾನವಾಗಿ ಕಾರು ಸಿಕ್ಕಿದೆ ಅಂತ ನಂಬಿಸುತ್ತಾರೆ.

ನಿಮ್ಮ ಎಕೌಂಟ್ ಗೆ ಹಣ ವರ್ಗಾವಣೆ ಮಾಡುತ್ತೇವೆ ಅದಕ್ಕಾಗಿ ಫಾರ್ಮೊಂದನ್ನು ತುಂಬಿಸಿ ವಾಟ್ಸಾಪ್ ಮಾಡಿ ಎಂದು ಹೇಳುತ್ತಾರೆ. ಬಳಿಕ ಎಲ್ಲಾ ಬ್ಯಾಂಕ್ ಡೀಟೇಲ್ಸ್ ಪಡೆದು ಮುಂಗಡವಾಗಿ ಹಣವನ್ನು ನೀಡಬೇಕು ಎಂದು ನಂಬಿಸಿ ಮೋಸ ಮಾಡುತ್ತಾರೆ. ಇಂತಹ ಮೋಸದ ಜಾಲ ಸದ್ಯ ಸಕ್ರೀಯವಾಗಿದ್ದು ಈ ಬಗ್ಗೆ ನಾಗರಿಕರು ಎಚ್ಚರದಿಂದ ಇರಬೇಕಿದೆ.

Vishwa News 24

Recent Posts

ಭಾರೀ ಮಳೆ ಮುನ್ಸೂಚನೆ : ನಾಳೆ(ಜುಲೈ 2)ದ.ಕ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ -vishwanews24

ಭಾರೀ ಮಳೆ ಮುನ್ಸೂಚನೆ : ನಾಳೆ(ಜುಲೈ 2)ದ.ಕ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆಯಾಗುವ…

15 hours ago

ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿ ಹಣ ನೀಡದೆ ಪಾವತಿಸದೆ ಪರಾರಿ ; ಪ್ರಕರಣ ದಾಖಲು – vishwanews24

ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿ ಹಣ ನೀಡದೆ ಪಾವತಿಸದೆ ಪರಾರಿ ; ಪ್ರಕರಣ ದಾಖಲು ಶಿರ್ವ : ಶಂಕರಪುರದ…

17 hours ago

ಹಜ್ ಯಾತ್ರೆ – 2027 : ಅರ್ಜಿ ಸಲ್ಲಿಕೆಗೆ ಜುಲೈ 20 ಕೊನೆ ದಿನ – vishwanews24

ಹಜ್ ಯಾತ್ರೆ - 2027 : ಅರ್ಜಿ ಸಲ್ಲಿಕೆಗೆ ಜುಲೈ 20 ಕೊನೆ ದಿನ ಬೆಂಗಳೂರು: ಮುಂದಿನ (2027ನೇ) ಸಾಲಿನಲ್ಲಿ…

18 hours ago

ಉಡುಪಿ: ಭಾರೀ ಮಳೆಯಾಗುವ ಸಾಧ್ಯತೆ ; ಜುಲೈ 2 ಮತ್ತು 3ರಂದು ರೆಡ್‌ ಅಲರ್ಟ್ ಘೋಷಣೆ  – vishwanews24

ಉಡುಪಿ: ಭಾರೀ ಮಳೆಯಾಗುವ ಸಾಧ್ಯತೆ ; ಜುಲೈ 2 ಮತ್ತು 3ರಂದು ರೆಡ್‌ ಅಲರ್ಟ್ ಘೋಷಣೆ  ಮೀನುಗಾರರು ಸಮುದ್ರಕ್ಕೆ ಇಳಿಯದಂತೆ…

18 hours ago

ಇಂದಿನಿಂದ ಜಾರಿಗೆ ಬರಲಿವೆ ಹೊಸ ರೂಲ್ಸ್‌: LPG, ಆಧಾರ್, ರೈಲ್ವೆ, ಬ್ಯಾಂಕ್ ಸೇವೆಗಳಲ್ಲಿ ಬದಲಾವಣೆ – vishwanews24

ಇಂದಿನಿಂದ ಜಾರಿಗೆ ಬರಲಿವೆ ಹೊಸ ರೂಲ್ಸ್‌: LPG, ಆಧಾರ್, ರೈಲ್ವೆ, ಬ್ಯಾಂಕ್ ಸೇವೆಗಳಲ್ಲಿ ಬದಲಾವಣೆ ನವದೆಹಲಿ: ಇಂದಿನಿಂದ ದೇಶಾದ್ಯಂತ ಹಲವು…

18 hours ago

ಬ್ರಹ್ಮಾವರ : ಭೀಕರ ರಸ್ತೆ ಅಪಘಾತ ; ಖ್ಯಾತ ಹುಲಿ ವೇಷ ಕಲಾವಿದ ಸಾವು – vishwanews24

ಬ್ರಹ್ಮಾವರ :ಭೀಕರ ರಸ್ತೆ ಅಪಘಾತ: ಪ್ರಸಿದ್ಧ ಹುಲಿ ವೇಷ ಕಲಾವಿದ ಸಾವು ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ 66ರ ಬ್ರಹ್ಮಾವರದ ಹೇರೂರು…

19 hours ago