Featured

ಉಡುಪಿ: ಆರೋಪಿಗಳಿಂದ  ಬಾಲಕೃಷ್ಣ ಪೂಜಾರಿ ಹತ್ಯೆಗೆ ಐದು ತಿಂಗಳ ಹಿಂದೆಯೆ ಯೋಜನೆ : ಪೊಲೀಸ್ ತನಿಖೆಯಿಂದ ಬಯಲು – vishwanews24

ಉಡುಪಿ: ಆರೋಪಿಗಳಿಂದ  ಬಾಲಕೃಷ್ಣ ಪೂಜಾರಿ ಹತ್ಯೆಗೆ ಐದು ತಿಂಗಳ ಹಿಂದೆಯೆ ಯೋಜನೆ : ಪೊಲೀಸ್ ತನಿಖೆಯಿಂದ ಬಯಲು

ಉಡುಪಿ: ಅಜೆಕಾರಿನ ದೇಪ್ಪುಟ್ಟೆಯ ಬಾಲಕೃಷ್ಣ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ದಿಲೀಪ್ ಹೆಗ್ಡೆಯು ಜೂನ್ ತಿಂಗಳಿನಲ್ಲಿ ಉಡುಪಿ ಗ್ರಾಮಾಂತರದ ಖಾಸಗಿ ಲ್ಯಾಬ್‌ನಲ್ಲಿ ವಿಷ ಸೇವಿಸಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.

ಆರೋಪಿಯು ತಾನು ವೈದ್ಯಕೀಯ ವಿದ್ಯಾರ್ಥಿಯಂತೆ ನಟಿಸಿ ತನ್ನ ಲ್ಯಾಬ್‌ನ ಬಳಕೆಗೆ ಬೇಕೆಂದು ಲ್ಯಾಬ್‌ನವರನ್ನು ನಂಬಿಸಿ ಆತ “ಆರ್ಸೆನಿಕ್‌ ಟ್ರೈ ಆಕ್ಸೈಡ್” ಖರೀದಿಸಿದ್ದ. ಈ ಮೂಲಕ ಆರೋಪಿಗಳು ಬಾಲಕೃಷ್ಣ ಪೂಜಾರಿ ಹತ್ಯೆಗೆ ಐದು ತಿಂಗಳ ಹಿಂದೆಯೆ ಯೋಜನೆ ರೂಪಿಸಿದ್ದರು ಎಂಬುದು ತಿಳಿದುಬಂದಿದೆ.

ವಿಷ ಮಾರಾಟ ಮಾಡಿರುವುದು ಬೆಳಕಿಗೆ ಬಂದ ಬೆನ್ನಲ್ಲೇ ಪೊಲೀಸರು ಲ್ಯಾಬ್ ಮಾಲೀಕರನ್ನು ವಿಚಾರಣೆಗೊಳಪಡಿಸಿದ್ದಾರೆ. ಅಗತ್ಯಬಿದ್ದರೆ ಮತ್ತೆ ವಿಚಾರಣೆಗೆ ಒಳಪಡಿಸುವುದಾಗಿ ಉಡುಪಿ ಎಸ್‌ಪಿ ಡಾ.ಕೆ.ಅರುಣ್ ತಿಳಿಸಿದ್ದಾರೆ.

ಮುಂಬೈನಲ್ಲಿ ಬೆಳೆದು ಶಿಕ್ಷಣ ಪಡೆದಿದ್ದ ಆರೋಪಿ ದಿಲೀಪ್ ಹೆಗ್ಡೆ ಅವರು ಸಾಮಾಜಿಕವಾಗಿ ಸಕ್ರಿಯರಾಗಿರಲಿಲ್ಲ. ಬಿಕಾಂ ಪದವಿ ಪಡೆದಿರುವ ಆತ, ಕೆಲವು ವರ್ಷಗಳ ಹಿಂದೆ ಕಾರ್ಕಳದಲ್ಲಿ ಆತನ ಕುಟುಂಬ ಹೊಸ ಉದ್ದಿಮೆ ಆರಂಭಿಸಿದಾಗ ಊರಿಗೆ ಮರಳಿ ಬಂದು ಉದ್ಯಮದಲ್ಲಿ ತೊಡಗಿಕೊಂಡಿದ್ದ.

ಗೂಗಲ್ ಸರ್ಚ್ ಮುಲಕವೇ ಆರ್ಸೆನಿಕ್‌ ಟ್ರೈ ಆಕ್ಸೈಡ್ ಬಗ್ಗೆ ಆರೋಪಿ ಮಾಹಿತಿ ಪಡೆದಿದ್ದ. ಜೊತೆಗೆ ಸಾಮಾಜಿಕ ಜಾಲತಾಣ, ಸಿನೆಮಾ ಅಥವಾ ಗೆಳೆಯರ ಮೂಲಕ ಈ ವಿಷ ಪದಾರ್ಥದ ಕುರಿತು ಮಾಹಿತಿ ದೊರೆತಿರಬಹುದೇ ಎಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Vishwa News 24

Recent Posts

ಎಂಆರ್‌ಪಿಎಲ್‌ ಸ್ಫೋಟ ಪ್ರಕರಣ: ಮೃತರ ಕುಟುಂಬಕ್ಕೆ ಗರಿಷ್ಠ ಪರಿಹಾರ : ಭರತ್‌ ಶೆಟ್ಟಿ ಆಗ್ರಹ -vishwanews24

ಎಂಆರ್‌ಪಿಎಲ್‌ ಸ್ಫೋಟ ಪ್ರಕರಣ: ಮೃತರ ಕುಟುಂಬಕ್ಕೆ ಗರಿಷ್ಠ ಪರಿಹಾರ : ಭರತ್‌ ಶೆಟ್ಟಿ ಆಗ್ರಹ ಮಂಗಳೂರು: ಸ್ಫೋಟದ ನಿಖರ ಕಾರಣ…

3 minutes ago

ಮಡ್‌ಗಾಂವ್‌ – ಮಂಗಳೂರು ‘ವಂದೇ ಭಾರತ್‌’ ರೈಲು ಬೆಂಗಳೂರಿಗೆ ವಿಸ್ತರಣೆ -vishwanews24

ಮಡ್‌ಗಾಂವ್‌ - ಮಂಗಳೂರು 'ವಂದೇ ಭಾರತ್‌' ರೈಲು ಬೆಂಗಳೂರಿಗೆ ವಿಸ್ತರಣೆ ಮಂಗಳೂರು/ಉಡುಪಿ: ಈ ಹಿಂದೆ ಮಂಗಳೂರು ಸೆಂಟ್ರಲ್‌-ಮಡ್‌ಗಾಂವ್‌ ನಡುವೆ ಓಡುತ್ತಿದ್ದ…

1 hour ago

ಅಕ್ಟೋಬರ್ 11ರಿಂದ 20ರ ವರೆಗೆ KSRTC ಯಿಂದ ವಿಶೇಷ ಪ್ಯಾಕೇಜ್ ಪ್ರವಾಸ -vishwanews24

ಅಕ್ಟೋಬರ್ 11ರಿಂದ 20ರ ವರೆಗೆ KSRTC ಯಿಂದ ವಿಶೇಷ ಪ್ಯಾಕೇಜ್ ಪ್ರವಾಸ ಉಡುಪಿ: ಕ.ರಾ.ರ.ಸಾ.ನಿಗಮ ಮಂಗಳೂರು ವಿಭಾಗವು ದಸರಾ ಪ್ರಯುಕ್ತ…

2 hours ago

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ 62 ರೂ. ಏರಿಕೆ -vishwanews24

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ 62 ರೂ. ಏರಿಕೆ ನವದೆಹಲಿ: ಹಬ್ಬದ ಹೊಸ್ತಿಲಲ್ಲೇ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಗಣನೀಯ…

2 hours ago

ಮಂಗಳೂರು: ಎಂಆರ್ ಪಿಎಲ್ ದುರಂತ : ಕಂಪನಿ ಅಧಿಕಾರಿಗಳ ವಿರುದ್ಧ ಎಫ್ಐಆರ್ -vishwanews24

ಮಂಗಳೂರು: ಎಂಆರ್ ಪಿಎಲ್ ದುರಂತ : ಕಂಪನಿ ಅಧಿಕಾರಿಗಳ ವಿರುದ್ಧ ಎಫ್ಐಆರ್ ಮಂಗಳೂರು : ಎಂಆರ್ ಪಿಎಲ್ ತೈಲ ಸ್ಥಾವರ…

2 hours ago

ಎಂಆರ್‌ಪಿಎಲ್‌ ದುರಂತ: ಸಮಗ್ರ ತನಿಖೆಗೆ ಐವನ್ ಡಿʼಸೋಜಾ ಆಗ್ರಹ -vishwanews24

ಎಂಆರ್‌ಪಿಎಲ್‌ ದುರಂತ: ಆಸ್ತಿ-ಪಾಸ್ತಿ ನಷ್ಟಕ್ಕೆ ಸೂಕ್ತ ಪರಿಹಾರ , ಸಮಗ್ರ ತನಿಖೆಗೆ ಐವನ್ ಡಿʼಸೋಜಾ ಆಗ್ರಹ ಮಂಗಳೂರು :ಎಂಆರ್‌ಪಿಎಲ್‌ನಲ್ಲಿ ಸಂಭವಿಸಿದ…

2 hours ago