Featured

ಉಡುಪಿ : ಇಂಡಿಯನ್ ಜರ್ನಲಿಸ್ಟ್ ಕಾಂಪೆಡಿಯಂ ದೆಹಲಿ ವತಿಯಿಂದ ಜನಸೇವಾ ಸದ್ಭಾವನ ಪುರಸ್ಕಾರ್ ಪ್ರಶಸ್ತಿಗೆ ದಿವಾಕರ ಬಿ ಶೆಟ್ಟಿ ಕಳತ್ತೂರು ಮತ್ತು ಮೊಹಮ್ಮದ್ ಫಾರೂಕ್ ಚಂದ್ರನಗರ ಆಯ್ಕೆ – Vishwanews24

ಉಡುಪಿ : ಇಂಡಿಯನ್ ಜರ್ನಲಿಸ್ಟ್ ಕಾಂಪೆಡಿಯಂ ದೆಹಲಿ ವತಿಯಿಂದ ಜನಸೇವಾ ಸದ್ಭಾವನ ಪುರಸ್ಕಾರ್ ಪ್ರಶಸ್ತಿಗೆ ದಿವಾಕರ ಬಿ ಶೆಟ್ಟಿ ಕಳತ್ತೂರು ಆಯ್ಕೆ

ಉಡುಪಿ : ಇಂಡಿಯನ್ ಜರ್ನಲಿಸ್ಟ್ ಕಾಂಪೆಡಿಯಂ ದೆಹಲಿ ವತಿಯಿಂದ ಏಪ್ರಿಲ್ 20 ರಂದು ಗೋವಾದ ಪಂಚತಾರ ಹೋಟೆಲ್ ವಿವಿಟಾ ತಾಜ್ ಸಭಾಂಗಣದಲ್ಲಿ ನಡೆಯುವ ಐ. ಜೆ.ಸಿ ಹಾಗೂ ಇ.ಜೆ.ಎಸ್.ಐ ರಾಷ್ಟೀಯ ಸಮ್ಮೇಳನದಲ್ಲಿ ರಾಷ್ಟೀಯ ಮಟ್ಟದಲ್ಲಿ ಸಮಾಜ ಸೇವಕರಿಗೆ ಕೊಡಮಾಡುವ ಜನಸೇವಾ ಸದ್ಭಾವನ ಪುರಸ್ಕಾರ್ ರಾಷ್ಟೀಯ ಪ್ರಶಸ್ತಿಯನ್ನು ಜನಸಂಪರ್ಕ ಜನಸೇವಾ ವೇದಿಕೆ ಕಾಪು ಅಧ್ಯಕ್ಷರಾದ ದಿವಾಕರ ಬಿ ಶೆಟ್ಟಿ ಕಳತ್ತೂರು ಆಯ್ಕೆಯಾಗಿದ್ದಾರೆ ಎಂದು ಇಂಡಿಯನ್ ಜರ್ನಲಿಸ್ಟ್ ಕಾಂಪೆಡಿಯಂ ಸಂಸ್ಥೆ ಇದರ ಅಧ್ಯಕ್ಷರಾದ ಗ್ಯಾನ್ ಪ್ರಕಾಶ್ ದೆಹಲಿ ಇವರು ಪತ್ರಿಕಾ ಮೂಲಕ ತಿಳಿಸಿದ್ದಾರೆ ಹಾಗೂ ಈ ಸಮಾರಂಭದಲ್ಲಿ ಗೋವಾದ ಸಚಿವರು ಕೇಂದ್ರ ಸಚಿವರು ಹಾಗೂ ಅನೇಕ ಗಣ್ಯಾತಿ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆಂದು ಅವರು ತಿಳಿಸಿದ್ದಾರೆ.

ದಿವಾಕರ ಬಿ ಶೆಟ್ಟಿ ಕಳತ್ತೂರು ಇವರು ಕಳೆದ 30 ವರ್ಷಗಳಿಂದ ಕಾಪು ಕಳತ್ತೂರು ಪರಿಸರದಲ್ಲಿ 1000 ಕ್ಕೂ ಮಿಕ್ಕಿ ಸರಕಾರಿ ಸೌಲಭ್ಯ ಜನರಿಗೆ ತಲುಪುವ ಹಾಗೆ ವ್ಯವಸ್ಥೆ ಮಾಡಿದ್ದಾರೆ ಅದಲ್ಲದೆ ನೂರಾರು ವಿದ್ಯಾರ್ಥಿಗಳಿಗೆ ವಿವಿಧ ಸಂಸ್ಥೆಗಳಿಂದ ವಿದ್ಯಾರ್ಥಿ ವೇತನ,ವಿದ್ಯಾಬ್ಯಾಸಕ್ಕೆ ಸಹಾಯ ಮಾಡಿದ್ದಾರೆ ವಿವಿಧ ಸಂಘಟನೆಯಿಂದ ಬಡ ಜನರಿಗೆ ಮನೆ ಕಟ್ಟುವಲ್ಲಿ ಸಹಾಯ ಮಾಡಿರುತ್ತಾರೆ ಬಡವರ ಕಷ್ಟ ದಲ್ಲಿ ಸದಾ ಬಾಗಿಯಾಗುತ್ತಾರೆ.

ಹವ್ಯಾಸಿ ಪತ್ರಕರ್ತರಾಗಿದ್ದು ಕಾಪು ದ್ವಾದಶಿ ಪಬ್ಲಿಸಿಟಿ ನ್ಯೂಸ್ ಸರ್ವಿಸ್ ಇದರ ಆಡಳಿತ ನಿರ್ದೇಶಕರಾಗಿದ್ದು ಗ್ರಾಮೀಣ ಮಟ್ಟದ ಅಂಚೆ ಇಲಾಖೆಯಲ್ಲಿ ಪೋಸ್ಟ್ ಮಾಸ್ಟರ್ ಆಗಿ ಸೇವೆ ನಿರ್ವಹಿಸುತ್ತಿದ್ದಾರೆ.

ಸಮಾಜ ಸೇವೆಗಾಗಿ ನವದೆಹಲಿಯಲ್ಲಿ ರಾಷ್ಟ್ರಿಯ ಪ್ರಶಸ್ತಿ ಗ್ಲೋರಿ ಆಫ್ ಇಂಡಿಯಾ ಹಾಗೂ ಕೇರಳದಲ್ಲಿ ಕೈರಾಲಿ ಪ್ರಕಾಶನ ಸಮಾಜ ರತ್ನ ಪ್ರಶಸ್ತಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಗೌರವ ಸನ್ಮಾನ ಮಾಡಿದ್ದರು.

ಇಂಡಿಯನ್ ಜರ್ನಲಿಸ್ಟ್ ಕಾಂಪೆಡಿಯಂ ದೆಹಲಿ ವತಿಯಿಂದ ಜನಸೇವಾ ಸದ್ಭಾವನ ಪುರಸ್ಕಾರ್ ರಾಷ್ಟ್ರಿಯ ಪ್ರಶಸ್ತಿಗೆ ಮೊಹಮ್ಮದ್ ಫಾರೂಕ್ ಚಂದ್ರನಗರ ಆಯ್ಕೆ

ಇಂಡಿಯನ್ ಜರ್ನಲಿಸ್ಟ್ ಕಾಂಪೆಡಿಯಂ ದೆಹಲಿ ವತಿಯಿಂದ ಏಪ್ರಿಲ್ 20 ರಂದು ಗೋವಾದ ಪಂಚಾತಾರ ಹೋಟೆಲ್ ವಿವಿಟಾ ತಾಜ್ ಸಭಾಂಗಣದಲ್ಲಿ ನಡೆಯುವ ಐ.ಜೆ.ಸಿ ಹಾಗೂ ಇ.ಜೆ.ಎಸ್.ಐ ರಾಷ್ಟ್ರೀಯ ಸಮ್ಮೇಳನದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಮಾಜ ಸೇವಕರಿಗೆ ಕೊಡಮಾಡುವ ಜನಸೇವಾ ಸದ್ಭಾವನ ಪುರಸ್ಕಾರ್ ರಾಷ್ಟ್ರೀಯ ಪ್ರಶಸ್ತಿಯನ್ನು ಕಾಪು ಸಮಾಜ ಸೇವಾ ವೇದಿಕೆ ಅಧ್ಯಕ್ಷರಾದ ಮೊಹಮ್ಮದ್ ಫಾರೂಕ್ ಚಂದ್ರನಗರ ಆಯ್ಕೆಯಾಗಿದ್ದಾರೆ ಎಂದು ಇಂಡಿಯನ್ ಜರ್ನಲಿಸ್ಟ್ ಕಾಂಪೆಡಿಯಂ ಸಂಸ್ಥೆ ಇದರ ಅಧ್ಯಕ್ಷರಾದ ಗ್ಯಾನ್ ಪ್ರಕಾಶ್ ದೆಹಲಿ ಇವರು ಪತ್ರಿಕಾ ಮೂಲಕ ತಿಳಿಸಿದ್ದಾರೆ ಹಾಗೂ ಈ ಸಮಾರಂಭದಲ್ಲಿ ಗೋವಾದ ಸಚಿವರು ಕೇಂದ್ರ ಸಚಿವರು ಹಾಗೂ ಅನೇಕ ಗಣ್ಯಾತಿ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆಂದು ಅವರು ತಿಳಿಸಿದ್ದಾರೆ

ಮೊಹಮ್ಮದ್ ಫಾರೂಕ್ ಉದ್ಯಮಿಯಾಗಿದ್ದು ಸ್ನೇಹ ಜೀವಿಯಾಗಿ ಕಾಪು ಪರಿಸರದ ಸಮಾಜ ಸೇವಕರಾಗಿ ಎಲ್ಲರ ಗಮನ ಸೆಳೆದು ನೂರಾರು ಕಡೆ ಗೌರವ ಸನ್ಮಾನ ಪಡೆದುಕೊಂಡಿರುತ್ತಾರೆ ಈಗಾಗಲೇ ಏಶ್ಯನ್ ಫೆಸೀಫಿಕ್ ಗೋಲ್ಡ್ ಸ್ಟಾರ್ ರಾಷ್ಟ್ರಿಯ ಪ್ರಶಸ್ತಿ,ಕರ್ನಾಟಕ ಸರಕಾರ ಕೊಡಮಾಡುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕೇರಳ-ಕರ್ನಾಟಕ ರಾಜ್ಯದ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ರಾಜ್ಯ ಜಾನಪದ ಪರಿಷತ್ ಬೆಂಗಳೂರು ವತಿಯಿಂದ ಸಾಧಕ ರತ್ನ ಪ್ರಶಸ್ತಿ ಕಾಸರಗೋಡು ಕೈರಳಿ ಪ್ರಕಾಶನ ಇವರಿಂದ ಸಮಾಜ ರತ್ನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪಡೆದಿರುತ್ತಾರೆ.

Vishwa News 24

Recent Posts

ಉಡುಪಿ: ಆಸ್ತಿಯನ್ನು ಬಲವಂತವಾಗಿ ತನ್ನ ಹೆಸರಿಗೆ ವರ್ಗಾಯಿಸಿಕೊಂಡು ವೃದ್ಧ ಪೋಷಕರನ್ನು ಮನೆಯಿಂದ ಹೊರಹಾಕಿದ ಮಗ – vishwanews24

ಉಡುಪಿ: ಆಸ್ತಿಯನ್ನು ಬಲವಂತವಾಗಿ ತನ್ನ ಹೆಸರಿಗೆ ವರ್ಗಾಯಿಸಿಕೊಂಡು ವೃದ್ಧ ಪೋಷಕರನ್ನು ಮನೆಯಿಂದ ಹೊರಹಾಕಿದ ಮಗ ಉಡುಪಿ: ತಾಯಿಯ ಹೆಸರಿನಲ್ಲಿದ್ದ ಆಸ್ತಿಯನ್ನು…

1 hour ago

ವಿಟ್ಲ : ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ ಹಾಗೂ ವಿದ್ಯುತ್ ಕಂಬ: ದಂಪತಿ ಅಪಾಯದಿಂದ ಪಾರು – vishwanews24

ವಿಟ್ಲ : ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ ಹಾಗೂ ವಿದ್ಯುತ್ ಕಂಬ: ದಂಪತಿ ಅಪಾಯದಿಂದ ಪಾರು ವಿಟ್ಲ: ಮರ ಹಾಗೂ…

3 hours ago

ಮಂಗಳೂರು: ಉದ್ಯಮಿಯ ಕಾರು ಅಡ್ಡಗಟ್ಟಿ ಕಾರು ಸಹಿತ ಚಿನ್ನಾಭರಣ ದರೋಡೆ – vishwanews24

ಮಂಗಳೂರು: ಉದ್ಯಮಿಯ ಕಾರು ಅಡ್ಡಗಟ್ಟಿ ಕಾರು ಸಹಿತ ಚಿನ್ನಾಭರಣ ದರೋಡೆ ಮಂಗಳೂರು: ಕೇರಳ ಮೂಲದ ಉದ್ಯಮಿಯೊಬ್ಬರ ಕಾರನ್ನು ಅಡ್ಡಗಟ್ಟಿ ಕಾರು…

3 hours ago

ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿ ಎಂ ಗುಜ್ಜಾಡಿ ಪ್ರಭಾಕರ್ ನಾಯಕ್ – vishwanews24

ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿ ಎಂ ಗುಜ್ಜಾಡಿ ಪ್ರಭಾಕರ್ ನಾಯಕ್ ಜಿ…

3 hours ago

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ‘ನುವಾ’ ವಜ್ರಾಭರಣ ಅನಾವರಣ – vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ‘ನುವಾ’ ವಜ್ರಾಭರಣ ಅನಾವರಣ ಉಡುಪಿ: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಮೈನ್ ಬ್ರಾಂಡಿನ…

3 hours ago

ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳನಕಾರಿ ಹೇಳಿಕೆ: ವಿಠಲ ಗೌಡ ವಿರುದ್ಧ ಅರೆಸ್ಟ್​​​​​​ ವಾರಂಟ್ – vishwanews24

ಧರ್ಮಸ್ಥಳ ಪ್ರಕರಣ : ವಿಠಲ್‌ ಗೌಡ ವಿರುದ್ಧ ಅರೆಸ್ಟ್‌ ವಾರಂಟ್:‌ ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…

2 days ago