Featured

ಉಡುಪಿ: ಇಂದು ಶೀರೂರು ಮಠದ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಪುರಪ್ರವೇಶ ಮೆರವಣಿಗೆ: ಸಂಚಾರ ನಿಯಮದಲ್ಲಿ ಬದಲಾವಣೆ – vishwanews24

ಉಡುಪಿ: ಇಂದು ಶೀರೂರು ಮಠದ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಪುರಪ್ರವೇಶ ಮೆರವಣಿಗೆ: ಸಂಚಾರ ನಿಯಮದಲ್ಲಿ ಬದಲಾವಣೆ

ಉಡುಪಿ: ಶೀರೂರು ಮಠದ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಪುರಪ್ರವೇಶದ ಮೆರವಣಿಗೆ ನಡೆಯುವ ಹಿನ್ನೆಲೆಯಲ್ಲಿ ಇಂದು ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಮೆರವಣಿಗೆಯು ಶಾರದಾ ಕಲ್ಯಾಣ ಮಂಟಪದಿಂದ ರಾ.ಹೆ-169(ಎ) ರ ಮಾರ್ಗವಾಗಿ ಶಿರಿಬೀಡು ಜಂಕ್ಷನ್ ತಲುಪಿ ಅಲ್ಲಿಂದ ಸರ್ವೀಸ್ ಬಸ್ ನಿಲ್ದಾಣ-ತ್ರಿವೇಣಿ ಜಂಕ್ಷನ್- ಕನಕದಾಸ ರಸ್ತೆ ಮಾರ್ಗವಾಗಿ ಶೀರೂರು ಮಠ ತಲುಪಲಿದೆ. ಆದ್ದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡೆತಡೆಗಳು ಉಂಟಾಗುವುದರಿಂದ ವಾಹನ ಸಂಚಾರದಲ್ಲಿ ಈ ಕೆಳಕಂಡಂತೆ ವಾಹನಗಳ ಸಂಚಾರ ನಿಷೇಧ ಮತ್ತು ಬದಲಿ ಮಾರ್ಗದಲ್ಲಿ ಸಂಚರಿಸಲು ಸೂಚಿಸಲಾಗಿದೆ. ಇಂದು ಮಧ್ಯಾಹ್ನ 1 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಈ ಆದೇಶ ಜಾರಿಯಲ್ಲಿರಲಿದೆ.

ವಾಹನ ಸಂಚಾರದ ಬದಲಿ ಮಾರ್ಗ ಈ ಕೆಳಕಂಡಂತಿದೆ:

ಮಣಿಪಾಲದಿಂದ ಉಡುಪಿ ನಗರಕ್ಕೆ ಹೋಗುವಂತಹ ವಾಹನಗಳು ಎಂ.ಜಿ.ಎಂ ಎದುರಿನ ಸುನಾಗ್ ಆಸ್ಪತ್ರೆ ಬಳಿ ಎಡ ತಿರುವು ಪಡೆದು ಸುದೀಂದ್ರ ಕಲ್ಯಾಣ ಮಂಟಪ ಮಾರ್ಗವಾಗಿ ಎಸ್.ಕೆ.ಎಂ ಬಳಿ ಎಡ ತಿರುವು ಪಡೆದು ಬೀಡಿನಗುಡ್ಡೆ-ಚಿಟ್ನಾಡಿ-ಅಮ್ಮಣ್ಣಿ ರಾಮಣ್ಣ ಹಾಲ್ ಮುಂದಿನ ರಸ್ತೆಯಿಂದ ಮಿಷನ್ ಕಂಪೌಂಡ್ -ಜೋಡುಕಟ್ಟೆ ತಲುಪಿ ಉಡುಪಿ ನಗರಕ್ಕೆ ತೆರಳುವುದು.

ಶಿರಬೀಡು ಜಂಕ್ಷನ್ ನಿಂದ ಕಿದಿಯೂರು ಹೋಟೆಲ್ ಮೂಲಕ ಸರ್ವೀಸ್ ಬಸ್ ನಿಲ್ಯಾಣದ ವರೆಗಿನ ಏಕಮುಖ ಸಂಚಾರ ವ್ಯವಸ್ಥೆಯ ರಸ್ತೆಯಲ್ಲಿ ಮೆರವಣಿಗೆ ಪ್ರವೇಶಿಸುವ ಸಮಯದಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಮಂಗಳೂರು ಕಡೆಯಿಂದ ಉಡುಪಿ ನಗರಕ್ಕೆ ಪ್ರವೇಶಿಸುವ ಎಲ್ಲಾ ವಾಹನಗಳು ಒಲ್ಡ್ ಡಯಾನ ಸರ್ಕಲ್ ನಿಂದ ಮಿತ್ರ ಪ್ರಿಯಾ ಜಂಕ್ಷನ್ ಮುಖೇನಾ ಚಿತ್ತರಂಜನ್ ಸರ್ಕಲ್, ಸಂಸ್ಕೃತ ಕಾಲೇಜ್ ಜಂಕ್ಷನ್, ಜಾಮೀಯಾ ಮಸೀದಿ ಜಂಕ್ಷನ್ ನಿಂದ ಎಡತಿರುವು ಪಡೆದು ಸರ್ವೀಸ್ ಬಸ್ ನಿಲ್ದಾಣ ತಲುಪುವುದು.

ಈ ನಿಷೇಧವು ವಿವಿಐಪಿ ವಾಹನ, ಸರಕಾರಿ ವಾಹನ ಮತ್ತು ಎಲ್ಲಾ ರೀತಿಯ ತುರ್ತು ಸೇವೆಯ ವಾಹನಗಳಿಗೆ ಅನ್ವಯಿಸುವುದಿಲ್ಲ.

Vishwa News 24

Recent Posts

ಉಡುಪಿ : ಮೇ 5 ರಂದು ನೇರ ಸಂದರ್ಶನ -vishwanews24

ಉಡುಪಿ : ಮೇ 5 ರಂದು ನೇರ ಸಂದರ್ಶನ ಉಡುಪಿ : ಉದ್ಯೋಗ ಆಕಾಂಕ್ಷಿಗಳಿಗೆ ಮೇ 5 ರಂದು ಬೆಳಗ್ಗೆ…

7 days ago

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಡೈಮಂಡ್ಸ್ ಆಭರಣಗಳ ಪ್ರದರ್ಶನಕ್ಕೆ ಚಾಲನೆ – vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಡೈಮಂಡ್ಸ್ ಆಭರಣಗಳ ಪ್ರದರ್ಶನಕ್ಕೆ ಚಾಲನೆ ಉಡುಪಿ : ಮಾಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯ…

7 days ago

ಬಿಜೆಪಿ ಬಡ, ಮಧ್ಯಮ ವರ್ಗದವರ ಬದುಕನ್ನು ದುರ್ಬಲ ಮಾಡಲು ಹೊರಟಿದೆ : ಈಶ್ವರ್ ಖಂಡ್ರೆ – vishwanews24

ಮೋದಿ ದುರಾಡಳಿತದ ವಿರುದ್ಧ ಮಾತಾಡಲು ಬಿಜೆಪಿಗರಿಗೆ ಸವಾಲು.. ಬಿಜೆಪಿಯ ಬಡಜನ ವಿರೋಧಿ ಬಣ್ಣ ಮತ್ತೆ ಬಯಲು.. ವಾಣಿಜ್ಯ ಸಿಲಿಂಡರ್ ದರ…

7 days ago

ಪತ್ನಿಯ ಅಕ್ರಮ ಸಂಬಂಧ, ಕಿರುಕುಳಕ್ಕೆ ಬೇಸತ್ತು ಗಂಡ ನೇಣಿಗೆ ಶರಣು – vishwanews24

ಪತ್ನಿಯ ಅಕ್ರಮ ಸಂಬಂಧ, ಕಿರುಕುಳಕ್ಕೆ ಬೇಸತ್ತು ಗಂಡ ನೇಣಿಗೆ ಶರಣು ಕಾರವಾರ: ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡ…

7 days ago

ಕೌಟುಂಬಿಕ ಕಲಹ : ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಂದೆ  – vishwanews24

ಮನೆಯಲ್ಲಿದ್ದ ಚಿನ್ನಾಭರಣ ಸಮೇತ ಪತ್ನಿ ಪರಾರಿ: ಮಕ್ಕಳಿಬ್ಬರನ್ನು ಕೊಲೆಗೈದು ನೇಣಿಗೆ ಶರಣಾದ ಪತಿ ಕುಣಿಗಲ್ : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ…

7 days ago

ನಿಮ್ಮ ಮೊಬೈಲ್‌ನಲ್ಲಿ ಅಲರ್ಟ್ ಸಂದೇಶ, ಸೈರನ್ ಮೊಳಗಿದ್ರೆ ಭಯಪಡಬೇಡಿ.. !! – vishwanews24

NDMAಯಿಂದ ಬರುತ್ತೆ ತುರ್ತು ಎಚ್ಚರಿಕೆ ಸಂದೇಶ.. ನಿಮ್ಮ ಮೊಬೈಲ್‌ನಲ್ಲಿ ಅಲರ್ಟ್ ಸಂದೇಶ, ಸೈರನ್ ಮೊಳಗಿದ್ರೆ ಭಯಪಡಬೇಡಿ.. ನಿಮ್ಮ ಮೊಬೈಲ್‌ ಫೋನ್‌…

7 days ago