ಉಡುಪಿ: ಇಂದು ಸಂಜೆ ಆಕಾಶದಲ್ಲಿ ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಲಿದೆ. ಅದು ಗುರು-ಶುಕ್ರ ಗ್ರಹಗಳು ತಮ್ಮ ಮೋಡಿಯನ್ನು ಮೆರೆಯಲಿದ್ದಾವೆ. ಇಂದು ಸಂಜೆ ವೇಳೆಗೆ ಪಶ್ಚಿಮದ ಆಕಾಶದಲ್ಲಿ ಗುರು-ಶುಕ್ರರ ಜೋಡಿ ಅರ್ಧ ಡಿಗ್ರಿ ಸಮೀಪದಿಂದ ಕಾಣಿಸಲಿದೆ.
ಇದು ಬರಿಗಣ್ಣಿಗೆ ಕಾಣುವ ಅತಿ ಸುಂದರ ಗ್ರಹಗಳ ಜೋಡಿಯಾಟವಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವಂತ ಭೌತಶಾಸ್ತ್ರಜ್ಞ ಡಾ.ಎ.ಪಿ ಭಟ್ ಅವರು, ಕೆಲ ದಿನಗಳಿಂದ ಪಶ್ಚಿಮದ ಆಕಾಶದಲ್ಲಿ ಸಂಜೆಯಾಗುತ್ತಿದ್ದಂತೆ ಸೂರ್ಯಸ್ತಕ್ಕೆ ಹಿಡಿದ ಅವಳಿ ದೀವಟಿಯೋ ಎನ್ನುವಂತೆ ಅಕ್ಕಪಕ್ಕದಲ್ಲಿ ಗುರು ಮತ್ತು ಶುಕ್ರ ಗ್ರಹ ಹೊಳೆಯುತ್ತಿವೆ. ಶುಕ್ರ ಭೂಮಿಯಿಂದ ಈಗ ಸುಮಾರು 20.5 ಕೋಟಿ ಕಿಲೋ ಮೀಟರ್ ದೂರದಲ್ಲಿದ್ದರೇ, ಗುರು ಭೂಮಿಯಿಂದ 86 ಕೋಟಿ ಕಿಲೋ ಮೀಟರ್ ದೂರದಲ್ಲಿದೆ ಎಂದು ತಿಳಿಸಿದ್ದಾರೆ.
ಗುರು ಗ್ರಹದ ಗಾತ್ರ ಶುಕ್ರನಿಗಿಂತ ಸುಮಾರು 1,400 ಪಟ್ಟು ದೊಡ್ಡದು. ಆದರೂ ಶುಕ್ರ ಫಳಪಳ ಹೊಳೆಯುತ್ತಿದೆ. ಶುಕ್ರನ ಹೊಳೆಪಿಗೆ ಆ ಗ್ರಹದ ವಾತಾವರಣವೇ ಕಾರಣ. ಈ ಗ್ರಹದ ವಾತಾವರಣದಲ್ಲಿ ಕಾರ್ಬನ್ ಆಕ್ಸೈಡ್ ಹಾಗೂ ಸಲ್ಫೆರ್ ಡೈ ಆಕ್ಸೈಡ್ ನ ತೆಳು ಕವಚ ಸುಮಾರು 80 ಅಂಶ ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತದೆ ಎಂದು ಹೇಳಿದ್ದಾರೆ.
ಇಂದು ಸಂಜೆ ಗುರು ಹಾಗೂ ಶುಕ್ರ ಗ್ರಹಗಳು ಸಮೀಪದಿಂದ ಜೋಡಿಯ ರೀತಿಯಲ್ಲಿ ನಭೋಮಂಡಲದಲ್ಲಿ ಕಾಣಲಿದ್ದಾವೆ. ಜನರು ಈ ಬೆರಗಿನ ಮೋಡಿಯನ್ನು ಕಣ್ ತುಂಬಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.
ತಪ್ಪಿದ ಭಾರಿ ದುರಂತ: 4 ಗಂಟೆಗಳ ಕಾಲ ಆಗಸದಲ್ಲೇ ಸುತ್ತಾಟ ; ಹುಬ್ಬಳ್ಳಿ ತಲುಪಬೇಕಿದ್ದ ವಿಮಾನ ಬೆಂಗಳೂರಲ್ಲಿ ಲ್ಯಾಂಡ್ ಹುಬ್ಬಳ್ಳಿ:…
ಮುಂದಿನ ತಿಂಗಳು ಒಳ್ಳೆಯ ಮುಹೂರ್ತ ನೋಡಿ ಹೊಸ ರಾಜಕೀಯ ಪ್ರಾರಂಭ ಮಾಡ್ತೇನೆ: ಯತ್ನಾಳ್ ವಿಜಯಪುರ: ಮುಂದಿನ ತಿಂಗಳು ಒಳ್ಳೆಯ ಮುಹೂರ್ತ…
ನಾವು ಮಹಿಳಾ ಮೀಸಲಾತಿ ಪರ ಇದ್ದೇವೆ; ಆದರೆ ಮೋದಿ ಅವರ ಹೇಳಿಕೆಯನ್ನ ವಿರೋಧಿಸುತ್ತೇವೆ : ಖರ್ಗೆ ಬೆಂಗಳೂರು: ನಾವು ಮಹಿಳಾ…
ಉಡುಪಿ: ಪೆರ್ಡೂರು ಅನಂತಪದ್ಮನಾಭ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾಗಿ ಕೆ. ಶಾಂತಾರಾಮ ಸೂಡ ಆಯ್ಕೆ ಉಡುಪಿ: ಮಹತೋಭಾರ ಪೆರ್ಡೂರು ಅನಂತಪದ್ಮನಾಭ…
ಎರ್ಮಾಳು: ಗೂಡ್ಸ್ ವಾಹನಕ್ಕೆ ರಾಂಗ್ ಸೈಡ್‌ನಿಂದ ಬಂದ ಸ್ಕೂಟಿ ಢಿಕ್ಕಿ ; ಸವಾರ ಸಾವು ಪಡುಬಿದ್ರಿ : ರಾಂಗ್ ಸೈಡ್‌ನಿಂದ…
ಪುತ್ತೂರು: ಡಿವೈಡರ್ ಗೆ ಬೈಕ್ ಡಿಕ್ಕಿ ; ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ನಗರದ ಪಡೀಲ್ ಬಳಿ ಎರಡು ಬೈಕ್‌ಗಳ…