Featured

ಉಡುಪಿ : ಇದು ಮೋದಿ ಕಿ ಗ್ಯಾರಂಟಿ ಅಲ್ಲ, ಜನರಿಗೆ ಮತ್ತೊಮ್ಮೆ ಮಂಕು ಬೂದಿ- ಕೆ.ಕೃಷ್ಣಮೂರ್ತಿ ಆಚಾರ್ಯ – vishwanews24

ಉಡುಪಿ : ಇದು ಮೋದಿ ಕಿ ಗ್ಯಾರಂಟಿ ಅಲ್ಲ, ಜನರಿಗೆ ಮತ್ತೊಮ್ಮೆ ಮಂಕು ಬೂದಿ- ಕೆ.ಕೃಷ್ಣಮೂರ್ತಿ ಆಚಾರ್ಯ

ಉಡುಪಿ: ಗ್ಯಾರಂಟಿ ಹೆಸರಿನಲ್ಲಿ ಕಾಂಗ್ರೆಸ್ ನೀಡಿದ ಜನಕಲ್ಯಾಣ ಯೋಜನೆಗಳನ್ನು ಉಚಿತ ಯೋಜನೆಗಳು, ಬಿಟ್ಟಿ ಭಾಗ್ಯಗಳು ಎಂದು ಹಿಯಾಳಿಸುತ್ತಾ ಭಾರತ ಪಾಕಿಸ್ತಾನ, ಶ್ರೀಲಂಕಾ ರೀತಿ ಆಗುತ್ತದೆ ಎನ್ನುತ್ತಿದ್ದ ಬಿಜೆಪಿ ಈಗ ಅದೇ ಗ್ಯಾರಂಟಿ ಮಾದರಿಯಲ್ಲಿ ಘೋಷಣೆಗಳನ್ನು ಮಾಡುತ್ತಿದೆ.

ಉಚಿತ ಯೋಜನೆಗಳಿಂದ ಆರ್ಥಿಕತೆ ಹಾಳಾಗುತ್ತದೆ ಎಂದಿದ್ದ ಇದೇ ನರೇಂದ್ರ ಮೋದಿ ಈಗ “ಮೋದಿ ಕಿ ಗ್ಯಾರಂಟಿ” ಘೋಷಿಸಿದ್ದಾರೆ. ಇದು ನರೆಂದ್ರ ಮೋದಿ ಕಿ ಗ್ಯಾರಂಟಿ ಅಲ್ಲ ಇದು ಜನರಿಗೆ ಮತ್ತೋಮ್ಮೆ ಮಂಕು ಬೂದಿ

“ಹಿಪಾಕ್ರಸಿ” ಎಂಬುದಕ್ಕೆ ಪರ್ಯಾಯ ಪದವನ್ನು ಹುಡುಕುವುದಾದ್ರೆ ಅದಕ್ಕೆ ” ನರೇಂದ್ರ ಮೋದಿ” ಹೆಸರೇ ಸೂಕ್ತ ಅಲ್ಲವೇ. ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಈ ಹಿಂದೆಯೂ ಐದು ವರ್ಷದಲ್ಲಿ ಅನೇಕ ಯೋಜನೆಗಳನ್ನು ನುಡಿದಂತೆ ನಡೆದು ಅನುಷ್ಠಾನ ಮಾಡಿದ್ದಾರೆ. ಅದು ಜನರಿಗೆ ತಲುಪಿದೆ. ಇದು ಎಲ್ಲಾ ರಾಜ್ಯಗಳಿಗೂ ಮಾದರಿಯಾಗಿದೆ. ಅದೇ ರೀತಿ ಈ ಬಾರಿಯೂ ಮುಖ್ಯಮಂತ್ರಿ ಆಗಿ ನಮ್ಮ ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ಹೇಳಿದ ಕಾಂಗ್ರೆಸ್ ಗ್ಯಾರಂಟಿಗಳನ್ನು ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದು ನೀಡುತ್ತಿದೆ. ಆದರೆ ನರೇಂದ್ರ ಮೋದಿಯವರು ಕಳೆದ 9.5 ವರ್ಷದಿಂದ ಹೇಳಿದ ಯಾವುದೇ ಒಂದು ಯೋಜನೆಗಳು ಜನರಿಗೆ ತಲುಪಿಲ್ಲ. ಚುನಾವಣಾ ಪೂರ್ವದಲ್ಲಿ ಅನೇಕ ಭರವಸೆಗಳನ್ನು ಬಿಜೆಪಿ ಸಭೆಯಲ್ಲಿ,ರಾಜಕೀಯ ಭಾಷಣದಲ್ಲಿ ಬಣ್ಣ ಬಣ್ಣದ ಭಾಷಣಗಳನ್ನು ಮಾಡಿದ ನರೇಂದ್ರ ಮೋದಿ ಅವರು ಗೆದ್ದ ನಂತರ ಭಾಷಣದಲ್ಲಿ ಹೇಳಿದ ಯಾವುದನ್ನು ಜನರಿಗೆ ನೀಡಿಲ್ಲ. ಇವತ್ತು ಕಾಂಗ್ರೆಸ್‌ನ ಉಚಿತ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡಿ ಜನರಿಗೆ ಮೋಸ ಮಾಡಿ ಮತವನ್ನು ಪಡೆಯಲು ಪ್ರಯತ್ನಿಸುತ್ತಿದೆ ಎಂದರು.

ಆದರೆ ಜನರಿಗೆ ಗೊತ್ತು ಕಳೆದ 9.5 ವರ್ಷದಲ್ಲಿ ಮತದಾರನಿಗೆ ನೀಡಿದ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಜನರು ಇವರನ್ನು ತಿರಸ್ಕರಿಸುತ್ತಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Vishwa News 24

Recent Posts

ಎಸ್‌ಐಆರ್‌ ವಿವಾದ: ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡಿದರೆ ರಾಜ್ಯಾದ್ಯಂತ ಹೋರಾಟ :ಯಡಿಯೂರಪ್ಪ ಎಚ್ಚರಿಕೆ – vishwanews24

ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…

23 hours ago

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ – vishwanews24

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ, 18 ಲಕ್ಷ ಮೌಲ್ಯದ ಸೊತ್ತು…

23 hours ago

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ – vishwanews24

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ…

24 hours ago

ಕಾರ್ಕಳ : ಅ. 5 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ – vishwanews24

ಕಾರ್ಕಳ : ಅ. 05 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ…

1 day ago

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ – vishwanews24

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ…

1 day ago

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ – vishwanews24

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ ನವದೆಹಲಿ : ದುಬೈನಿಂದ…

1 day ago