ಉಡುಪಿ : ಇನ್ಸ್ಟಾಗ್ರಾಮ್ ಪೋಸ್ಟ್ ನೋಡಿ ಬಾರ್ಗೆ ದಾಳಿ ಮಾಡಿದ ಮಣಿಪಾಲ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ.
ಬಾರ್‌ವೊಂದರಲ್ಲಿ ಅನುಮತಿ ಇಲ್ಲದೆ ಡಿಜೆ ಪಾರ್ಟಿ ಮಾಡುತ್ತಿದ್ದ ಮಣಿಪಾಲದ ವಿದ್ಯಾರ್ಥಿಗಳು ಪಾರ್ಟಿ ಮಾಡಿದ ಹಾಗೂ ಹುಕ್ಕಾ, ಮದ್ಯ ಸೇವನೆಯ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದರು. ವೀಕೆಂಡ್ ಬಂದೋಬಸ್ತ್ ನಲ್ಲಿದ್ದ ಪೊಲೀಸರು ವಿಷಯ ತಿಳಿಯುತ್ತಿದ್ದಂತೆ ಮಿಂಚಿನ ಕಾರ್ಯಾಚರಣೆ ನಡೆಸಿ ಬಾರ್ ಮೇಲೆ ದಾಳಿ ನಡೆಸಿದ್ದಾರೆ.
ಇನ್ನು ಮಣಿಪಾಲ ವೃತ್ತ ನಿರೀಕ್ಷಕ ದೇವರಾಜ್ ನೇತೃತ್ವದ ತಂಡ ಉಡುಪಿ ತಾಲೂಕಿನ ಮಣಿಪಾಲ ಸಮೀಪದ ವಿದ್ಯಾನಗರದಲ್ಲಿರುವ ಎಸ್ ಸ್ಟೇಸಿ ಬಾರ್ ಮೇಲೆ ದಾಳಿ ನಡೆಸಿದೆ. ಈ ವೇಳೆ ಅನುಮತಿ ಇಲ್ಲದೆ ಪಾರ್ಟಿ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ. ಹಾಗೂ ಬಾರ್ನಲ್ಲಿ ಡಿಜೆ ಪಾರ್ಟಿ ಮಾಡಲು ಅನುಮತಿ ನೀಡಿದ ಬಾರ್ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರತಿ ವೀಕೆಂಡ್ನಲ್ಲೂ ಮಣಿಪಾಲ ಪೊಲೀಸರು ಮಣಿಪಾಲದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ವಾಣಿಜ್ಯ LPG ಸಿಲಿಂಡರ್ ದರದಲ್ಲಿ ಭಾರೀ ಇಳಿಕೆ : ಇಂದಿನಿಂದಲೇ ಪರಿಷ್ಕೃತ ದರ ಜಾರಿ ನವದೆಹಲಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಪೂರೈಕೆ…
ಆಟೋ ಚಾಲಕರಿಗೆ ಸಿಹಿ ಸುದ್ದಿ: ಎಲ್‌ಪಿಜಿ ದರ 10 ರೂ. ಇಳಿಕೆ ಬೆಂಗಳೂರು: ನಿರಂತರ ಎಲ್‌ಪಿಜಿ ದರ ಏರಿಕೆಯಿಂದ ಕಂಗಾಲಾಗಿದ್ದ ಆಟೋ…
ರಾಮ ಮಂದಿರದ ದೇಣಿಗೆ ಹಣ ದುರುಪಯೋಗ ಆರೋಪ - ಸಿಎಂ ಯೋಗಿ ಯಾರ ತಪ್ಪನ್ನೂ ಸಹಿಸಲ್ಲ : ಸಿ.ಟಿ.ರವಿ ಬೆಂಗಳೂರು:…
ಮಂಗಳೂರು: ಬೈಕಂಪಾಡಿ ದರೋಡೆ ಪ್ರಕರಣಕ್ಕೆ ಟ್ವಿಸ್ಟ್ - ವಾಹನವನ್ನು ಬಿಟ್ಟು ಪರಾರಿಯಾದ ಆರೋಪಿಗಳು ; ಕಾರು ಪತ್ತೆ ಮಂಗಳೂರು: ಬೈಕಂಪಾಡಿ…
ಮಂಗಳೂರು: ಮನೆ ಮೇಲೆ ತಡೆಗೋಡೆ ಕುಸಿತ; ಇಬ್ಬರು ಮಕ್ಕಳು ಸೇರಿ ಮೂವರು ದುರ್ಮರಣ ಮಂಗಳೂರು: ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯ…
ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ.. ನಾನು ಯಾವುದೇ ತಪ್ಪು ಮಾಡಿಲ್ಲ, ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ.. ನಾನು…