Featured

ಉಡುಪಿ : ಈ ಬಾರಿ ಸೀ ಫೋಕ್ (Sea Folk) ಮತ್ತೊಂದು ವಿಭಿನ್ನ ವೇಷದಲ್ಲಿ ರವಿ ಕಟಪಾಡಿ – Vishwanews24

ಉಡುಪಿ : ಈ ಬಾರಿ ಸೀ ಫೋಕ್ (Sea Folk) ಮತ್ತೊಂದು ವಿಭಿನ್ನ ವೇಷದಲ್ಲಿ ರವಿ ಕಟಪಾಡಿ

ಉಡುಪಿ:  ಜಿಲ್ಲೆಯ ಕಾಪು ತಾಲೂಕಿನ ರವಿ ಕಟಪಾಡಿ ಅವರು ಪ್ರತಿ ವರ್ಷ ಶ್ರೀ ಕೃಷ್ಣ ಜನ್ಮಾಷ್ಟಮಿಗೆ  ವಿಭಿನ್ನ ವೇಷಗಳನ್ನು ತೊಡುತ್ತಾರೆ. ಕಳೆದ ಏಳು ವರ್ಷಗಳಿಂದ ನಿರಂತರವಾಗಿ ವಿಭಿನ್ನ ವೇಷಭೂಷಣ ತೊಟ್ಟು ಅಷ್ಟಮಿ ಮತ್ತು ವಿಟ್ಲಪಿಂಡಿ ಮಹೋತ್ಸ ದಿನ ಒಂದು ಉದ್ದೇಶ ಇಟ್ಟುಕೊಂಡು ಜನರ ಮಧ್ಯೆ ಹೋಗುತ್ತಾರೆ. ರವಿ ಹಾಕುವ ವೇಷ ಸ್ವಂತಕ್ಕಲ್ಲ, ಪರರ ಹಿತಕ್ಕಾಗಿ ಹಾಗೂ ಕಷ್ಟದ ಪರಿಹಾರಕ್ಕಾಗಿ ಆಗಿರುತ್ತದೆ.

ರವಿ ಈವರೆಗೆ ಏಳು ವಿಭಿನ್ನ ವೇಷಗಳನ್ನು ತೊಟ್ಟಿದ್ದು ಒಂದು ಕೋಟಿ ಹದಿಮೂರು ಲಕ್ಷ 70 ಸಾವಿರ ರುಪಾಯಿ ಜನರಿಂದ ಸಂಗ್ರಹಿಸಿದ್ದಾರೆ. ಒಂದು ರೂಪಾಯಿ ಸ್ವಂತ ಖರ್ಚಿಗೆ ಇಟ್ಟುಕೊಳ್ಳದ ರವಿ, ಎಲ್ಲವನ್ನೂ 113 ಅನಾರೋಗ್ಯ ಪೀಡಿತ ಕುಟುಂಬಗಳಿಗೆ ದಾನ ಮಾಡಿದ್ದಾರೆ. ಈ ಬಾರಿ ಮತ್ತೊಂದು ವಿಭಿನ್ನ ವೇಷದ ಮುಂದೆ ಪ್ರತ್ಯಕ್ಷ ಆಗಲಿದ್ದಾರೆ.

ಸಮಾಜ ಸೇವೆ ಮಾಡಿ ನೊಂದವರ ಮುಖದಲ್ಲಿ ನಗು ಮೂಡಿಸಿದ ರವಿ ಮನಸ್ಸಿಗೆ ಈ ಬಾರಿ ನೋವಾಗಿದೆ. ವೇಷ ಹಾಕಿ ಸಂಗ್ರಹಿಸಿದ ಹಣದಿಂದ ಕೋಟಿ ರೂಪಾಯಿಯ ಮನೆ ಕಟ್ಟಿಸಿಕೊಳ್ಳುತ್ತಿದ್ದಾನೆ ಎಂದು ಕೆಲವರು ಕುಹಕವಾಡಿದ್ದಾರೆ. ಈ ಬಾರಿ ನಾನು ವೇಷ ಹಾಕುವುದಿಲ್ಲ ಎಂದು ರವಿ ನಿರ್ಧರಿಸಿದ್ದರು. ರವಿ ಫ್ರೆಂಡ್ಸ್ ಮೀಟಿಂಗ್ ಮಾಡಿ ಊರ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ನಮ್ಮ ಕೆಲಸ ನಾವು ಮಾಡೋಣ ಎಂದು ಈ ಬಾರಿಯೂ ವೇಷ ಹಾಕಲು ನಿರ್ಧರಿಸಿದ್ದಾರೆ.

ನಮ್ಮ ಪಬ್ಲಿಕ್ ಹೀರೋ ರವಿ ಕಟಪಾಡಿ ಈ ಬಾರಿ ಸೀ ಫೋಕ್ (Sea Folk) ಎಂಬ ಹಾಲಿವುಡ್ ಮೂವಿಯ ಒಂದು ಫಿಕ್ಷನ್ ಪಾತ್ರವನ್ನು ಹೋಲುವ ವೇಷ ಹಾಕಲಿದ್ದಾರೆ. ಕುಂದಾಪುರ ಮೂಲದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎರಡು ವರ್ಷದ ಮಗುವಿಗೆ ರವಿ ಸಹಾಯ ಮಾಡುವ ಮಾತು ನೀಡಿದ್ದಾರೆ. ಚಿಕಿತ್ಸೆಗೆ 15 ಲಕ್ಷ ರೂಪಾಯಿ ಬೇಕಾಗಿದ್ದು, ರವಿ ತನ್ನ ಕೈಲಾದ ಸಹಾಯ ಮಾಡಲಿದ್ದಾರೆ.

Vishwa News 24

Recent Posts

ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ – vishwanews24

ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ ಬೆಳ್ತಂಗಡಿ: ಕಲೆಯ ಪ್ರದರ್ಶನದಲ್ಲಿ ಕೆಲವೊಮ್ಮೆ ಪ್ರೇಕ್ಷಕರ ವರ್ತನೆ…

2 days ago

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ – vishwanews24

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ ಮಂಗಳೂರು: ಯಕ್ಷಗಾನ…

3 days ago

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ – vishwanews24

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…

3 days ago

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ – vishwanews24

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…

3 days ago

ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್ – vishwanews24

ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ  :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ  ಗೌರವ ಡಾಕ್ಟರೇಟ್ ಮಂಗಳೂರು…

3 days ago

ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ – vishwanews24

ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…

3 days ago