Featured

ಉಡುಪಿ: ಉಚಿತ ಪೊಳ್ಳು ಭಾಗ್ಯಗಳ ಆಮಿಷ ಒಡ್ಡಿರುವ ಭ್ರಷ್ಟ ಕಾಂಗ್ರೆಸ್ಸಿಗೆ ಸೋಲು ಖಚಿತ : ಕುಯಿಲಾಡಿ ಸುರೇಶ್ – Vishwanews24

ಉಡುಪಿ: ಉಚಿತ ಪೊಳ್ಳು ಭಾಗ್ಯಗಳ ಆಮಿಷ ಒಡ್ಡಿರುವ ಭ್ರಷ್ಟ ಕಾಂಗ್ರೆಸ್ಸಿಗೆ ಸೋಲು ಖಚಿತ : ಕುಯಿಲಾಡಿ ಸುರೇಶ್

ಉಡುಪಿ: ಮೇ 10ರಂದು ಕರ್ನಾಟಕ ರಾಜ್ಯ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಗೆ ಜಿಲ್ಲೆಯ ಐದು ಸ್ಥಾನಗಳ ಸಹಿತ ರಾಜ್ಯದಲ್ಲಿ 150ಕ್ಕೂ ಹೆಚ್ಚಿನ ಸ್ಥಾನಗಳ ಗೆಲುವು ಖಚಿತ; ಉಚಿತ ಪೊಳ್ಳು ಭಾಗ್ಯಗಳ ಆಮಿಷ ಒಡ್ಡಿರುವ ಭ್ರಷ್ಟ ಕಾಂಗ್ರೆಸ್ಸಿಗೆ ಸೋಲು ಖಚಿತ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ಐತಿಹಾಸಿಕ ಮೀಸಲಾತಿ ಮತ್ತು ಒಳ ಮೀಸಲಾತಿ ಘೋಷಣೆಯ ಸಹಿತ ವಿವಿಧ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಹಾಗೂ ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜಾರಿಗೆ ತಂದಿರುವ ಅನೇಕ ಜನಪರ ಯೋಜನೆಗಳು, ಅಭಿವೃದ್ಧಿ ಕೆಲಸ ಕಾರ್ಯಗಳು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಾಲಿಗೆ ವರದಾನವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಭ್ರಷ್ಟಾಚಾರದ ಗಂಗೋತ್ರಿ ಎಂದೇ ಪ್ರಚಲಿತವಾಗಿರುವ ಕಾಂಗ್ರೆಸ್ ತನ್ನ ಸ್ವಯಂಕೃತ ದೇಶ ವಿರೋಧಿ, ಹಿಂದೂ ವಿರೋಧಿ ನೀತಿಗಳಿಂದ ಪ್ರಸಕ್ತ ಚುನಾವಣೆಯಲ್ಲಿ ಹೀನಾಯವಾಗಿ ಸೋತು ರಾಜ್ಯದಲ್ಲೂ ಮೂಲೆಗುಂಪಾಗಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಚುನಾವಣಾ ಪೂರ್ವಸಿದ್ಧತೆಗಳ ಅಂಗವಾಗಿ ಜಿಲ್ಲೆಯಾದ್ಯಂತ ನಡೆದಂತಹ ಬೂತ್ ವಿಜಯ ಅಭಿಯಾನ, ವಿಜಯ ಸಂಕಲ್ಪ ಅಭಿಯಾನ, ವಿಜಯ ಸಂಕಲ್ಪ ಯಾತ್ರೆ ಮುಂತಾದ ಅರ್ಥಪೂರ್ಣ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿರುವ ಬೃಹತ್ ಜನ ಸಮೂಹ ವಿಧಾನಸಭಾ ಚುನಾವಣೆಯ ಭರ್ಜರಿ ವಿಜಯದ ಸಂಕಲ್ಪಕ್ಕೆ ಶಕ್ತಿ ತುಂಬಿದೆ ಎಂದಿದ್ದಾರೆ.

ಅತ್ಯಂತ ವಿಶ್ವಾಸದಿಂದ ಸಂಘಟಿತ ಪ್ರಯತ್ನದ ಮೂಲಕ ವಿಧಾನಸಭಾ ಚುನಾವಣೆಯನ್ನು ಸಮರ್ಪಕ ರೀತಿಯಲ್ಲಿ ಎದುರಿಸಲು ಜಿಲ್ಲಾ ಬಿಜೆಪಿ ಸರ್ವಸನ್ನದ್ಧ ವಾಗಿದೆ. ಪಕ್ಷ ಘೋಷಿಸುವ ಅಭ್ಯರ್ಥಿಗಳ ದೊಡ್ಡ ಅಂತರದ ಗೆಲುವಿಗೆ ಸಮಸ್ತ ಕಾರ್ಯಕರ್ತ ಬಂಧುಗಳು ಅತ್ಯಂತ ಬದ್ಧತೆ ಮತ್ತು ಕ್ರಿಯಾಶೀಲತೆಯಿಂದ ಕೈಜೋಡಿಸಲಿದ್ದಾರೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Vishwa News 24

Recent Posts

ಕಸದ ಚೀಲ – ವಿಭಿನ್ನ ಕಥೆಯ ಮೂಲಕ ಗಮನ ಸೆಳೆದ ಉಡುಪಿಯ ಯುವ ಬರಹಗಾರ ಸುಮಂತ್ ಗಾಣಿಗ – vishwanews24

‘ಕಸದ ಚೀಲ’ದ ಮೂಲಕ ವಿಭಿನ್ನ ಕಥನ – ಉಡುಪಿಯ ಸುಮಂತ್ ಗಾಣಿಗ ಅವರ ಬರವಣಿಗೆಗೆ ಮೆಚ್ಚುಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ…

31 minutes ago

ಎಲ್ಲಾ ಮಾದರಿಯ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಹರ್ಮನ್‌ಪ್ರೀತ್ ಕೌರ್ – vishwanews24

ಎಲ್ಲಾ ಮಾದರಿಯ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಹರ್ಮನ್‌ಪ್ರೀತ್ ಕೌರ್ "ರಕ್ತ, ಬೆವರು ಹರಿಸಿ ಸೇವೆ ಸಲ್ಲಿಸಿದ್ದೇನೆ" : ಸಾಮಾಜಿಕ ಜಾಲತಾಣದಲ್ಲಿ…

1 hour ago

ಉಡುಪಿ: ಅ.8 ರಂದು ನೇರ ಸಂದರ್ಶನ – vishwanews24

ಉಡುಪಿ: ಅ.8 ರಂದು ನೇರ ಸಂದರ್ಶನ      ಉಡುಪಿ: ನಗರದ ಶಾಂತ ಎಲೆಕ್ಟಿçಕಲ್ಸ್ ಪ್ರೆöÊ.ಲಿ., ಆಭರಣ ಜುವೆರ‍್ಸ್ ಹತ್ತಿರ, ಕಾರ್ಪೋರೇಶನ್ ಬ್ಯಾಂಕ್…

2 hours ago

ಹಳೆಕೋಟ–ಕಡವಾಡ ಕ್ರಾಸ್ ರಸ್ತೆ ದುರಸ್ತಿ ಆಗ್ರಹಿಸಿ ಜಿಲ್ಲಾಧಿಕಾರಿಗೆ ಕರವೇ ಮನವಿ – vishwanews24

ಹಳೆಕೋಟ–ಕಡವಾಡ ಕ್ರಾಸ್ ರಸ್ತೆ ದುರಸ್ತಿ ಆಗ್ರಹಿಸಿ ಜಿಲ್ಲಾಧಿಕಾರಿಗೆ ಕರವೇ ಮನವಿ ಕಾರವಾರ  ಇಳಕಲ್ ಕೈಗಾ ರಾಜ್ಯ ರಸ್ತೆಯ ಹಳೆಕೋಟದಿಂದ  ಕಡವಾಡ…

2 hours ago

ಪುತ್ತೂರು: ಹಿಂಸಾತ್ಮಕ ರೀತಿಯಲ್ಲಿ ಕೇರಳಕ್ಕೆ ಅಕ್ರಮವಾಗಿ ಜಾನುವಾರುಗಳ ಸಾಗಾಟ ; ಓರ್ವ ಅರೆಸ್ಟ್‌, ಇಬ್ಬರು ಪರಾರಿ – vishwanews24

ಪುತ್ತೂರು: ಹಿಂಸಾತ್ಮಕ ರೀತಿಯಲ್ಲಿ ಕೇರಳಕ್ಕೆ ಅಕ್ರಮವಾಗಿ ಜಾನುವಾರುಗಳ ಸಾಗಾಟ ; ಓರ್ವ ಅರೆಸ್ಟ್‌, ಇಬ್ಬರು ಪರಾರಿ ಪುತ್ತೂರು: ಯಾವುದೇ ಪರವಾನಿಗೆಯಿಲ್ಲದೆ…

2 hours ago

ದುರಸ್ತಿ ಕಾಮಗಾರಿ: ಅ.7ರಂದು ಹಂದಾಡಿ ರೈಲ್ವೆ ಗೇಟ್ ಬಂದ್ -vishwanews24

ದುರಸ್ತಿ ಕಾಮಗಾರಿ: ಅ.7ರಂದು ಹಂದಾಡಿ ರೈಲ್ವೆ ಗೇಟ್ ಬಂದ್ ಕುಂದಾಪುರ : ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್‌ನಲ್ಲಿ ಅಗತ್ಯ ದುರಸ್ತಿ…

15 hours ago